Advertisement
ತ್ರಿಪುರ 59/59 : ಬಿಜೆಪಿ+ 43, ಕಾಂಗ್ರೆಸ್ 0, ಸಿಪಿಎಂ 16, ಸಿಪಿಐ 0, ಇತರರು 0.
Related Articles
Advertisement
ತ್ರಿಪುರದಲ್ಲಿ ಚುನಾವಣೆಗೆ ಒಳಪಟ್ಟ 59 ಸ್ಥಾನಗಳ ಪೈಕಿ ಬಿಜೆಪಿ 43 ಸ್ಥಾನಗಳಲ್ಲಿ ಮುಂದಿದ್ದು ಅದು ಸರಕಾರ ರಚಿಸುವುದು ಖಚಿತವೇ ಇದೆ.
ಹಿಂದಿನ ತ್ರಿಪುರ ಸರಕಾರದಲ್ಲಿ 50 ಸ್ಥಾನಗಳನ್ನು ಹೊಂದಿದ್ದ ಎಡ ಪಕ್ಷ ಈ ಬಾರಿ ಕೇವಲ 16 ಸ್ಥಾನಗಳಲ್ಲಿ ಮುಂದಿದೆ. ಚಾರ್ಲಿಯಾಮ್ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ಮೃತಪಟ್ಟ ಕಾರಣ ಅಲ್ಲಿನ ಚುನಾವಣೆಯನ್ನು ಮುಂದೂಡಲಾಗಿತ್ತು. ಅದನ್ನು ಇನ್ನು ಇದೇ ಮಾರ್ಚ್ 12ರಂದು ನಡೆಸಲಾಗುವು.
ತ್ರಿಪುರದಲ್ಲಿ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಮಾಣಿಕ್ ಸರ್ಕಾರ ಅವರ ಕನಸು ಭಗ್ನವಾಗಿದೆ; ಎಡ ಪಕ್ಷಕ್ಕೆ ಆ ಮೂಲಕ ಭಾರೀ ದೊಡ್ಡ ಹೊಡೆತ ನೀಡಲಾಗಿದೆ. ಈ ವರೆಗೆ ದೇಶದಲ್ಲಿ ತ್ರಿಪುರ ಮತ್ತು ಕೇರಳದಲ್ಲಿ ಮಾತ್ರವೇ ಎಡ ಪಕ್ಷದ ಆಳ್ವಿಕೆ ಇತ್ತು. ಬಿಜೆಪಿಯ ರಾಮ ಮಾಧವ್ ಹೇಳಿರುವ ಪ್ರಕಾರ, ತ್ರಿಪುರ ಸುಂದರಿ ಮಾತೆಯ ಆಶೀರ್ವಾದದಿಂದಾಗಿ ಬಿಜೆಪಿ ತ್ರಿಪುರದಲ್ಲಿ ಕ್ರಾಂತಿಕಾರಿ ಫಲಿತಾಂಶ ಸಾಧಿಸಿದೆ.
ಮೇಘಾಲಯದಲ್ಲಿ :
ಮೇಘಾಲಯದಲ್ಲಿ ಈಗ ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ 20 ಸ್ಥಾನಗಳಲ್ಲಿ ಮುಂದಿದೆ; ಆದರೆ ಸರಕಾರ ರಚಿಸಲು ಅಗತ್ಯವಿರುವ 31ರ ಮ್ಯಾಜಿಕ್ ನಂಬರ್ ಸಾಧಿಸಲು ವಿಫಲವಾಗಿದೆ.
ಇಲ್ಲಿಯೂ ಕೂಡ 59 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ವಿಲಯಂನಗರ ಕ್ಷೇತ್ರದ ಅಭ್ಯರ್ಥಿಯ ಹತ್ಯೆಯಾದ ಕಾರಣ ಚುನಾವಣೆಯನ್ನು ರದ್ದುಪಡಿಸಲಾಗಿತ್ತು.
ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಹೊರತಾಗಿಯೂ ಅದು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾದ ಅನಿವಾರ್ಯತೆ ಒದಗಿದೆ.
ಇಲ್ಲಿನ ಅಂತಿಮ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ 21 ಸ್ಥಾನಗಳಲ್ಲಿ ಮುಂದಿದೆ; ಕೇಂದ್ರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ, ಮಾಜಿ ಲೋಕಸಭಾ ಸ್ಪೀಕರ್ ಪಿ ಎ ಸಂಗ್ಮಾ ಸಂಸ್ಥಾಪಿತ ಎನ್‌ಪಿಪಿ 19 ಸ್ಥಾನಗಳಲ್ಲಿ ಮುಂದಿದೆ; ಬಿಜೆಪಿ 2ರಲ್ಲಿ ಮುಂದಿದೆ.
ಎನ್‌ಡಿಎ ಪಾಲುದಾರನಾಗಿರುವ ಹಾಗೂ ಪ್ರತ್ಯೇಕವಾಗಿ ಚುನಾವಣಾ ಕಣಕ್ಕೆ ಇಳಿದಿರುವ ಯುಡಿಪಿ, ಆರು ಸ್ಥಾನಗಳಲ್ಲಿ ಮುಂದಿದೆ; ನಿರ್ಣಾಯಕರಾಗಬಲ್ಲ ಪಕ್ಷೇತ್ರರು 11 ಸ್ಥಾನಗಳಲ್ಲಿ ಮುಂದಿದ್ದಾರೆ !
ಕಾಂಗ್ರೆಸ್ ಪಕ್ಷವನ್ನು ಹೊರಗಿಡುವ ಸಲುವಾಗಿ ಇಲ್ಲಿ ಎನ್‌ಡಿಎ ಪಾಲುದಾರ ಪಕ್ಷಗಳು ಚುನಾವಣೋತ್ತರ ಹೊಂದಾಣಿಕೆ ನಡೆಸುವ ಸಂಭವವಿದೆ. ಇದನ್ನು ಬಿಜೆಪಿಯ ಮೇಘಾಲಯ ಪ್ರಭಾರ ನಳಿನ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ : ಮೇಘಾಲಯದಲ್ಲಿ ಜನರು ಕಾಂಗ್ರೆಸ್ ವಿರುದ್ಧ ಮತ ಹಾಕಿದ್ದಾರೆ; ಅಂತೆಯೇ ಕಾಂಗ್ರೆಸ್ ಹೊರಗಿಡಲು ಬಿಜೆಪಿ ಮತ್ತು ಇತರ ಪಕ್ಷಗಳು ಸೇರಿಕೊಂಡು ಚುನಾವಣೋತ್ತರ ಮೈತ್ರಿ ನಡೆಸಲಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ :
ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾಗಿರುವ ಹೊಸದಾಗಿ ಸಂಸ್ಥಾಪಿಸಲ್ಪಟ್ಟ ಎನ್‌ಡಿಪಿಪಿ ಮುಂದಿವೆ. ಎನ್‌ಡಿಪಿಪಿ 26 ಸ್ಥಾನಗಳಲ್ಲಿ ಮುಂದಿದೆ. ಎನ್‌ಡಿಪಿಪಿ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ನೀಫಿಯೂ ರಿಯೋ ಅವರೇ ನಾಗಾಲ್ಯಾಂಡ್‌ನ ಮುಂದಿನ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಟಿಆರ್ ಝೆಲಿಯಾಂಗ್ ಅವರ ಎನ್‌ಪಿಎಫ್ 28 ಸ್ಥಾನಗಳಲ್ಲಿ ಮುಂದಿದೆ. ಹಿಂದೆ ಎನ್‌ಪಿಎಫ್ ಬಿಜೆಪಿ ಜತೆ ಮೈತ್ರಿ ಹೊಂದಿತ್ತು. ಆದರೆ ಚುನಾವಣೆಗೆ ಮುನ್ನ ಬಿಜೆಪಿ ಆ ಮೈತ್ರಿಯನ್ನು ಮುರಿದು, ಎನ್‌ಡಿಪಿಪಿ ಜತೆಗೆ ಮೈತ್ರಿ ಬೆಳೆಸಿಕೊಂಡಿತು.