Advertisement

ರಾಹುಲ್ ಗಂಭೀರ ರಾಜಕಾರಣಿಯಾಗಿದ್ದರೆ ಹಿಮಾಚಲದಲ್ಲಿರಬೇಕಿತ್ತು: ತೇಜಸ್ವಿ ಸೂರ್ಯ

08:01 PM Nov 04, 2022 | Team Udayavani |

ಮುಂಬೈ : ರಾಹುಲ್ ಗಾಂಧಿ ಗಂಭೀರ ರಾಜಕಾರಣಿಯಾಗಿದ್ದರೆ ಅಥವಾ ಅವರ ಪಕ್ಷ ಗಂಭೀರವಾಗಿದ್ದರೆ ಅವರು ಹಿಮಾಚಲ ಪ್ರದೇಶ ಅಥವಾ ಗುಜರಾತ್ ಚುನಾವಣೆಗೆ ತಯಾರಿ ನಡೆಸುತ್ತಿದ್ದರು ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಶುಕ್ರವಾರ ಹೇಳಿದ್ದಾರೆ.

Advertisement

ಇಂದು ಮುಂಬೈನ ವರ್ಲಿಯಲ್ಲಿ ಬಿಜೆಪಿ ಯುವಮೋರ್ಚಾ ಯೂತ್ ವಾರಿಯರ್ಸ್ ಶಾಖೆಗೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ವಿಫಲವಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಭಾರತ್ ಜೋಡೋ ಯಾತ್ರೆಯು ನಾಯಕ ವೃತ್ತಿ ವಿಫಲವಾದ ಬಳಿಕ ಪುನರುಜ್ಜೀವನದ ವಿಫಲ ಪ್ರಯತ್ನವಾಗಿದೆ ಎಂದರು.

ಅವಕಾಶವಾದಿ ರಾಜಕಾರಣಕ್ಕೆ ಶಿವಸೇನೆಯ ಒಂದು ಬಣ ಬಲಿಯಾಗಿದೆ. ಅವರಿಗೆ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಅವರು ‘ವಸೂಲಿ’ ಸೇನೆಯಾದರು. ನಿಜವಾದ ಶಿವಸೇನೆ ಬಿಜೆಪಿ ಜೊತೆಗಿದ್ದು, ಏಕನಾಥ್ ಶಿಂಧೆ ನೇತೃತ್ವದಲ್ಲಿ ದೇಶಕ್ಕಾಗಿ ಕೆಲಸ ಮಾಡುತ್ತಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next