ಮುಂಬಯಿ: ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ವಾರ್ಷಿಕ ಕ್ರೀಡೋತ್ಸವವು ಡಿ. 3ರಂದು ಉಪನಗರದ ಡೊಂಬಿವಲಿ ಪೂರ್ವದ ಡೊಂಬಿವಲಿ ಜಿಮಾVನ ಕ್ರೀಡಾಂಗಣ ವೈವಿಧ್ಯಮಯ ಕ್ರೀಡೆಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ದಿನೇಶ್ ಭಂಡಾರಿ ಹಳೆಯಂಗಡಿ, ಎರ್ಮಾಳ್ ಶೇಖರ್ ಭಂಡಾರಿ ಸಾಕಿನಾಕ, ಗಂಗಾಧರ್ ಭಂಡಾರಿ ಭಿರ್ತಿ, ಸದಾನಂದ ಭಂಡಾರಿ ಅಸಲ್ಫಾ ಮತ್ತಿತರರ ಸಹಯೋಗದಲ್ಲಿ ದಿನವಿಡಿ ನಡೆಸಲ್ಪಟ್ಟ ಕ್ರೀಡೋತ್ಸವನ್ನು ಸಮಿತಿಯ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್. ಭಂಡಾರಿ ಪದಾಧಿಕಾರಿಗಳೊಂದಿಗೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಂಜೆ ನಡೆಸಲ್ಪಟ್ಟ ಕ್ರೀಡೋತ್ಸವ ಸಮಾರೋಪದಲ್ಲಿ ಯುವ ರಾಜಕಾರಣಿ, ಶಿವಸೇನಾ ಮುಂದಾಳು ಕಿಶೋರ್ ಭಂಡಾರಿ ಅಂಬರನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಪಾರಿತೋಷಕಗಳನ್ನು ಪ್ರದಾನಿಸಿ ಅಭಿನಂದಿಸಿದರು.
ಮುಖ್ಯ ಅತಿಥಿ ಕಿಶೋರ್ ಭಂಡಾರಿ ಅವರು ಮಾತನಾಡಿ, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಕ್ರೀಡೆಯನ್ನು ಲಘುವಾಗಿ ಪರಿಗಣಿಸದೆ ಸಮಾಜ ಮುುಖೀಯಾಗಿ ತಿಳಿದುಕೊಳ್ಳಬೇಕು. ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಉತ್ಸುಕರಾಗಿ ಸಮುದಾಯವನ್ನು ಮುನ್ನಡೆಸಬೇಕು ಎಂದರು.
ಆರೋಗ್ಯಮಯ ಜೀವನಕ್ಕೆ ಕ್ರೀಡೆ
ಪೂರಕವಾಗಿದೆ ಆದುದರಿಂದ ಕ್ರೀಡಾ ಹವ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಇದಕ್ಕೆಲ್ಲಾ ಇಂತಹ ಕ್ರೀಡೋ ತ್ಸವ ಉತ್ತೇಜನಕಾರಿಯಾಗಿದೆ. ಇದೊಂದು ಸ್ವಸಮುದಾಯದೊಳಗಿನ ಕ್ರೀಡಾಸ್ಪರ್ಧೆಯಾಗಿದ್ದು, ಸೋಲು ಗೆಲುವುಗಳನ್ನು ಪರಿಗಣಿಸದೆ ಅವಕಾಶವನ್ನೇ ಮಾಪನವಾಗಿಸಿ ಉತ್ಸುಕತೆಯಿಂದ ಭಾಗವಹಿಸಿ ಕ್ರೀಡಾ ಮನೋಭಾವ ತೋರಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಅಧ್ಯಕ್ಷ ಶೇಖರ್ ಭಂಡಾರಿ ಅವರು ಕರೆ ನೀಡಿದರು.
ಈ ಸಂದರ್ಭ ಸಮಿತಿಯ ಗೌರವ ಕೋಶಾಧಿಕಾರಿ ಕರುಣಾಕರ ಜಿ. ಭಂಡಾರಿ, ಜತೆ ಕಾರ್ಯದರ್ಶಿ ಶಶಿಧರ್ ಡಿ. ಭಂಡಾರಿ, ಜತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಕೇಶ್ ಭಂಡಾರಿ, ರಮೇಶ್ ಭಂಡಾರಿ, ವಿಶ್ವನಾಥ ಭಂಡಾರಿ, ಕರುಣಾಕರ ಭಂಡಾರಿ, ಜಯ ಭಂಡಾರಿ, ಮಹಿಳಾ ವಿಭಾಗದ ಕಾರ್ಯದರ್ಶಿ ರೇಖಾ ಎ. ಭಂಡಾರಿ, ಮಹಿಳಾ ಸಮಿತಿಯ ಸದಸ್ಯರಾದ ಲಲಿತಾ ವಿ. ಭಂಡಾರಿ, ಶಾಲಿನಿ ರಮೇಶ್ ಭಂಡಾರಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಕಚ್ಚಾರು ನಾಗೇಶ್ವರ ದೇವರಿಗೆ ಆರತಿಗೈದು ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ವಿಜಯ ಆರ್. ಭಂಡಾರಿ ಸ್ವಾಗತಿಸಿ ಪ್ರಾರ್ಥನೆಗೈದರು. ಕ್ರೀಡಾ ಸಂಚಾಲಕ ಕೇಶವ ಭಂಡಾರಿ ಸಾರಥ್ಯದಲ್ಲಿ ನಡೆಸಲ್ಪಟ್ಟ ವಾರ್ಷಿಕ ಕ್ರೀಡಾ ಉತ್ಸವದಲ್ಲಿ ಜಯಶೀಲ ಭಂಡಾರಿ ಅವರು ಯೋಗ ಮತ್ತು ಪ್ರಹಸನವನ್ನು ಪ್ರದರ್ಶಿಸಿದರು. ಉಪಾಧ್ಯಕ್ಷರಾದ ನ್ಯಾಯವಾದಿ ರಾಮಣ್ಣ ಎಂ. ಭಂಡಾರಿ ಮತ್ತು ಪ್ರಭಾಕರ್ ಪಿ. ಭಂಡಾರಿ ಥಾಣೆ, ಅತಿಥಿಗಳಿಗೆ ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಜತೆ ಕಾರ್ಯದರ್ಶಿ ಪುರುಷೋತ್ತಮ ಜಿ. ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ ವಂದಿಸಿದರು.