Advertisement

ಭಂಡಾರಿ ಸೇವಾ  ಸಮಿತಿ ಮುಂಬಯಿ:ವಾರ್ಷಿಕೋತ್ಸವ 

03:15 PM Dec 28, 2017 | |

ಮುಂಬಯಿ: ನಾವೆಲ್ಲರೂ ತುಳುನಾಡ ದೈವದೇವರ ಪುಣ್ಯಭೂಮಿಯ ಜನರಾ ಗಿದ್ದು, ಇಲ್ಲಿ  ಉದರ ಪೋಷಣೆ ನಿಮಿತ್ತ ಉದ್ಯೋಗವನ್ನರಸಿ ಮಹಾರಾಷ್ಟ್ರದಾದ್ಯಂತ ನೆಲೆಯಾದವರು. ಆದರೆ ಭಂಡಾರಿ ಸಮುದಾಯವು ತಮ್ಮ ಕಸುಬನ್ನು ವೃತ್ತಿಜೀವನದೊಂದಿಗೆ ರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸಿ ಮೆರೆದವರು ಎನ್ನುವುದೇ ಸಮುದಾಯದ ವೈಶಿಷ್ಟÂ. ಇಂದಿನ ದಿನಗಳಲ್ಲಿ ಸೌರಭ್‌ ಭಂಡಾರಿಯನ್ನು ಪರಿಚಯಿಸಿ ಮತ್ತೂಂದು ಸಾಧಕ ನಟನನ್ನು ಗುರುತಿಸಿದ್ದು ಸಮಾಜದ ಗೌರವವನ್ನು  ಹೆಚ್ಚಿಸಿದೆ. ತುಳು ಚಿತ್ರರಂಗ ಸುಲಭವಲ್ಲ, ಇದಕ್ಕೆ ಕಡಂದಲೆ ಸುರೇಶ್‌ ಭಂಡಾರಿ ಅವರು ಹೆಜ್ಜೆಯನ್ನಿರಿಸಿದ್ದೇ ಬಹುದೊಡ್ಡ ಸಾಧನೆ. ಸಮಾಜ ಸೇವೆಯನ್ನು ಬರೇ ಸ್ವಸಮಾಜಕ್ಕೆ ಮೀಸಲಿಡಬಾರದು. ಸೇವೆ ಅನ್ನುವುದು ಸಮಗ್ರ ಸಮಾಜಕ್ಕೆ ಸಲ್ಲಬೇಕು ಎಂದು ಪನ್ವೇಲ್‌ ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ ನುಡಿದರು.

Advertisement

ಡಿ. 24ರಂದು ಘಾಟ್ಕೊàಪರ್‌ ಪೂರ್ವದ ಝವೇರಿಬೆನ್‌ ಪೋಪಟ್‌ಲಾಲ್‌ ಸಭಾಗೃಹದಲ್ಲಿ ನಡೆದ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಂಡಾರಿ ಸಮಾಜವು ಇನ್ನಷ್ಟು ಬೆಳೆಯಬೇಕು ಎಂದರು.

ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ್‌ ಎಸ್‌. ಭಂಡಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಮೇಲಿನ ಅಭಿಮಾನವೇ ನಮ್ಮನ್ನು ಸಂಘಟಿಸಲು ಸಾಧ್ಯ. ಸೇವಾಭಿಮಾನ ಇಲ್ಲದವರಿಂದ ಏನೂ ಅಪೇಕ್ಷಿಸಲು ಸಾಧ್ಯವಿಲ್ಲ.  ಕುಲದೇವರಾದ ಶ್ರೀ ಕಚ್ಚಾರು ನಾಗೇಶ್ವರ ದೇವರು ಎಲ್ಲರನ್ನೂ ಹರಸಲಿ. ಬಾಕೂìರಿನಲ್ಲಿ ನಡೆಯುವ ಅವರ ಸೇವೆಯಲ್ಲಿ ಮುಂಬಯಿಯಲ್ಲಿ  ನೆಲೆಯಾದ ಸರ್ವ ಭಂಡಾರಿ ಬಂಧುಗಳು ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸೋಣ ಎಂದರು.

ಕಚ್ಚಾರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ  ಸೋಮಶೇಖರ್‌ ಎಂ.ಭಂಡಾರಿ ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, 22 ವರ್ಷ ಈ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ.  15 ವರ್ಷದ ಬಳಿಕ ಮತ್ತೆ ಈ ಸಂಘದ ವೇದಿಕೆಯನ್ನು ಅಲಂಕರಿಸುತ್ತಿರುವುದಕ್ಕೆ ಹಿರಿಯ ಮುತ್ಸದ್ಧಿಗಳ ಸಹಯೋಗ ಕಾರಣ. ಮನೆಮನೆಗಳಿಗೆ ಹೋಗಿ ಸದಸ್ಯರನ್ನು ಒಗ್ಗೂಡಿಸುತ್ತಿದ್ದ ಸಂಕಷ್ಟದ ಕಾಲ ಅದಾಗಿತ್ತು. ನಾನು ಎಂದರೆ ಸಮಾಜ ಎಂದೂ ನಡೆಯದು, ನಾವು ಎಂದಾಗ ಎಲ್ಲವೂ ಸುಲಭ ಸಾಧ್ಯವಾಗುವುದು. ನಮ್ಮಲ್ಲಿಂದು ಹೀರೋ ಒಬ್ಬರು ತಾರಾಂಗಣದಲ್ಲಿ ಮೆರೆಯುತ್ತಿ¤ರುವುದು ಅಭಿನಂದನೀಯವಾಗಿದೆ ಎಂದು ನುಡಿದರು.

ಸಂಸ್ಥೆಯ ಉಪಾಧ್ಯಕ್ಷ ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ, ಗೌರವ ಪ್ರಧಾನ ಕಾರ್ಯದರ್ಶಿ ವಿಜಯ ಆರ್‌. ಭಂಡಾರಿ, ಗೌರವ ಕೋಶಾಧಿಕಾರಿ ಕರುಣಾಕರ ಜಿ. ಭಂಡಾರಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ  ಸುಂದರ್‌ ಜಿ. ಭಂಡಾರಿ, ಮಹಿಳಾ ವಿಭಾಗಾಧ್ಯಕ್ಷೆ ಶೋಭಾ ಸುರೇಶ್‌ ಭಂಡಾರಿ, ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್‌ ಭಂಡಾರಿ, ಕಾರ್ಯದರ್ಶಿ ರೇಖಾ ಎ. ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಅಂಬರ್‌ ಕ್ಯಾಟರರ್ ಚಲನ ಚಿತ್ರದ ನಾಯಕನಟ ಸೌರಭ್‌ ಎಸ್‌.ಭಂಡಾರಿ, ಸಕ್ರಿಯ ಕಾರ್ಯಕರ್ತ ರಮಾನಂದ ಭಂಡಾರಿ, ಸಂಘದ ಮಹಿಳಾ ವಿಭಾಗದ ಕೋಶಾಧಿಕಾರಿ,  ನ್ಯಾಯವಾದಿ ಕು| ಕ್ಷಮಾ ಆರ್‌. ಭಂಡಾರಿ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು.

Advertisement

ವಿದ್ಯಾರ್ಥಿ ವೇತನದ ಪ್ರಾಯೋಜಕ ರಲ್ಲೋರ್ವರಾಗಿದ್ದು ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಪುತ್ತೂರು ಪುಣೆ,  ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಜಯಶೀಲ ಯು. ಭಂಡಾರಿ, ಲತಾ ಭಂಡಾರಿ ಥಾಣೆ, ಸಂಗೀತಾ ಎಸ್‌. ಭಂಡಾರಿ, ಶ್ರೀನಿವಾಸ ಆರ್‌. ಕರ್ಕೇರ, ಅಶೋಕ್‌ ಸಸಿಹಿತ್ಲು ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್‌ ಪಿ. ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್‌ ಭಂಡಾರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೇಶವ ಭಂಡಾರಿ, ನಾರಾಯಣ ಭಂಡಾರಿ,   ರಾಕೇಶ್‌ ಭಂಡಾರಿ, ರಮೇಶ್‌ ಭಂಡಾರಿ, ವಿಶ್ವನಾಥ ಭಂಡಾರಿ, ಕರುಣಾಕರ ಭಂಡಾರಿ, ಮಹಿಳಾ ಉಪ ಕಾರ್ಯಾಧ್ಯಕ್ಷೆ ಅನುಶ್ರೀ ಶಿವರಾಮ ಭಂಡಾರಿ, ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯರಾದ ಲಲಿತಾ ವಿ. ಭಂಡಾರಿ, ಶಾಲಿನಿ ರಮೇಶ್‌ ಭಂಡಾರಿ, ಗುಲಾಬಿ ಕೃಷ್ಣ ಭಂಡಾರಿ, ಡಾ| ಶಿವರಾಮ ಕೆ. ಭಂಡಾರಿ ಸೇರಿದಂತೆ ನೂರಾರು  ಭಂಡಾರಿ ಬಾಂಧವರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ಸರಿತಾ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಶಾಲಿನಿ ಭಂಡಾರಿ ಪ್ರಾರ್ಥನೆಗೈದು, ಪ್ರತಿಭಾವಂತ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಸಂಘದ ಜೊತೆ ಕಾರ್ಯದರ್ಶಿ ಶಶಿಧರ್‌ ಡಿ. ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಪುರುಷೋತ್ತಮ ಜಿ. ಭಂಡಾರಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್‌. ಭಂಡಾರಿ ಸ್ವಾಗತಿಸಿ ವಂದಿಸಿದರು. ಸದಸ್ಯ-ಸದಸ್ಯೆಯರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಲಾವಿದ ಜಯಶೀಲ ಉಮೇಶ್‌ ಭಂಡಾರಿ ಮತ್ತು ತಂಡದಿಂದ ಡೊಂಬ ಯೋಗ ಹಾಗೂ “ತೆಲಿಕೆ ನಲಿಕೆ’ ಹಾಸ್ಯ ಪ್ರಹಸನ ಮತ್ತು ಘಾಟ್ಕೊàಪರ್‌ ಅಸಲ್ಫಾದ ಶ್ರೀ ಗೀತಾಂಬಿಕಾ ಕೃಪಾಪೋತ ಯಕ್ಷಗಾನ ಮಂಡಳಿಯವರಿಂದ “ಗದಾ ಯುದ್ಧ’  ಯಕ್ಷಗಾನ ಪ್ರದರ್ಶನಗೊಂಡಿತು.

ಭಂಡಾರಿ ಸಮಾಜದಲ್ಲಿ ಬಹಳಷ್ಟು ವಕೀಲರಿದ್ದಾರೆ. ಈ ಕಾರಣದಿಂದಲೇ ಅವರು ಕಾನೂನು ಬದ್ಧತೆಗೆ ಮಾದರಿಯಾಗಿದ್ದಾರೆ. ಕಲಾಸೇವೆಗೂ ಭಂಡಾರಿ ಬಂಧುಗಳ ಕೊಡುಗೆ ಬಹಳಷ್ಟಿದೆ. ಕೌಟುಂಬಿಕ ವಾತಾವರಣದ ಉದ್ದೇಶವಿರಿಸಿ ಆಯೋಜಿಸುವ ಇಂತಹ ಉತ್ಸವಗಳು ಒಗ್ಗಟ್ಟನ್ನು ಕ್ರೋಢಿಕರಿಸಬಲ್ಲವು. ಸಂಘಟನೆಯಲ್ಲಿ ಬಲಯುತರಾಗಿ ಮುನ್ನಡೆದರೆ ಹಿರಿಯರ ಕನಸು ನನಸಾಗುವುದು. ಭವಿಷ್ಯತ್ತಿನ ಪೀಳಿಗೆಗೆ  ಸಮಾಜ ವರದಾನವಾಗುತ್ತದೆ 
  – ನಿತ್ಯಾನಂದ ಡಿ. ಕೋಟ್ಯಾನ್‌ (ಅಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್‌ ಮುಂಬಯಿ).

ನಮ್ಮ ಸಮಾಜ ಚಿಕ್ಕದಾದರೂ ಕಾರ್ಯಚಟುವಟಿಕೆಗಳಿಂದ ದೊಡ್ಡದಾಗಿ ತೋರುತ್ತಿದೆ. ಸುರೇಶ್‌ ಭಂಡಾರಿ ನೇತೃತ್ವದ ಬಳಿಕ ಹೊಸ ಹೊಸ ಯೋಜನೆಗಳು ಮೂಡಿ ಯುವಜನಾಂಗ ಸಮುದಾಯದ ಜತೆ ಬೆರೆಯುತ್ತಿದ್ದಾರೆ. ಬಂಧುಗಳ ಒಗ್ಗೂಡುವಿಕೆಯೇ ಸಮುದಾಯಕ್ಕೆ  ದೊಡ್ಡ ಬೆಂಬಲವಾಗುತ್ತದೆ
– ಸದಾಶಿವ  ಭಂಡಾರಿ ಸಕ್ಲೇಶ್‌ಪುರ (ಅಧ್ಯಕ್ಷರು: ಭಂಡಾರಿ ಮಹಾ ಮಂಡಲ).

ನಮ್ಮ ಏಕತೆಯನ್ನು ಸೇವೆ ಮತ್ತು ಒಗ್ಗಟ್ಟಿನ ಮುಖೇನ ಪ್ರದರ್ಶಿಸಬೇಕು. ಸಮಾಜಮುಖೀ ಭೂಮಿಕೆಗೆ ಬಾರದೆ ತೆರೆಮರೆಯಲ್ಲಿದ್ದು ಟೀಕೆಗಳನ್ನು ಮಾಡುವುದರಿಂದ ಯಾರೂ ಏನೂ ಸಾಧಿಸಲಾರರು. ಸ್ವಸಮುದಾಯದ ಸರ್ವೋನ್ನತಿಯು ನಮ್ಮತನ ಮತ್ತು ಸ್ವಾಭಿಮಾನದಿಂದ ಮಾತ್ರ ಸಾಧ್ಯ. ಬರುವ ಮೇ 4ರಿಂದ 9ರವರೆಗೆ ಬಾಕೂìರಿನಲ್ಲಿ ನಡೆಯುವ ಭಂಡಾರಿ ಉತ್ಸವದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಶ್ರೀ ಕಚ್ಚಾರು ನಾಗೇಶ್ವರ  ದೇವರ ಕೃಪೆಗೆ ಪಾತ್ರರಾಗಿರಿ. ಈ ಹಿಂದೆಯೂ ಮುಂಬಯಿ ಭಂಡಾರಿಗಳ ಸಹಯೋಗ ಲಭಿಸಿದ್ದು ಮುಂದೆಯೂ ಅಧಿಕ ಸಂಖ್ಯೆಯಲ್ಲಿ ಸಹಕರಿಸುವ ಭರವಸೆ ನಮಗಿದೆ 
– ಕಡಂದಲೆ ಸುರೇಶ್‌ ಎಸ್‌.ಭಂಡಾರಿ (ಆಡಳಿತ ಮೊಕ್ತೇಸರರು: ಕಚ್ಚಾರುಶ್ರೀನಾಗೇಶ್ವರ ದೇವಸ್ಥಾನ ಬಾಕೂìರು).
 

Advertisement

Udayavani is now on Telegram. Click here to join our channel and stay updated with the latest news.

Next