Advertisement

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

12:59 PM Nov 22, 2024 | Team Udayavani |

ಬೆಳ್ತಂಗಡಿ: ಸುಮಾರು 200 ವರ್ಷಗಳ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸೇವೆ ಬಯಲಾಟವನ್ನು ನ.21ರಿಂದ ಮೇ 23ರ ವರೆಗೆ ಆಯೋಜಿಸಲಾಗಿದೆ.

Advertisement

7 ವರ್ಷಗಳಿಂದ ಸಂಜೆ 7ರಿಂದ ರಾತ್ರಿ 12 ಗಂಟೆ ವರೆಗೆ ಕಾಲಮಿತಿಯ ಬಯಲಾಟ ಪ್ರದರ್ಶನ ಆಯೋಜಿಸಲಾಗುತ್ತಿದೆ. ಇದಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ, ಪ್ರೋತ್ಸಾಹ ಬರುತ್ತಿದೆ. ಕಲಾವಿದರಿಗೂ ಹೆಚ್ಚಿನ ಅಧ್ಯಯನ, ಅಭ್ಯಾಸಕ್ಕೂ ಅನುಕೂಲವಾಗುತ್ತದೆ.

ಸಾಂಪ್ರದಾಯಿಕ ವೇಷಭೂಷಣಗಳು, ಜಾನಪದ ಶೈಲಿಯ ಪರಂಪರೆಯ ಪ್ರದರ್ಶನ, ಕೇವಲ ಪೌರಾಣಿಕ ಪ್ರಸಂಗಗಳ ಪ್ರದರ್ಶನವು ಮೇಳದ ವೈಶಿಷ್ಟ್ಯವಾಗಿದೆ. ಬಯಲಾಟದ ಮೂಲಕ ಧರ್ಮಪ್ರಭಾವನೆ ಹಾಗೂ ನೈತಿಕ ಮೌಲ್ಯಗಳ ಉದ್ದೀಪನಕ್ಕೂ ಪ್ರೋತ್ಸಾಹ ನೀಡಲಾಗುತ್ತದೆ.

ಬಯಲಾಟ ಪ್ರದರ್ಶನದ ಊರುಗಳಲ್ಲಿ ಮೇಳದ ಜತೆ ಇರುವ ಶ್ರೀ ಮಹಾಗಣಪತಿ ದೇವರನ್ನು ಗುರುವಾರ ವೈಭವದ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರದಿಂದ ಕೊಂಡೊಯ್ಯಲಾಯಿತು. ಈ ಸಂದರ್ಭ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next