ಮುಂಬಯಿ: ಭಂಡಾರಿ ಮಹಾ ಮಂಡಲದ ನಿಯೋಗವು ಮಾ. 30ರಂದು ಪೂರ್ವಾಹ್ನ ಬೆಂಗಳೂರಿನ ಗಾಂಧಿ ಭವನದ ಸನಿಹದಲ್ಲಿನ ಸರಕಾರಿ ಅಧಿಕೃತ ನಿವಾಸದಲ್ಲಿ ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನ ಸಭಾಪತಿ, ಕರ್ನಾಟಕ ರಾಜ್ಯ ಸರಕಾರದ ಸಾಮ್ಯತ್ವದ (ವಿಧಾನ ಪರಿಷತ್ ಆಡಳಿತ್ವದ) ಗಡಿನಾಡ ಕನ್ನಡಿಗರ ಸೇವಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಿ. ಎಚ್. ಶಂಕರಮೂರ್ತಿ ಅವರನ್ನು ಭೇಟಿಗೈದು ಮೇ 8ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಬಾಕೂìರಿನಲ್ಲಿ ನಡೆಸಲು ಉದ್ದೇಶಿಸಿರುವ ಭಂಡಾರಿ ಮಹಾ ಸಮಾವೇಶನದ ಭವ್ಯ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ಆಹ್ವಾನ ನೀಡಿದರು.
ಭಂಡಾರಿ ಮಹಾ ಮಂಡಲದ ಸಂಸ್ಥಾಪಕಾಧ್ಯಕ್ಷ, ಶ್ರೀ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚಾರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾಕೂìರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ ಅವರು ಸಭಾಪತಿ ಡಿ. ಎಚ್. ಶಂಕರಮೂರ್ತಿ ಅವರಿಗೆ ಆಹ್ವಾನವನ್ನಿತ್ತು ಜಗತ್ತಿನಾದ್ಯಂತ ಪಸರಿಸಿರುವ ಪ್ರತಿಷ್ಠಿತ ಭಂಡಾರಿ ಸಮುದಾಯವು ತನ್ನ ಕುಲದೇವರನ್ನು ಆರಾಧಿಸಿರುವ ಸುಮಾರು ಒಂಭತ್ತು ಶತಮಾನಗಳ ಇತಿಹಾಸವುಳ್ಳ ಕಚ್ಚಾರು ಶ್ರೀ ನಾಗೇಶ್ವರ ದೇವರ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತ್ಯುತ್ಸವದ ಸಿದ್ಧತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಮಹಾ ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಮತ್ತು ಸವಿತಾ ಮಾರ್ಗದರ್ಶಿ ಮಾಸಿಕದ ಸಂಪಾದಕ ಸೋಮಶೇಖರ ಎಂ. ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಡಾ| ಶಿವರಾಮ
ಕೆ. ಭಂಡಾರಿ, ಪತ್ರಕರ್ತ ಸೋಮಶೇಖರ್ ಪಿ. ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್