ಚಂಡೀಗಢ: ಆಮ್ ಆದ್ಮಿ ಪಕ್ಷದ ಭಗ ವಂತ್ ಮಾನ್ ಮಾ.16ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಊರಾದ ಖತ್ಕರ್ ಕಲಾನ್‌ನಲ್ಲಿ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿ ಸಲಿದ್ದಾರೆ.
ಎಂದಿನಂತೆ ರಾಜ ಭವನದಲ್ಲಿ ನಡೆಸದೆ, ಹಳ್ಳಿಯೊಂದರಲ್ಲಿ ನಡೆಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆಂದು ಪಕ್ಷವು ಸರಕಾರದ ಬೊಕ್ಕಸದಿಂದ 2.61 ಕೋಟಿ ರೂ. ಖರ್ಚು ಮಾಡಲಿದೆ.
ಗ್ರಾಮದ ರೈತರು 40 ಎಕ್ರೆಗೂ ಹೆಚ್ಚು ಜಾಗದಲ್ಲಿ ಬೆಳೆದಿರುವ ಗೋಧಿಯನ್ನು ಪಾರ್ಕಿಂಗ್ ಮಾಡಲೆಂದು ತೆಗೆಸಲಾಗುತ್ತಿದೆ. ಎಕ್ರೆಗೆ 46 ಸಾವಿರ ರೂ. ಪರಿಹಾರವನ್ನು ಕೊಡುವುದಾಗಿ ತಿಳಿಸಲಾಗಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಪದಾಧಿಕಾರಿ ಬೆಂಕಿ;ಪ್ರಮುಖ ನಾಯಕರ ಜತೆ ಚರ್ಚಿಸದೇ ಪಟ್ಟಿ ಒಯ್ದರೇ ಡಿಕೆಶಿ ?
ಕಾರ್ಯಕ್ರಮಕ್ಕೆ ರಾಜ್ಯದ ಜನರೆಲ್ಲರನ್ನೂ ಆಹ್ವಾನಿಸಿರುವ ಭಗವಂತ್ ಮಾನ್, ಭಗತ್ ಸಿಂಗ್‌ಗೆ ಗೌರವವಾಗಿ ಪುರುಷರೆಲ್ಲರೂ ಹಳದಿ ಬಣ್ಣದ ಟರ್ಬನ್ ಮತ್ತು ಸ್ತ್ರೀಯರು ಹಳದಿ ಬಣ್ಣದ ಶಾಲು ಧರಿಸಿ ಬನ್ನಿ ಎಂದು ಹೇಳಿದ್ದಾರೆ.