Advertisement
ಆದರೆ ಇಲ್ಲಿ ಯಾರೇ ಗೆದ್ದರೂ ಸರಕಾರ ಮಾತ್ರ ಬೇರೆಯದ್ದೆ ಆಗಿರುತ್ತದೆ. 60, 70ರ ದಶಕದಲ್ಲಿ ಅವಕಾಶಗಳಿದ್ದರೂ ಒಮ್ಮೆ ಗೆದ್ದವರು ಮತ್ತೆ ಆಯ್ಕೆಯಾಗಿಲ್ಲ. 1952ರಲ್ಲಿ ಬಿ.ಮಾಧವಾಚಾರ್ (ಕಾಂಗ್ರೆಸ್), 1957 ಡಿ.ಟಿ. ಸೀತಾರಾಮ್‌ರಾವ್ (ಕಾಂಗ್ರೆಸ್), 1962 ಟಿ.ಡಿ. ದೇವೇಂದ್ರಪ್ಪ (ಕಾಂಗ್ರೆಸ್), 1967 ಎ.ಕೆ.ಅನ್ವರ್ (ಪಿಎಸ್‌ಪಿ), 1972 ಅಬ್ದುಲ್ ಕುದ್ದೂಸ್ ಅನ್ವರ್ (ಕಾಂಗ್ರೆಸ್), 1978 ಜಿ.ರಾಜಶೇಖರ್ (ಕಾಂಗ್ರೆಸ್), 1983 ಎಸ್.ಎಸ್.ಸಿದ್ದಪ್ಪ (ಜೆಎನ್‌ಪಿ), 1985 ಎಸ್.ಎಸ್. ಸಿದ್ದಪ್ಪ (ಪಕ್ಷೇತರ), 1989 ಇಸಾಮಿಯಾ (ಕಾಂಗ್ರೆಸ್), 1994 ಎಂ.ಜೆ.ಅಪ್ಪಾಜಿ (ಪಕ್ಷೇತರ), 1999 ಎಂ.ಜೆ.ಅಪ್ಪಾಜಿ (ಪಕ್ಷೇತರ), 2004 ಬಿ.ಕೆ.ಸಂಗಮೇಶ್ವರ (ಪಕ್ಷೇತರ), 2008 ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್), 2013 ಎಂ.ಜೆ.ಅಪ್ಪಾಜಿ (ಜೆಡಿಎಸ್), 2018 ರಲ್ಲಿ ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ. 1989ರವರೆಗೂ ಇಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿದ್ದರು. ಆದರೆ ಯಾರೂ ಇಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಒಂದಕ್ಕಿಂತ ಹೆಚ್ಚು ಬಾರಿ ಗೆಲುವು ಸಾಧಿ ಸಿಲ್ಲ. ಎಸ್.ಎಸ್.ಸಿದ್ದಪ್ಪ ಅವರು ಒಂದು ಬಾರಿ ಜನತಾ ಪಾರ್ಟಿ, ಮತ್ತೊಮ್ಮೆ ಪಕ್ಷೇತರರಾಗಿ ಗೆದ್ದಿದ್ದರು.
Advertisement
ಸಚಿವ ಸ್ಥಾನವೇ ಸಿಗದ ಕ್ಷೇತ್ರವಿದು!
11:59 PM Mar 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.