Advertisement

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

12:55 PM Dec 20, 2024 | |

ನವದೆಹಲಿ: ಜನಪ್ರಿಯ ಹಾಗೂ ಪ್ರಸಿದ್ಧ ಕಾಫಿ ಉದ್ಯಮದ ಸ್ಟಾರ್‌ ಬಕ್ಸ್‌ (Starbucks) ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆ ಎಂಬ ಸುದ್ದಿ ಆಧಾರರಹಿತವಾದದ್ದು ಎಂದು ಟಾಟಾ ಕನ್ಸೂಮರ್‌ ಪ್ರಾಡಕ್ಸ್ಟ್‌ ( Tata consumer Products) ಪ್ರಕಟನೆ ತಿಳಿಸಿದೆ.

Advertisement

“ವಿಪರೀತ ವೆಚ್ಚ ಮತ್ತು ಕಡಿಮೆ ಆದಾಯದ ಪರಿಣಾಮ ಸರಣಿ ಶಾಖೆಯನ್ನು ಹೊಂದಿರುವ ಸ್ಟಾರ್‌ ಬಕ್ಸ್‌ ಕಾಫಿ ಸಂಸ್ಥೆ ಭಾರತದಲ್ಲಿ ತನ್ನ ಉದ್ಯಮವನ್ನು ಸ್ಥಗಿತಗೊಳಿಸಲಿದೆ ಎಂಬ ಮಾಧ್ಯಮದ ವರದಿಯ ನಂತರ ಟಾಟಾ ಈ ಸ್ಪಷ್ಟನೆಯನ್ನು ನೀಡಿರುವುದಾಗಿ ವರದಿ ವಿವರಿಸಿದೆ.

ನ್ಯಾಷನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ಆಫ್‌ ಇಂಡಿಯಾ (National Stock Exchange of india) ಬಿಎಸ್‌ ಇ ಲಿಮಿಟೆಡ್‌ ಮತ್ತು ಕೋಲ್ಕತಾ ಸ್ಟಾಕ್‌ ಎಕ್ಸ್‌ ಚೇಂಜ್‌ ಗೆ ಬರೆದ ಪತ್ರದಲ್ಲಿ, ಸ್ಟಾರ್‌ ಬಕ್ಸ್‌ ಭಾರತದಿಂದ ನಿರ್ಗಮಿಸುತ್ತಿದೆ ಎಂಬ ವರದಿಯನ್ನು ಟಾಟಾ ಕನ್ಸೂಮರ್‌ ಪ್ರಾಡಕ್ಟ್ಸ್‌ ನಿರಾಕರಿಸಿದೆ.

ಸ್ಟಾರ್ ಬಕ್ಸ್‌ ಕಾಫಿ ಕಂಪನಿ ಮತ್ತು ಟಾಟಾ ಕನ್ಸೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಜಂಟಿ ಬಂಡವಾಳ ಹೂಡಿಕೆಯ ಪಾಲುದಾರಿಕೆಯಲ್ಲಿ 2012ರ ಅಕ್ಟೋಬರ್‌ ನಲ್ಲಿ ಸ್ಟಾರ್‌ ಬಕ್ಸ್‌ ಭಾರತದಲ್ಲಿ ಉದ್ಯಮ ಆರಂಭಿಸಿತ್ತು.

Advertisement

ಅಧಿಕ ವೆಚ್ಚ, ಕಳಪೆ ರುಚಿ ಮತ್ತು ಹೆಚ್ಚುತ್ತಿರುವ ನಷ್ಟದಿಂದಾಗಿ ಸ್ಟಾರ್‌ ಬಕ್ಸ್‌ ಸಂಸ್ಥೆ ಭಾರತವನ್ನು ತೊರೆಯುತ್ತಿದೆ ಎಂಬ ವರದಿಗೆ ಸ್ಪಷ್ಟನೆ ಎಂಬ ತಲೆಬರಹ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.

ಸ್ಟಾರ್‌ ಬಕ್ಸ್‌ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆ ಎಂಬ ಊಹಾಪೋಹ ಆಧಾರರಹಿತವಾದದ್ದು. ಸ್ಟಾರ್‌ ಬಕ್ಸ್‌ ಕಾಫಿ ಸಂಸ್ಥೆ ಭಾರತದಲ್ಲಿ ಮುಂದುವರಿಯಲಿದೆ. ಅಲ್ಲದೇ ನಮ್ಮ ಜಂಟಿ ಪಾಲುದಾರಿಕೆಯಲ್ಲಿ ನಮ್ಮ ಗುರಿ ಸಾಧನೆಯತ್ತ ಹೆಚ್ಚು ಗಮನ ಹರಿಸಿದ್ದೇವೆ ಎಂದು ಟಾಟಾ ಕನ್ಸೂಮರ್‌ ಸಿಇಒ ಸುನಿಲ್‌ ಡಿಸೋಜಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next