Advertisement
ಗೆಲುವಿಗೆ 534 ರನ್ನುಗಳ ಅತ್ಯಂತ ಕಠಿನ ಗುರಿ ಪಡೆದಿದ್ದ ಆಸ್ಟ್ರೇಲಿಯ, 4ನೇ ದಿನವಾದ ಸೋಮವಾರ ಬ್ಯಾಟಿಂಗ್ ಮುಂದುವರಿಸಿ 58.4 ಓವರ್ಗಳಲ್ಲಿ 238ಕ್ಕೆ ಆಲೌಟ್ ಆಯಿತು. 3ನೇ ದಿನ 12ಕ್ಕೆ 3 ವಿಕೆಟ್ ಕಳೆದುಕೊಂಡಾಗಲೇ ಆಸ್ಟ್ರೇಲಿಯದ ಪತನ ಖಾತ್ರಿಯಾಗಿತ್ತು. 4ನೇ ದಿನದಾಟದಲ್ಲಿ ಅದು ಹೆಚ್ಚೇನೂ ಪ್ರತಿಹೋರಾಟ ನೀಡದೆ ಶರಣಾಗತಿ ಸಾರಿತು.
ಮೊನ್ನೆ ಮೊನ್ನೆಯಷ್ಟೇ ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿಯಲ್ಲಿ 3-0 ವೈಟ್ವಾಶ್ ಅನುಭವಿಸಿದ ತಂಡವೊಂದು ಆಸ್ಟ್ರೇಲಿಯ ನೆಲದಲ್ಲಿ ಖಂಡಿತ ಎದ್ದು ನಿಲ್ಲದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಅದೂ ಅಲ್ಲದೆ ನಾಯಕ ರೋಹಿತ್ ಶರ್ಮ, ಶುಭಮನ್ ಗಿಲ್ ಗೈರು ಕೂಡ ಕಾಡಿತ್ತು. ಶಮಿ ಲಭ್ಯವಿರದ ಕಾರಣ ವೇಗದ ಬೌಲಿಂಗ್ ವಿಭಾಗ ಕೂಡ ಘಾತಕವಾಗಿರಲಿಲ್ಲ. ಇಬ್ಬರು ಆಟಗಾರರಿಗೆ ಇದು ಪದಾರ್ಪಣ ಟೆಸ್ಟ್ ಕೂಡ ಆಗಿತ್ತು. ಅನುಭವದಲ್ಲಿ ಎಷ್ಟೋ ಹಿಂದುಳಿದಿತ್ತು.
Related Articles
ನಲ್ಲಿ 150ಕ್ಕೆ ಉದುರಿದ ತಂಡವೊಂದು ಕಮ್ಬ್ಯಾಕ್ ಮಾಡುವುದು ಖಂಡಿತ ಸುಲಭವಲ್ಲ. ಇಂಥ ಸನ್ನಿವೇಶದಲ್ಲಿ ಬುಮ್ರಾ ಸಾರಥ್ಯದಲ್ಲಿ ಭಾರತ ಅಸಾಮಾನ್ಯ ಸಾಧನೆಯನ್ನೇ ಗೈದಿತು. ಕ್ರಿಕೆಟ್ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿತು. ಟೀಮ್ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದ ಗೆಲುವು ಇದೆಂಬುದರಲ್ಲಿ ಎರಡು ಮಾತಿಲ್ಲ.
ಕ್ಯಾಪ್ಟನ್ ಬುಮ್ರಾ, ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ನಿತೀಶ್ ರೆಡ್ಡಿ, ಹರ್ಷಿತ್ ರಾಣಾ ಆವರೆಲ್ಲ ಭಾರತದ ಗೆಲುವಿನ ರೂವಾರಿಗಳಾಗಿ ಮೂಡಿಬಂದರು.
Advertisement
ರವಿವಾರದ ಕೊನೆಯಲ್ಲಿ 12ಕ್ಕೆ 3 ಎಂಬ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯ, 17 ರನ್ನಿಗೆ 4ನೇ ವಿಕೆಟ್ ಕಳೆದುಕೊಂಡಿತು. ಆರಂಭಕಾರ ಖ್ವಾಜಾ (4) ಅವರನ್ನು ಪಂತ್ಗೆ ಕ್ಯಾಚ್ ಕೊಡಿಸುವಲ್ಲಿ ಸಿರಾಜ್ ಯಶಸ್ವಿಯಾದರು. ಸ್ಮಿತ್-ಹೆಡ್ ಸೇರಿಕೊಂಡು ಮೊತ್ತವನ್ನು 79ಕ್ಕೆ ಏರಿಸಿದರು. ಆಗಲೂ ಸಿರಾಜ್ ನೆರವಿಗೆ ಬಂದು ಈ ಜೋಡಿಯನ್ನು ಬೇರ್ಪಡಿಸಿದರು. ಒಂದೂ ಬೌಂಡರಿ ಹೊಡೆತವಿಲ್ಲದೆ, 60 ಎಸೆತಗಳಿಂದ 17 ರನ್ ಮಾಡಿದ ಸ್ಮಿತ್ ಕೂಡ ಪಂತ್ಗೆ ಕ್ಯಾಚಿತ್ತರು. ಹೆಡ್-ಮಿಚೆಲ್ ಮಾರ್ಷ್ ಒಂದಿಷ್ಟು ಹೊತ್ತು ಕ್ರೀಸ್ ಆಕ್ರಮಿಸಿಕೊಂಡು ಮೊತ್ತವನ್ನು 161ಕ್ಕೆ ತಂದು ನಿಲ್ಲಿಸಿದರು. ಆಗ ಬುಮ್ರಾ ದೊಡ್ಡದೊಂದು ಬ್ರೇಕ್ ಒದಗಿಸಿದರು. ಶತಕದತ್ತ ದೌಡಾಯಿಸುತ್ತಿದ್ದ ಹೆಡ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು. 101 ಎಸೆತಗಳಿಂದ 89 ರನ್ ಮಾಡಿದ ಹೆಡ್, ಈ ಟೆಸ್ಟ್ನಲ್ಲಿ ಅರ್ಧ ಶತಕ ಹೊಡೆದ ಆಸ್ಟ್ರೇಲಿಯದ ಏಕೈಕ ಆಟಗಾರ. ಮಿಚೆಲ್ ಮಾರ್ಷ್ (47) ಅವರನ್ನು ಬೌಲ್ಡ್ ಮಾಡಿದ ನಿತೀಶ್ ರೆಡ್ಡಿ ತಮ್ಮ ಮೊದಲ ಟೆಸ್ಟ್ ವಿಕೆಟ್ ಉರುಳಿಸಿದರು. ಕೀಪರ್ ಅಲೆಕ್ಸ್ ಕ್ಯಾರಿ (36) ಅವರನ್ನು ಬೌಲ್ಡ್ ಮಾಡಿದ ರಾಣಾ ಭಾರತದ ಗೆಲುವನ್ನು ಸಾರಿದರು. ಎಕ್ಸ್ಟ್ರಾ ಇನ್ನಿಂಗ್ಸ್ ಆಸ್ಟ್ರೇಲಿಯ ನೆಲದಲ್ಲಿ ಭಾರತ ರನ್ ಅಂತರದ ಅತೀ ದೊಡ್ಡ ಗೆಲುವು ಸಾಧಿಸಿತು (295 ರನ್). ಹಿಂದಿನ ದಾಖಲೆ 222 ರನ್. ಇದು 1978ರ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಒಲಿದಿತ್ತು. ಒಟ್ಟಾರೆಯಾಗಿ ಇದು ಆಸ್ಟ್ರೇಲಿಯ ವಿರುದ್ಧ ಭಾರತ ದಾಖಲಿಸಿದ 2ನೇ ದೊಡ್ಡ ಜಯ. 2008ರ ಮೊಹಾಲಿ ಪಂದ್ಯವನ್ನು 320 ರನ್ನುಗಳಿಂದ ಜಯಿಸಿದ್ದು ದಾಖಲೆ. ಭಾರತ ಪರ್ತ್ನಲ್ಲಿ 2ನೇ, ಇಲ್ಲಿನ ನೂತನ “ಆಪ್ಟಸ್ ಸ್ಟೇಡಿಯಂ’ನಲ್ಲಿ ಮೊದಲ ಜಯ ಸಾಧಿಸಿತು. ಇದು ಈ ಅಂಗಳದಲ್ಲಿ ಆಡಲಾದ 5ನೇ ಟೆಸ್ಟ್. ಹಿಂದಿನ ನಾಲ್ಕೂ ಪಂದ್ಯಗಳನ್ನು ಆಸ್ಟ್ರೇಲಿಯ ಜಯಿಸಿತ್ತು. ಇದರಲ್ಲೊಂದು ಜಯ ಭಾರತದ ವಿರುದ್ಧವೇ ಬಂದಿತ್ತು (2018, ಅಂತರ 146 ರನ್). ಪರ್ತ್ನಲ್ಲಿ ಭಾರತ 2008ರಲ್ಲಿ ಮೊದಲ ಜಯ ಸಾಧಿಸಿತ್ತು. ಅಂತರ 72 ರನ್. ಇದು “ವಾಕಾ’ದಲ್ಲಿ ನಡೆದ ಟೆಸ್ಟ್ ಆಗಿತ್ತು. ನಾಯಕರಾಗಿದ್ದವರು ಅನಿಲ್ ಕುಂಬ್ಳೆ. ಭಾರತ ವಿದೇಶದಲ್ಲಿ 3ನೇ ಬೃಹತ್ ಗೆಲುವು ಸಾಧಿಸಿತು. ವೆಸ್ಟ್ ಇಂಡೀಸ್ ವಿರುದ್ಧದ 2019ರ ಆ್ಯಂಟಿಗುವಾ ಟೆಸ್ಟ್ ಪಂದ್ಯವನ್ನು 318 ರನ್ನುಗಳಿಂದ, ಶ್ರೀಲಂಕಾ ವಿರುದ್ಧದ 2017ರ ಗಾಲೆ ಟೆಸ್ಟ್ ಪಂದ್ಯವನ್ನು 304 ರನ್ನುಗಳಿಂದ ಜಯಿಸಿತ್ತು. ಆಸ್ಟ್ರೇಲಿಯ ಈ ಶತಮಾನದಲ್ಲಿ ತವರಿನ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 4ನೇ ಸಲ ಸೋಲನುಭವಿಸಿತು. ಹಿಂದಿನ ವಿಜೇತ ತಂಡಗಳೆಂದರೆ ದಕ್ಷಿಣ ಆಫ್ರಿಕಾ (2008 ಮತ್ತು 2016, ಪರ್ತ್) ಮತ್ತು ಭಾರತ (2018, ಅಡಿಲೇಡ್). ಆಸ್ಟ್ರೇಲಿಯ 2012ರ ಬಳಿಕ ತವರಲ್ಲಿ ದೊಡ್ಡ ಸೋಲನುಭವಿ ಸಿತು. ಅಂದು ದಕ್ಷಿಣ ಆಫ್ರಿಕಾ ಕೈಯಲ್ಲಿ ಪರ್ತ್ನಲ್ಲೇ 309 ರನ್ನುಗಳಿಂದ ಎಡವಿತ್ತು. ಬುಮ್ರಾ ಈ ಪಂದ್ಯದಲ್ಲಿ 72 ರನ್ನಿಗೆ 8 ವಿಕೆಟ್ ಉರುಳಿಸಿದರು. ಇದು ಭಾರತೀಯ ನಾಯಕರೊಬ್ಬರ 4ನೇ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 1983ರ ಅಹ್ಮದಾಬಾದ್ ಪಂದ್ಯದಲ್ಲಿ ಕಪಿಲ್ದೇವ್ 135ಕ್ಕೆ 10 ವಿಕೆಟ್ ಕೆಡವಿದ್ದು ದಾಖಲೆ. ಪಂದ್ಯಶ್ರೇಷ್ಠ: ಜಸ್ಪ್ರೀತ್ ಬುಮ್ರಾ ಸಂಕ್ಷಿಪ್ತ ಸ್ಕೋರ್ ಭಾರತ: 150 ಮತ್ತು 487-8 ಡಿಕ್ಲೇರ್ ಆಸ್ಟ್ರೇಲಿಯಾ: 104 ಮತ್ತು 238