Advertisement
ಮಳೆಯಿಂದ ಹಲವು ರಸ್ತೆಗಳು ಜಲಾವೃತ ಗೊಂ ಡವು. ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸಂಜೆ ವೇಳೆ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದವರು ಪರದಾಡಿದರು. ಮಳೆಯ ಹಿನ್ನೆಲೆಯಲ್ಲಿ ಬೈಕ್ ಸವಾರರು ಅಲ್ಲಲ್ಲಿ ಬಸ್‌ನಿಲ್ದಾಣಗಳು, ಅಂಡರ್‌ಪಾಸ್‌ಗಳ ಮೊರೆಹೋದರೆ, ಹಲವರು ಮಳೆ ನಡುವೆಯೇ ಪಯಣ ಮುಂದು ವರಿಸಿದರು. ತೊಯ್ದುತೊಪ್ಪೆಯಾದರೂ ಮಳೆಯಿಂದ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಕಂಡುಬಂತು.
Related Articles
Advertisement
ಮಳೆ ಆರ್ಭಟಕ್ಕೆ ಕೆ.ಆರ್. ಪುರ, ಮಹದೇವಪುರ, ಹೊರಮಾವು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು ನೆಲಕಚ್ಚಿವೆ. ಆರ್.ಟಿ. ನಗರ ಸಮೀಪ ಕಾರಿನ ಮೇಲೆ ಮರಬಿದ್ದಿದ್ದು ಯಾವುದೇ ಅಪಾಯ ಸಂಭವಿ ಸಿಲ್ಲ. ಕೊತ್ತನೂರಿನಲ್ಲಿ ಕಾರ್ ಮೇಲೆ ವಿದ್ಯುತ್ ಕಂಬಬಿದ್ದ ಬಗ್ಗೆ ವರದಿಯಾಗಿದೆ. ಎಚ್ಚೆತ್ತ ಪಾಲಿಕೆ ಸಿಬ್ಬಂದಿ ಅಪಾಯದ ಸ್ಥಳಕ್ಕೆ ದೌಡಾಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ರಾಮಮೂರ್ತಿ ನಗರ ಸೇಂಟ್ ಆನ್ಸ್ ಶಾಲೆ ಸಮೀಪ ಮಳೆ ನೀರು ಮನೆಯ ಮುಂದೆ ನಿಂತಿತ್ತು. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪಾಲಿಕೆಯ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಧರೆಗುರುಳಿದ ಮರಗಳು: ಕೆಆರ್ ಪುರ, ನಾರಾಯ ಣಪುರ, ಕೊತ್ತನೂರು, ಹೊರಮಾವು, ರಾಜರಾಜೇಶ್ವರಿ ಸರ್ಕಲ್, ಜ್ಞಾನಭಾರತಿ, ಕೆ.ಆರ್.ಸರ್ಕಲ್, ಆರ್. ಟಿ.ನಗರ, ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ 15ಕ್ಕೂ ಅಧಿಕ ಮರಗಳು ಧರೆಗು ರುಳಿವೆ. ಮಹಾದೇವಪುರ ವ್ಯಾಪ್ತಿಯಲ್ಲಿ ನಾಲ್ಕೈದು ಮರಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಸ್ತೆಯ ಮೇಲೆ ಬಿದ್ದ ಮರ ಗಳನ್ನು ಈಗಾಗಲೇ ತೆರೆವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಎಲ್ಲೂ ಕೂಡ ರಸ್ತೆಗಳ ಮೇಲೆ ನೀರು ನಿಂತಿಲ್ಲ ಎಂದು ತಿಳಿಸಿದ್ದಾರೆ.
ತೀವ್ರ ಗಾಳಿ, ಮಳೆಗೆ ಟ್ರಾನ್ಸ್‌ಫಾರ್ಮರ್ ಸ್ಫೋಟ : ಬೆಂಗಳೂರಿನ ಐಟಿಐ ಲೇಔಟ್‌ನಲ್ಲಿ ಮಳೆಗೆ ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕಿಟ್ ಆಗಿ ಸ್ಫೋಟಗೊಂಡಿತು. ಗಾಳಿ ಮಳೆಗೆ ಮರಗಳ ಎಲೆ ತಾಗಿ ಟಾನ್ಸ್‌ಫಾರ್ಮರ್‌ನಲ್ಲಿ ತಕ್ಷಣ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿತು. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದಾಗಿ ವಿದ್ಯುತ್ ಕಡಿತವಾಗಿತ್ತು. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್ ತಡೆಯಾಗದಂತೆ ನೋಡಿಕೊಂಡರು. ಕೊತ್ತನೂರು ಬಳಿ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದು ಕಾರಿನ ಬ್ಯಾನೆಟ್ ಹಾಳಾಗಿತ್ತು. ವಿದ್ಯುತ್ ಸಂಪರ್ಕ ಕೆಲಕಾಲ ಸ್ಥಗಿತವಾಗಿತ್ತು.
6, 7ರಂದು ಬೆಂಗ್ಳೂರಲ್ಲಿ ಅಧಿಕ ಮಳೆ ಸಾಧ್ಯತೆ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಭರ್ಜರಿ ಮಳೆಯಾಗಿದ್ದು, ಮೇ 6 ಹಾಗೂ 7ರಂದು ಇನ್ನೂ ಅಧಿಕ ಮಳೆಯಾಗುವ ಲಕ್ಷಣವಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಉಷ್ಣಾಂಶದ ಬೇಗೆಗೆ ಕಂಗೆಟ್ಟು ಹೋಗಿದ್ದ ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಭರ್ಜರಿ ಮಳೆ ಯಾಗಿದ್ದು, ಮತ್ತೆ ಹಿಂದಿನಂತೆ ಕೂಲ್ ಸಿಟಿಯಾಗಿ ಮಾರ್ಪಟ್ಟಿದೆ. ಶನಿವಾರ ಹಾಗೂ ಭಾನುವಾರವೂ ಇದೇ ಮಾದರಿಯಲ್ಲಿ ಮಳೆ ಮುಂದುವರೆಯುವ ಲಕ್ಷಣ ಗೋಚರಿಸಿದೆ. ಮೇ 6 ಹಾಗೂ 7ರಂದು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.