ಬೆಂಗಳೂರು: ಫೈಂಜಾಲ್ ಚಂಡಮಾರುತದ ಪ್ರಭಾ ವದಿಂದ ಕಳೆದ3 ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ನಿರಂತರವಾಗಿ ಜಿಟಿ-ಜಿಟಿ ಮಳೆಯಾಗುತ್ತಿದ್ದು, ವಾಹನ ಸವಾರರು ಹೈರಣಾದರು.
ರಾಜಧಾನಿಯಲ್ಲಿ ಬಹುತೇಕ ಕಡೆ ತುಂತುರು ಮಳೆ ಸುರಿದ್ದು, ವಿವಿಧೆಡೆ ಧಾರಾಕಾರವಾಗಿ ಮಳೆಯಾಗಿದೆ. ಇದರಿಂದ ಹಲವೆಡೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ಸವಾರರು ರೋಸಿ ಹೋದರು. ಕೆ.ಆರ್.ಮಾರುಕಟ್ಟೆ, ಟೌನ್‌ಹಾಲ್, ಮೆಜೆಸ್ಟಿಕ್, ರಾಜಾಜಿನಗರ, ಕೆಂಗೇರಿ, ಬ್ಯಾಟರಾಯನಪುರ, ಮಲ್ಲೇಶ್ವರ, ಮಾರತ್ತಹಳ್ಳಿ, ಕೋರಮಂಗಲ, ಬಾಣಸ ವಾಡಿ, ವಿಜಯನಗರ, ಮಹದೇವಪುರ, ಯಶವಂತ ಪುರ, ಚಾಮರಾಜಪೇಟೆ, ಬಿಟಿಎಂ ಬಡಾವಣೆ, ಎಚ್ ಎಸ್‌ಆರ್ ಲೇಔಟ್, ಹೊಸೂರು ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆಯ ಹಲವು ಕಡೆ ಮಳೆಯಿಂದ ಹೆಚ್ಚಿನ ಸಂಚಾರ ದಟ್ಟಣೆ ಕಂಡು ಬಂತು.
ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ರಸ್ತೆಯುದ್ದಕ್ಕೂ ಪರದಾಡುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂತು. ಹನಿ ಮಳೆಯ ಜೊತೆಗೆ ಶೀತ ಗಾಳಿ ಬೀಸುತ್ತಿದ್ದ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಜನ ಸಾಮಾನ್ಯರು ಸ್ವೆಟರ್, ಜಾಕೆಟ್ ಧರಿಸಿ ಕೆಲಸಕ್ಕೆ ತೆರಳಿದರು. ಕೆ.ಆರ್.ಮಾರು ಕಟ್ಟೆ, ಮೆಜೆಸ್ಟಿಕ್, ಕೋರಮಂಗಲ, ಮಾರತ್ತಹಳ್ಳಿಯ ವಿವಿಧೆಡೆ ರಸ್ತೆಗಳೆಲ್ಲ ಹೊಳೆಯಂತಾಗಿದ್ದವು. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿತ್ತು. ಬೆಂಗಳೂರಿನಲ್ಲಿ ಮುಂದಿನ 2 ದಿನಗಳ ಕಾಲ ಭಾಗಶಃ ಮೋಡ ಕವಿದ ವಾತಾವರ ಣವಿರುತ್ತದೆ. ಹಗುರ ದಿಂದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 24 ಡಿ.ಸೆ ಮತ್ತು 19 ಡಿ.ಸೆ ಆಗಿರಬಹುದು. ಬುಧ ವಾರವೂ ಇದೇ ವಾತಾವರಣ ಮುಂದುವರೆ ಯಲಿದ್ದು, ಸಣ್ಣದಾಗಿ ಹನಿಮಳೆ ಇರಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಇನ್ನು ಮಂಗಳವಾರ ಬೆಂಗಳೂರಿನಲ್ಲಿ ಒಟ್ಟಾರೆ 2 ಸೆಂ.ಮೀ ಮಳೆಯಾಗಿದೆ. ಗರಿಷ್ಠ 25.1 ಡಿ.ಸೆ ಹಾಗೂ ಕನಿಷ್ಠ 20.3 ಡಿ.ಸೆ ತಾಪಮಾನ ದಾಖಲಾಗಿದೆ. ಶೇ.88ರಷ್ಟು ತೇವಾಂಶವಿತ್ತು. ಮಂಗಳವಾರ ಮಧ್ಯಾಹ್ನದವರೆಗೆ ಕಡಿಮೆಯಾಗಿದ್ದ ಮಳೆಯು ನಂತರ ಹೆಚ್ಚಿನ ಪ್ರಮಾಣದಲ್ಲಿ ಸುರಿದಿತ್ತು.
ಪುಲಕೇಶಿ ನಗರದಲ್ಲಿ 3.4 ಸೆಂ.ಮೀ. ಮಳೆ: ಪುಲಕೇಶಿನಗರ 3.4 ಸೆಂ.ಮೀ, ಕೋರಮಂಗಲ, ಬೊಮ್ಮನಹಳ್ಳಿಯಲ್ಲಿ ತಲಾ 3.3 ಸೆಂ.ಮೀ., ದೊಡ್ಡನೆಕುಂದಿ, ಕುಮಾರಸ್ವಾಮಿ ಬಡಾವಣೆ, ವಿದ್ಯಾಪೀಠ, ಬಸವನಗುಡಿ ಯಲ್ಲಿ ತಲಾ 3 , ಬೆಳ್ಳಂದೂರು, ಮಾರತ್ತಹಳ್ಳಿಯಲ್ಲಿ ತಲಾ 2.9, ಎಚ್‌ಎಎಲ್, ಕಾಟನ್‌ಪೇಟೆ ತಲಾ 2.8, ಸಂಪಂಗಿ ರಾಮನಗರ, ಬಸವೇಶ್ವರನಗರ ತಲಾ 2.6, ವಿವಿಪುರ 2.4, , ಎಚ್‌ಎಸ್‌ಆರ್ ಬಡಾವಣೆ 2.2, ವರ್ತೂರು 2.1, ಕೆಂಗೇರಿ 1.9, ಪೀಣ್ಯದಲ್ಲಿ 1.2 ಸೆಂ.ಮೀ ಮಳೆಯಾಗಿದೆ.