Advertisement

ಈ ಕಾರಣಕ್ಕೆ ‘ಈ ಸಲ ಕಪ್ ನಮ್ಮದೇ’ ಎಂದ ಬೆಂಗಳೂರು ಪೊಲೀಸರು!

03:46 PM Sep 19, 2020 | keerthan |

ಬೆಂಗಳೂರು: ಎಲ್ಲೆಡೆ ಕ್ರಿಕೆಟ್ ಜ್ವರ ಆರಂಭವಾಗಿದೆ. ಇಂದಿನಿಂದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಇಂದಿನಿಂದ ಆರಂಭವಾಗಲಿದೆ. ಆರ್ ಸಿಬಿ ಅಭಿಮಾನಿಗಳು ತಮ್ಮ ಈ ಸಲ ಕಪ್ ನಮ್ಮದೇ ಎಂಬ ಮಂತ್ರ ಮತ್ತೆ ಪುನರುಚ್ಚಿಸಲಾರಂಭಿಸಿದ್ದಾರೆ. ಆದರೆ ಬೆಂಗಳೂರು ನಗರ ಪೊಲೀಸರು ಕೂಡಾ ಈ ಸಲ ಕಪ್ ನಮ್ಮದೇ ಎಂದಿದ್ದಾರೆ.

Advertisement

ಹೌದು ಬೆಂಗಳೂರು ನಗರ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಈ ರೀತಿ ಪೋಸ್ಟ್ ಮಾಡಲಿದ್ದಾರೆ. ಆದರೆ ಪೊಲೀಸರು ಈ ರೀತಿ ಪೋಸ್ಟ್ ಮಾಡಿರುವು ಬೆಟ್ಟಿಂಗ್ ದಂಧೆ ತಡೆಯಲು.

ಹೌದು. ಐಪಿಎಲ್ ಕೂಟ ಆರಂಭವಾಗುತ್ತಿದ್ದಂತೆ ಬೆಟ್ಟಿಂಗ್ ದಂಧೆಯು ತನ್ನ ಚಟುವಟಿಕೆ ಆರಂಭವಾಗುತ್ತದೆ. ಸಣ್ಣಪುಟ್ಟ ರೀತಿಯ ನೂರಾರು ರೂಪಾಯಿಯಿಂದ ಆರಂಭವಾಗಿ ಲಕ್ಷಾಂತರ ರೂಪಾಯಿಗಳ ಬೆಟ್ಟಿಂಗ್ ನಡೆಯುತ್ತದೆ. ಕೆಲವರು ಈ ದಂಧೆಯಲ್ಲಿ ಹಣ ಕಳೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಟೂರ್ನಿ ಆರಂಭಕ್ಕೆ ಮೊದಲು ಪೊಲೀಸರು ‘ಬೆಟ್ಟಿಂಗ್ ರಾಜ’ರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಐಪಿಎಲ್ 2020: ಮಯಾಂತಿ ಜಾಗಕ್ಕೆ ಬಂದ ಆಸೀಸ್ ಬೆಡಗಿ ನೆರೋಲಿ ಮೆಡೋಸ್ ಹಿನ್ನಲೆ ಗೊತ್ತಾ?

ಈ ಬಗ್ಗೆ ಟ್ವೀಟ್ ಮಾಡಿರುವ ನಗರ ಪೊಲೀಸರು, ಎರಡು ರೀತಿಯ ಜನರಿದ್ದಾರೆ. ಮತ್ತು ನೀವು ತಪ್ಪು ಕಾರಣಗಳಿಗಾಗಿ ಐಪಿಎಲ್ ಬಗ್ಗೆ ಉತ್ಸುಕರಾಗಿರುವ ಜನರಾಗಿದ್ದರೆ, ಎಚ್ಚರಿಕೆಯಿಂದಿರಿ ಎಂದಿದ್ದಾರೆ. ಅದಲ್ಲದೆ ಕಡೆಗೂ ಐಪಿಎಲ್ ಆರಂಭವಾಗಿದೆ. ಬೆಟ್ಟಿಂಗ್ ಯಾಕೆ ಗುರು, ಈ ಸಲ ಕಪ್ ನಮ್ಮದೇ ಎಂದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next