ಬೆಂಗಳೂರು: ಬೆಂಗಳೂರು ಪೊಲೀಸ್ ಆಯುಕ್ತರ ವರ್ಗಾವಣೆ ಸಾಧ್ಯತೆ ನಿಚ್ಚಳವಾಗಿದ್ದು, ಚಂದ್ರು ಕೊಲೆ ಪ್ರಕರಣದಲ್ಲಿ ಅವರು ಮಾಡಿದ ಟ್ವೀಟ್ ಈಗ ಭಾರಿ ಬೆಲೆ ತೆರುವಂತೆ ಮಾಡಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ವರ್ಗಕ್ಕೆ ಸೇರಿದ ಅಧಿಕಾರಿ ಎಂಬ ಮಾತಿದ್ದರೂ ಈಗಿನ ಸರಕಾರದ ಕೆಲ ಸಚಿವರಿಗೆ ಕಮಲ್ ಪಂತ್ ಕಾರ್ಯ ವೈಖರಿ ಬಗ್ಗೆ ಸಮಾಧಾನವಿಲ್ಲ.ಕಳೆದ ಕೆಲ ತಿಂಗಳಿಂದಲೂ ಕಮಲ್ ಪಂತ್ ವರ್ಗಾವಣೆ ಸುದ್ದಿ ಕೇಳಿ ಬರುತ್ತಿತ್ತಾದರೂ ಸಮಯ ಕೂಡಿ ಬಂದಿರಲಿಲ್ಲ. ಆದರೆ ಈಗ ಬಿಜೆಪಿ ನಾಯಕರ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ವರ್ಗಾವಣೆ ನಿಶ್ಚಿತ ಎನ್ನಲಾಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಆಯುಕ್ತರ ಗುಪ್ತದಳದ ಎಡಿಜಿಪಿ ದಯಾನಂದ್ ಹಾಗೂ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಹೆಸರು ದಟ್ಟವಾಗಿ ಕೇಳಿ ಬರುತ್ತಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಾಡಿದ ಕೆಲಸಗಳೇ ಈಗಿನ ಕೋಮು ಗಲಭೆಗೆ ಕಾರಣ: ನಳಿನ್ ಕಟೀಲ್
ಚುನಾವಣೆ ದೃಷ್ಟಿಯಿಂದ ಆಡಳಿತಕ್ಕೆ ಬಿಗು ನೀಡುವುದಕ್ಕಾಗಿ ಐಜಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬದಲಾವಣೆಗೂ ಸರಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಆದೇಶ ಪ್ರಕಟವಾಗಬಹುದು ಎಂದು ಹೇಳಲಾಗುತ್ತಿದೆ.