Advertisement

Bengaluru kambala: ಕಾಂತಾರದ ಕಂಬಳದ ಜೋಡಿಗೆ ಚಿನ್ನದ ಗರಿ

10:47 AM Nov 27, 2023 | |

ಬೆಂಗಳೂರು: ಅರಮನೆ ಮೈದಾನದಲ್ಲಿ ಎರಡು ದಿನ ನಡೆದ ಬೆಂಗಳೂರು ಕಂಬಳಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರಕಿದೆ. ಕೋಣಗಳ ಓಟದ ಮಾಯೆಗೆ ಐಟಿ ಸಿಟಿ ಶರಣಾಯಿತು. ಭಾನುವಾರ ತಡ ರಾತ್ರಿವರೆಗೂ ನಡೆದ ಸ್ಪರ್ಧೆಯಲ್ಲಿ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಓಡಿದ್ದ ಕೋಣಗಳು(ಕಿಟ್ಟು ಪಟ್ಟು) ಚಿನ್ನದ ಪದಕ ಪಡೆದುಕೊಂಡಿವೆ.

Advertisement

ಬೊಳಂಬಳ್ಳಿ ಪರಮೇಶ್ವರ್‌ ಭಟ್ಟ ಅವರ ಅಪ್ಪು ಕುಟ್ಟಿ 6.5 ಕೋಲು ನೀರು ಚಿಮ್ಮಿಸಿ ಕೆನೆಹಲಗೆ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದೆ. ಈ ಕೋಣಗಳ ಓಟವನ್ನು ಅಲ್ಲಿ ನೆರೆದಿದ್ದವರು ಕಣ್ತುಂಬಿಕೊಂಡರು. ಕೇವಲ ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಕಂಬಳ ಸಿಲಿಕಾನ್‌ ಸಿಟಿಗೂ ತಲುಪಿದೆ. ಇನ್ಮುಂದೆ ಶೀಘ್ರದಲ್ಲಿ ರಾಜ್ಯದ ಗಡಿ ದಾಟಿ ದೂರ ಮುಂಬಯಿನಲ್ಲೂ ಆಯೋಜಿಸುವ ಚಿಂತನೆಯು ವ್ಯಕ್ತವಾಗಿದೆ.

ಜತೆಗೆ ಪ್ರೀಮಿಯರ್‌ ಲೀಗ್‌ ನಂತೆ ಕಂಬಳದ ಲೀಗ್‌ ನಡೆಸುವ ಮುನ್ಸೂಚನೆ ಮೇಲ್ಮೋಟಕ್ಕೆ ಕಂಡ ಬರುತ್ತಿದೆ. ಕಂಬಳ ಆಯೋಜನೆ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟವರು ಪಡೆದುಕೊಂಡಿದ್ದಾರೆ. ಕಂಬಳವನ್ನು ರಜಾ ದಿನಗಳಲ್ಲಿ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ 8 ಲಕ್ಷಕ್ಕೂ ಅಧಿಕ ಮಂದಿ ಕಂಬಳಕ್ಕೆ ಭೇಟಿ ಕೊಟ್ಟು ಸಂಭ್ರಮಿಸಿದರು. ಕೊನೆಯ ದಿನದ ಕಂಬಳದಲ್ಲಿ ಎಲ್ಲಿ ನೋಡಿದರೂ ಜನರ ದಂಡು, ನೂಕು ನುಗ್ಗಲು, ಜಾತ್ರೆ ವಾತಾವರಣ ಮನೆ ಮಾಡಿತ್ತು.

ಕಮೆಂಟ್ರಿಗೆ 30 ಮಂದಿ!: ಕಂಬಳದಲ್ಲಿ ಕೋಣಗಳು ಓಡುವುದು ಎಷ್ಟು ಮುಖ್ಯವೋ ಅಷ್ಟೇ ಕಮೆಂಟ್ರಿ ಮಾಡುವವರು ಸಹ. ಈ ಬಾರಿ ಬೆಂಗಳೂರು ಕಂಬಳಕ್ಕೆ ಕರಾವಳಿಯಿಂದ 30 ಮಂದಿ ಕಮೆಂಟ್ರಿ ಮಾಡುವವರು ಬಂದಿದ್ದರು. ಪ್ರತಿ ನಾಲ್ಕು ಗಂಟೆಗೊಮ್ಮೆ ಕಮೆಂಟ್ರಿ ಮಾಡವವರು ಬದಲಾಗುತ್ತಿದ್ದರು. ಬೆಂಗಳೂರು ಜನರು ಕವಿಯನ್ನು ಅರಳಿಸಿ ಕಮೆಂಟ್ರಿ ಕೊಡುವವರು ಭಿನ್ನ ಮಾತಿನ ಮೋಡಿ ಹಾಗೂ ಹಾಸ್ಯ ಚಟಾಕಿಗೆ ನಕ್ಕು ನಕ್ಕು ಸುಸ್ತಾದರು.

ಮನಸೋತ ಪ್ರೇಕ್ಷಕರು: ಕೃಷ್ಣರಾಜ ಒಡೆಯರ್‌ ವೇದಿಕೆಯಲ್ಲಿ ಕೆಳೆದೆರಡು ದಿನಗಳಿಂದ ಬೆಳಗ್ಗೆಯಿಂದ ಸಂಜೆವರೆಗೆ ಕರಂಗೋಲು ನೃತ್ಯ, ಯಕ್ಷಗಾನ, ಆಟಿ ಕಳಂಜ, ಹುಲಿ ವೇಷ, ಕಂಗೀಲು ನೃತ್ಯ, ಮಂಕಾಳಿ ನಲಿಕೆ, ಬಾಲಿವುಡ್‌ ಸಮಕಾಲೀನ ನೃತ್ಯ, ಕಂಬಳದ ಪದ ನಲಿಕೆ, ಚೆನ್ನು ನಲಿಕೆ ಮನರಂಜನೆ ನೀಡಿತು. ಆಕ್ಸಿಜನ್‌ ಡಾನ್ಸ್‌ ತಂಡ ನಡೆಸಿಕೊಟ್ಟ ನೃತ್ಯಕ್ಕೆ ಪ್ರೇಕ್ಷಕರು ಮಾರು ಹೋದರು. ಪ್ರಶಂಸಾ ಮಂಗಳೂರು ಕಾಮಿಡಿ ಕಿಲಾಡಿ ತಂಡದವರಿಂದ ಕಾಮಿಡಿ ಶೋ ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಗಾಯಕಿಯರಾದ ಇಂದು ನಾಗರಾಜ್‌, ಶಮಿತಾ ಮಲ್ನಾಡ್‌, ಗುರುಕಿರಣ್‌ ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಮಂದಿ ಮುಗಿಬಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next