Advertisement

ಬೆಂಗಳೂರು ಈಗ ಕೋವಿಡ್ ರಾಜಧಾನಿ: ಮಹಾನಗರಗಳ ಪೈಕಿ ಬೆಂಗಳೂರಲ್ಲೇ ಹೆಚ್ಚು ವೈರಸ್!

11:56 AM Oct 08, 2020 | keerthan |

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗ ದೇಶಕ್ಕೆ ಕೋವಿಡ್ ರಾಜಧಾನಿಯಾಗಿ ಪರಿವರ್ತನೆ ಗೊಂಡಿದೆ! ಕಳೆದ ಒಂದು ವಾರದಲ್ಲಿ ದೇಶದ ಮಹಾ ನಗರಗಳ ಪೈಕಿ ಅತಿ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ಕಾಣಿಸಿಕೊಂಡಿರುವುದು ಬೆಂಗಳೂರಿನಲ್ಲಿಯೇ.

Advertisement

ಸದ್ಯ ಬೆಂಗಳೂರು ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿರಬಹುದು. ಆದರೆ, ಮಅಕ್ಟೋಬರ್‌ನಿಂದೀಚೆಗೆ ಬೆಂಗಳೂರಿನಲ್ಲಿ ಪ್ರಕರಣಗಳ ತೀವ್ರತೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅ.1 ರಿಂದ 7 ರ ನಡುವೆ ಬೆಂಗಳೂರಿನಲ್ಲಿ 29,578 ಮಂದಿಗೆ ಸೋಂಕು ತಗುಲಿದೆ. ಅಂದರೆ ನಿತ್ಯ ಸರಾಸರಿ 4,225 ಮಂದಿ ಸೋಂಕಿತರಾಗಿದ್ದಾರೆ. ಇದೇ ಅವಧಿಯಲ್ಲಿ ನಿತ್ಯ ಸರಾಸರಿ ಪೂನಾದಲ್ಲಿ 2,195, ಮುಂಬೈನಲ್ಲಿ 2099, ದೆಹಲಿಯಲ್ಲಿ 3,111 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೋವಿಡ್ ಸೋಂಕು ಪ್ರಕರಣಗಳಲ್ಲಿ ದೇಶದ ಎಲ್ಲಾ ಮಹಾನಗರಗಳನ್ನು ಬೆಂಗಳೂರು ಮೀರಿಸಿದೆ.

ಐದು ಸಾವಿರಕ್ಕೆ ಹೆಚ್ಚಳ: ಕಳೆದ ಎರಡು ದಿನಗಳಿಂದ ಮುಂಬೈ, ದೆಹಲಿ, ಪೂನಾದಲ್ಲಿ 3 ಸಾವಿರದ ಆಸುಪಾಸಿನಲ್ಲಿ ಸೋಂಕು ವರದಿಯಾಗುತ್ತಿವೆ. ಆದರೆ, ಬೆಂಗಳೂರಿನಲ್ಲಿ 5ಸಾ ವಿರಕ್ಕೆ ಹೆಚ್ಚಳವಾಗಿವೆ. ಸೋಂಕಿನ ತೀವ್ರತೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರಕರಣಗಳ ಪಟ್ಟಿಯಲ್ಲಿಯೂ ಬೆಂಗಳೂರು ಅಗ್ರಸ್ಥಾನಕ್ಕೇರಲಿದೆ.

250ಕ್ಕೂ ಹೆಚ್ಚು ಮಂದಿ ಸಾವು: ಸೋಂಕಿತರ ಸಾವಿನ ವಿಚಾರದಲ್ಲಿಯೂ ಬೆಂಗಳೂರು ಮುಂಚೂಣಿಯಲ್ಲಿದೆ. ಕಳೆದ 1 ವಾರದಲ್ಲಿ 254 ಸೋಂಕಿತರು ಮೃತಪಟ್ಟಿದ್ದಾರೆ. ನಿತ್ಯ ಸರಾಸರಿ 37 ಮಂದಿ ಮೃತಪಟ್ಟಂತಾಗಿದೆ. ಇತರೆ ಮಹಾನಗರಗಳಲ್ಲಿಯೂ ನಿತ್ಯ 40 ಸೋಂಕಿತರ ಸಾವಾಗುತ್ತಿದೆ.

30 ಸಾವಿರ ಸೋಂಕು ಪರೀಕ್ಷೆ: ನಗರದಲ್ಲಿ ಸೋಂಕು ಪರೀಕ್ಷೆಗಳ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸೆಪ್ಟೆಂಬರ್‌ನಲ್ಲಿ ನಿತ್ಯ ಸರಾಸರಿ 20 ಸಾವಿರ ಪರೀಕ್ಷೆ ನಡೆದಿದ್ದವು. ಸದ್ಯ ಆ ಪ್ರಮಾಣ 30 ಸಾವಿರಕ್ಕೆ ಹೆಚ್ಚಳವಾಗಿದೆ. ಅ.1 ರಿಂದ ಅ.7ರವರೆಗೆ ಒಟ್ಟು 2,16,739 ಸೋಂಕು ಪರೀಕ್ಷೆಗಳು ನಡೆದಿವೆ. ಬುಧವಾರ ಹಿಂದೆಂದಿಗಿಂತಲೂ ಅತಿ ಹೆಚ್ಚು 35183 ಪರೀಕ್ಷೆ ನಡೆದಿವೆ. ಇನ್ನು ದೇಶದಲ್ಲಿಯೇ ದೆಹಲಿ ಹೊರತುಪಡಿಸಿದರೆ ಅತಿ ಹೆಚ್ಚು ಪರೀಕ್ಷೆ ಬೆಂಗಳೂರಿನಲ್ಲಿ ನಡೆಯುತ್ತಿವೆ. ಇದೇ ಕಾರಣಕ್ಕೆ ಸೋಂಕು ಹೆಚ್ಚಳವಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

Advertisement

ಸದ್ಯ ಅತಿ ಹೆಚ್ಚು ಸೋಂಕಿತರು ಬೆಂಗಳೂರಿನಲ್ಲಿದ್ದಾರೆ!: ನಿರಂತರ ಗುಣಮುಖರ ಸಂಖ್ಯೆಗಿಂತಲೂ ಸೋಂಕು ಪ್ರಕರಣಗಳ ಹೆಚ್ಚಾದ ಹಿನ್ನೆಲೆ ಬೆಂಗಳೂರಿನ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನಕ್ಕೇ ತಲುಪಿದೆ. ಅಂದರೆ, ಸದ್ಯ ದೇಶದಲ್ಲಿಯೇ ಅತಿಹೆಚ್ಚು ಪಾಸಿಟಿವ್‌ ಪ್ರಕರಣ ಇಲ್ಲಿವೆ. ಮಂಗಳವಾರ ದವರೆಗೂ ಪೂನಾ ಮೊದಲ ಸ್ಥಾನದಲ್ಲಿತ್ತು. ಆದರೆ, ಬುಧವಾರ ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣ ಬೆಂಗಳೂರಿನಲ್ಲಿ ವರದಿ ಯಾದ ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ 58624 ಸಾವಿರಕ್ಕೆ ತಲುಪಿದೆ. ಪೂನಾ 57926 ಪ್ರಕರಣಗಳೊಂದಿಗೆ2ನೇ ಸ್ಥಾನಕ್ಕೆ ಇಳಿಕೆಯಾಗಿದೆ.

ಒಂದೇ ದಿನ 35 ಸಾವಿರ ಸೋಂಕು 
ಪಾಲಿಕೆ ಬುಧವಾರ ಒಂದೇ ದಿನ 35 ಸಾವಿರ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದೆ. ಕಳೆದ 10ದಿನಗಳಿಂದ ನಗರದಲ್ಲಿ  ಸೋಂಕು ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಆದರೆ, ಇದೇ ಮೊದಲ ಒಂದೇ ದಿನ 35 ಸಾವಿರ ಜನರಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. ಬುಧವಾರ 35,183 ಮಂದಿ ಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ25,053 ಆರ್‌ಟಿಪಿಸಿಆರ್‌, 10,130 ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಲಾಗಿದೆ ಎಂದು ಪಾಲಿಕೆ ಆರೋ ಗ್ಯಾಧಿ ಕಾರಿಗಳು ತಿಳಿಸಿದ್ದಾರೆ. ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ಮೃತರ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡುವ ಉದ್ದೇಶದಿಂದ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಮಹಾನಗರಗಳ ಪೈಕಿ ಬೆಂಗಳೂರಲ್ಲೇ ಹೆಚ್ಚು ವೈರಸ್!

ಅ. 1ರಿಂದ 7 ರ ನಡುವೆ 29,578 ಮಂದಿಗೆ ಸೋಂಕು

ಮಹಾನಗರ ಸೋಂಕು ಪ್ರಕರಣ ಸಾವು ಪ್ರಕರಣ ಸಕ್ರಿಯ ಪ್ರಕರಣ
ಬೆಂಗಳೂರು 29,578 254  58624
ದೆಹಲಿ 21,782 255 22186
ಪೂನಾ 15,370 260 57926
ಮುಂಬೈ 14,693 276 26544

ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next