Advertisement

Bengaluru: ಜುಲೈನಲ್ಲಿ 54 ಡ್ರಗ್ಸ್ ಪೆಡ್ಲರ್ಸ್‌ಗಳು ಸೆರೆ ‌

01:00 PM Aug 10, 2024 | Team Udayavani |

ಬೆಂಗಳೂರು: ನಗರ ಪೊಲೀಸ್‌ ಕಮಿಷನರ್‌ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ನಡೆದ ಆರೋಪಿಗಳ ಬಂಧನದ ಪಟ್ಟಿ ವಿವರಣೆ ನೀಡಲಾಗಿದ್ದು, ಮಾದಕ ವಸ್ತು ಪೂರೈಸುತ್ತಿದ್ದ 54 ಡ್ರಗ್ಸ್‌ ಪೆಡ್ಲರ್ಸ್‌ಗಳನ್ನು ವಿವಿಧ ಠಾಣೆ ಪೊಲೀಸರು ಬಂಧಿಸಿರುವುದು ಬೆಳಕಿಗೆ ಬಂದಿದೆ.

Advertisement

ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಎನ್‌ಡಿಪಿಎಸ್‌ ಅಡಿ ಒಟ್ಟು 38 ಪ್ರಕರಣ ದಾಖಲು ಮಾಡಲಾಗಿದೆ. ನಾಲ್ವರು ವಿದೇಶಿ ಪ್ರಜೆಗಳೂ ಸೇರಿ 54 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಿಂದ 114 ಕೆ.ಜಿ ಗಾಂಜಾ, 176 ಗ್ರಾಂ ಅಫೀಮು, 745 ಗ್ರಾಂ ಕೊಕೇನ್‌, 4 ಕೆ.ಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next