Advertisement

ಕೃಷಿಯಲ್ಲಿ ಜೈವಿಕ ಗೊಬ್ಬರ, ನಿಯಂತ್ರಕಗಳ ಮಹತ್ವ

10:18 AM Feb 24, 2020 | mahesh |

ವಿವಿಧ ರೀತಿಯ ಜೈವಿಕ ಗೊಬ್ಬರಗಳು ಸೂಕ್ಷ್ಮಜೀವಿಗಳಿಂದ ತಯಾರು ಮಾಡಿದ ಗೊಬ್ಬರಗಳಿಗೆ ಜೈವಿಕ ಗೊಬ್ಬರವೆನ್ನುತ್ತಾರೆ. ಇದರಲ್ಲಿ ಅನೇಕ ವಿಧಗಳಿವೆ.

Advertisement

ಸಾರಜನಕ ಸ್ಥಿರೀಕರಿಸುವ ಗೊಬ್ಬರಗಳು
1  ರೈಜೋಬಿಯಂ
ಇದನ್ನು ಎಲ್ಲ ದ್ವಿದಳ ಧಾನ್ಯ ಬೆಳೆಗಳಾದ ಬೇಳೆಕಾಳುಗಳು, ಉದಾ: ಅಲಸಂಡೆ, ಉದ್ದು, ಅವರೆ, ಹುರುಳಿ, ಹೆಸರು, ಎಣ್ಣೆಕಾಳುಗಳಾದ ಶೇಂಗಾ ಇತ್ಯಾದಿ ಬೆಳೆಗಳಲ್ಲಿ ಬಳಸಬಹುದು. ಇದು ಎಕರೆಗೆ ಸರಾಸರಿ 30ರಿಂದ 40 ಕಿ.ಗ್ರಾಂ ಸಾರಜನಕವನ್ನು ಪ್ರತೀ ವರ್ಷ ಸ್ಥಿರೀಕರಿಸುತ್ತದೆ. ಇದರ ಉಪಯೋಗದಿಂದ ಶೇ. 25ರಿಂದ 30ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದು.

2  ಅಜೋಟೋಬ್ಯಾಕ್ಟರ್‌
ಇದು ಮಣ್ಣಿನಲ್ಲಿರುವ ಒಂದು ಸೂಕ್ಷ್ಮಜೀವಿ. ಇದು ಯಾವ ಸಹಾಯವೂ ಇಲ್ಲದೆ ವಾತಾವರಣದಲ್ಲಿರುವ ಸಾರಜನಕ ಸ್ಥಿರೀಕರಿಸಿ ಮಣ್ಣಿನ ಫ‌ಲವತ್ತತೆ ಹೆಚ್ಚಿಸುತ್ತದೆ. ಇದು ಕಬ್ಬು ಬೆಳೆಗೆ ಹೆಚ್ಚು ಸೂಕ್ತ. ಇದಲ್ಲದೆ ಮೆಣಸು, ಸೂರ್ಯಕಾಂತಿ, ತರಕಾರಿ ಬೆಳೆಗಳಿಗೆ ಉಪಯೋಗಿಸಬಹುದು. ಇದರಿಂದ ಶೇ. 10ರಿಂದ 20ರಷ್ಟು ಇಳುವರಿ ಹೆಚ್ಚುತ್ತದೆ.

3  ಅಜೋಲಾ
ಇದು ನೀರಿನ ಮೇಲೆ ತೇಲಾಡಿ ಬೆಳೆಯುವ ಸಸ್ಯ. ಇದನ್ನು ಭತ್ತದ ಗದ್ದೆಯಲ್ಲಿ ನಾಟಿಗೆ ಮೊದಲು ಮಣ್ಣಿನಲ್ಲಿ ಬೆರೆಸುವುದರಿಂದ ಎಕರೆಗೆ 20ರಿಂದ 40 ಕಿ.ಗ್ರಾಂ ಸಾರಜನಕದ ಲಾಭ ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಇದನ್ನು ಜಾನುವಾರು, ಕೋಳಿ, ಹಂದಿಗಳಿಗೆ ಆಹಾರವಾಗಿ ಉಪಯೋಗಿಸುವುದು ವಾಡಿಕೆಯಾಗಿದೆ.

4  ನೀಲಿ ಹಸಿರು ಪಾಚಿ
ಇದು ವಾಯು ಮಂಡಲದಲ್ಲಿರುವ ಸಾರಜನಕವನ್ನು ಹೀರಿ ಭತ್ತದ ಬೆಳೆಗೆ ಒದಗಿಸಿ ಶೇ. 15ರಿಂದ 18ರಷ್ಟು ಇಳುವರಿ ಹೆಚ್ಚಿಸುತ್ತದೆ. ಶೇ. 12ರಿಂದ 15ರಷ್ಟು ಸಾರಜನಕ ಗೊಬ್ಬರ ಹಾಕುವಿಕೆ ಮಿತಗೊಳಿಸಲೂಬಹುದು. ಇದರ ಬೆಳವಣಿಗೆಗೆ ಸೂರ್ಯನ ಬೆಳಕು, ಸ್ವಲ್ಪ ರಂಜಕ ಅವಶ್ಯ.

Advertisement

5  ಅಜೋಸ್ಪೈರಿಲ್ಲಂ
ಇದನ್ನು ಏಕದಳ ಧಾನ್ಯಗಳಾದ ಭತ್ತ, ಜೋಳ ಮತ್ತು ಅಲಂಕೃತ ಗಿಡಗಳಲ್ಲಿ ಬಳಸಬಹುದು. ಇದರ ಬಳಕೆಯಿಂದ ಸುಮಾರು 20ರಿಂದ 25 ಕಿ.ಗ್ರಾಂ. ಸಾರಜನಕ ರಸಗೊಬ್ಬರ ಹಾಕುವಿಕೆ ಮಿತಿಗೊಳಿಸಬಹುದು. ಶೇ. 18ರಿಂದ 20ರಷ್ಟು ಹೆಚ್ಚಿನ ಇಳುವರಿ ಪಡೆಯಬಹುದು.

ರಂಜಕ ಕರಗಿಸುವ ಜೀವಾಣು ಗೊಬ್ಬರಗಳು
ಸೂಡೋಮೊನಾಸ್‌,
ಸ್ಟ್ರೆಯೇಟ್‌ ಬ್ಯಾಸಿಲಸ್‌ ಪಾಲಿಮಿಕ್ಸಾ, ಅಸ್‌ಪಜಿಲಸ್‌ನೈಜರ್‌ ಎಂಬ ಸೂಕ್ಷ್ಮಾಣುಜೀವಿಗಳು ಮಣ್ಣಿನಲ್ಲಿ ಘನೀಕೃತಗೊಂಡಿರುವ ರಂಜಕವನ್ನು ವಿಭಜನೆಗೊಳಿಸಿ ನೀರಿನಲ್ಲಿ ಕರಗುವಂತೆ ಮಾಡಿ ಸಸ್ಯಗಳಿಗೆ ಒದಗಿಸುತ್ತವೆ. ಒಂದು ಹೆಕ್ಟೇರಿಗೆ 50 ಕೆ.ಜಿ. ಶಿಲಾರಂಜಕದ ಜತೆಯಲ್ಲಿ ರಂಜಕ ಕರಗಿಸುವ ಗೊಬ್ಬರ ನೀಡುವುದರಿಂದ ಉತ್ಪತ್ತಿಯಾದ ಕರಗಿಸುವ ರಂಜಕವು ಒಂದು ಹೆಕ್ಟೇರಿಗೆ 50 ಕೆ.ಜಿ. ಸೂಪರ್‌ಪಾಸ್ಪೆಟ್‌ ಕೊಡುವುದು ಸಮನಾಗಿದೆ.

ಆಧುನಿಕ ಬೇಸಾಯ
ಇತ್ತೀಚೆಗೆ ರಾಸಾಯನಿಕ ಹಾಗೂ ಕ್ರಿಮಿನಾಶಕಗಳನ್ನು ಅವಲಂಬಿಸಿದೆ. ಇದರಿಂದ ಸಂಪನ್ಮೂಲಗಳ ಹೆಚ್ಚು ಬಳಕೆ, ಮಣ್ಣಿನ ಫ‌ಲವತ್ತತೆ ಕುಂದುವುದು, ವಾತಾವರಣ ಮಾಲಿನ್ಯ ಜಾಸ್ತಿಯಾಗುತ್ತಿದೆ. ಈ ದೃಷ್ಟಿಯಿಂದ ಜೈವಿಕ ಗೊಬ್ಬರಗಳ ಬಳಕೆ ಹೆಚ್ಚು ಸೂಕ್ತ. ಇದು ಉಪಯುಕ್ತ ಸೂಕ್ಷ್ಮಾಣುಜೀವಿಗಳಾದ ಸಾರಜನಕ ಸ್ಥಿರೀಕರಿಸುವ, ರಂಜಕ ಕರಗಿಸುವ, ಪೊಟ್ಯಾಶ್‌, ಗಂಧಕ ಇತರ ಪೋಷಕಾಂಶಗಳನ್ನು ಗಿಡಕ್ಕೆ ಒದಗಿಸುವ, ಗೊಬ್ಬರವನ್ನು ಕಳಿಸುವ (ಕೊಳೆಯುವಿಕೆ) ಸೂಕ್ಷ್ಮಜೀವಿಗಳನ್ನು ಒಳಗೊಂಡಿರುತ್ತದೆ.

ಸುಲಭ ರೂಪದ ತಾಂತ್ರಿಕತೆ, ಅತ್ಯಲ್ಪ ಖರ್ಚಿನಲ್ಲಿ ಹೆಚ್ಚಿನ ಇಳುವರಿ, ಆದಾಯ.
ಜೈವಿಕ ಗೊಬ್ಬರ ಉಪಯೋಗಿಸುವ ವಿಧಾನ

1 ನೇರವಾಗಿ ಮಣ್ಣಿಗೆ ಹಾಕುವುದು
ಒಂದು ಎಕರೆಗೆ ಬೇಕಾಗುವ ಪುಡಿ ರೂಪದ ಗೊಬ್ಬರವನ್ನು (5 ಕೆ.ಗ್ರಾಂ.) 100 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ದೊಂದಿಗೆ ಮಿಶ್ರ ಮಾಡಿ ಸಾಲುಗಳಲ್ಲಿ ಹಾಕಬೇಕು.

2 ಬೀಜೋಪಚಾರ
ಸಾಮಾನ್ಯವಾಗಿ ಬೀಜೋಪಚಾರವನ್ನು ಬಿತ್ತನೆಗೆ ಮೊದಲು 4ರಿಂದ 6 ಗಂಟೆ ಕಾಲ ಮುಂಚಿತವಾಗಿ ಮಾಡಬೇಕು. 70 ಗ್ರಾಂ. ಬೆಲ್ಲ ಅಥವಾ ಸಕ್ಕರೆಯನ್ನು ಕಾಲು ಲೀಟರ್‌ ನೀರಿನಲ್ಲಿ ಕರಗಿಸಿ 30 ನಿಮಿಷಗಳ ಕಾಲ ಕುದಿಸಿ ತಣ್ಣಗೆ ಮಾಡಿ ಆ ದ್ರಾವಣಕ್ಕೆ 200 ಗ್ರಾಂ ಜೀವಾಣು ಗೊಬ್ಬರ ಹಾಕಿ ಕಲಸಿಡಬೇಕು. ಒಂದು ಎಕರೆಗೆ ಬೇಕಾಗುವ ಬಿತ್ತನೆ ಬೀಜದ ಮೇಲೆ ಅದನ್ನು ಸುರಿದು ಪ್ರತಿ ಬೀಜಕ್ಕೂ ಸಮನಾಗಿ ಅಂಟುವಂತೆ ಮಾಡಬೇಕು. ಬಟ್ಟೆ ಅಥವಾ ಗೋಣಿಚೀಲದ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ ತತ್‌ಕ್ಷಣ ಬಿತ್ತನೆ ಮಾಡಬೇಕು. 1 ಕಿ.ಗ್ರಾಂ. ಬೀಜಕ್ಕೆ 30-40 ಮಿ. ಲೀಟರ್‌ ಅಂಟು ದ್ರಾವಣ ಆಗತ್ಯ.
3 ಸಸ್ಯಬೇರುಗಳಿಗೆ ಉಪಚರಿಸುವ ವಿಧಾನ ಈ ವಿಧಾನವನ್ನು ಸಾಮಾನ್ಯವಾಗಿ ನಾಟಿ ಮಾಡಿ ಬೆಳೆಯುವ ಬೆಳೆಗಳಿಗೆ ಅಂದರೆ ಭತ್ತ ಇತ್ಯಾದಿ ಬೆಳೆಗೆ ಬಳಸಬಹುದು. 1 ಕಿ.ಗ್ರಾಂ. ಜೀವಾಣು ಗೊಬ್ಬರವನ್ನು 5 ಲೀಟರ್‌ ನೀರಿನಲ್ಲಿ ಕಲಸಿ ಈ ದ್ರಾವಣದಲ್ಲಿ ಪೈರಿನ ಬೇರನ್ನು 30 ನಿಮಿಷ ಕಾಲ ನೆನೆಸಿ ಅನಂತರ ನಾಟಿ ಮಾಡಬೇಕು.

ದ್ರವರೂಪಿ ‌ ಗೊಬ್ಬರ ಬಳಕೆ ವಿಧಾನ
ಇದನ್ನು ಸಿಂಪಡಣೆ ಮಾಡುವ ಮೊದಲು ಕನಿಷ್ಠ 5ರಿಂದ 6 ದಿನದ ಮುಂಚೆ ಹಾಗೂ ಅನಂತರ ರಾಸಾಯನಿಕ ಶಿಲೀಂದ್ರನಾಶಕ ಸಿಂಪಡಣೆ ಮಾಡಬಾರದು.

ಜೈವಿಕ ಗೊಬ್ಬರ ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ
– ಜೈವಿಕ ಗೊಬ್ಬರವನ್ನು ತಂಪು ಮಾಡಿದ ಅಂಟುದ್ರಾವಣಕ್ಕೆ ಮಿಶ್ರ ಮಾಡುವುದು ಅಗತ್ಯ
– ನೇರ ಬಿಸಿಲು, ಬೆಂಕಿಯ ಶಾಖ, ಅತಿ ತಂಪಾದ ಸ್ಥಳಗಳಲ್ಲಿ ಜೈವಿಕ ಗೊಬ್ಬರ ಶೇಖರಿಸಿ ಇಡಬಾರದು.
– ಲಕೋಟೆಯ ಮೇಲೆ ನಮೂದಿಸಿದ ಬೆಳೆಗಳಿಗೆ ಮಾತ್ರ ಉಪಯೋಗಿಸಬೇಕು. ಅವಧಿ ಮುಗಿಯುವುದರೊಳಗೆ ಇದನ್ನು ಬಳಸಬೇಕು.
– ಯಾವುದೇ ಕಾರಣಕ್ಕೂ ರಾಸಾ ಯನಿಕ ಗೊಬ್ಬರ ಮತ್ತು ಕ್ರಿಮಿನಾಶಕದೊಂದಿಗೆ ಮಿಶ್ರ ಮಾಡಬಾರದು.

- ಜಯಾನಂದ ಅಮೀನ್‌, ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next