Advertisement
ಉಡುಪಿ: ಉಡುಪಿ ಸುತ್ತಮುತ್ತ ಸುಮಾರು ಎರಡು ದಶಕಗಳ ಹಿಂದೆ ಹೂಡಿಕೆ ಮಾಡಿ ಆಸ್ತಿ ಖರೀದಿಸಿದವರು ಈಗ ಅದು ಪ್ರಯೋಜನಕ್ಕೆ ಬಾರದೆ ಬಡತನದ ಹಂತಕ್ಕೆ ಇಳಿದಿದ್ದಾರೆಂದರೆ ನಂಬುವುದು ಕಷ್ಟ, ಆದರೆ ಸತ್ಯ.
Related Articles
Advertisement
2012ರ ವರೆಗೆ ಅನಧಿಕೃತ ಲೇಔಟ್ (ರಸ್ತೆ, ಪಾರ್ಕಿಂಗ್ ಇತ್ಯಾದಿಗಳಿಗೆ ನಿಯಮಾವಳಿ ಪ್ರಕಾರ ಬಿಟ್ಟಿರದ ಲೇಔಟ್) ಕಾನೂನನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸಿರ ಲಿಲ್ಲ. ಬಳಿಕ ಒಮ್ಮೆಗೆ ಕಾನೂನನ್ನು ಬಿಗಿಗೊಳಿಸಿದ ಕಾರಣ ಮನೆ ಕಟ್ಟಲು ಹೊರಟವರಿಗೆ ಕಾನೂನು ಅಡ್ಡಿಯಾಗಿದೆ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೇ ಇಂತಹ 7,000 ಅರ್ಜಿಗಳಿವೆ. ರಾಜ್ಯದಲ್ಲಿ ಸುಮಾರು 17 ಲಕ್ಷ ಕಡತಗಳಿವೆ. ಒಮ್ಮೆ ಉಚ್ಚ ನ್ಯಾಯಾಲಯದಲ್ಲಿ ಇದು ಇತ್ಯರ್ಥವಾದರೂ ಪ್ರಕರಣ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದೆ. ಇದನ್ನು ಆದಷ್ಟು ಶೀಘ್ರ ಇತ್ಯರ್ಥಪಡಿಸುವ ಹೊಣೆಗಾರಿಕೆ ಈಗ ರಾಜ್ಯ ಸರಕಾರದ ಮೇಲಿದೆ. ಒಂದು ವೇಳೆ ಇದನ್ನು ಇತ್ಯರ್ಥಪಡಿಸಿದರೆ ಕೊರೊನಾ ಕಾಲಘಟ್ಟದಲ್ಲಿ ಆರ್ಥಿಕ ಹೊಡೆತ ಅನುಭವಿಸಿದ ಸರಕಾರಕ್ಕೂ ವರದಾನವಾಗುವ ಸಾಧ್ಯತೆ ಇದೆ.
ಆದಷ್ಟು ಶೀಘ್ರ ಇತ್ಯರ್ಥಯಾರೋ ಮಾಡಿದ ತಪ್ಪಿಗೆ ಯಾರೋ ಕಷ್ಟ ಅನುಭವಿಸುತ್ತಿರುವುದು ಸತ್ಯ. ಪ್ರಸ್ತುತ ಸನ್ನಿವೇಶದಲ್ಲಿ ಸರ್ವೋಚ್ಚ ನ್ಯಾಯಾಲಯ ಪ್ರಕರಣ ಇತ್ಯರ್ಥಗೊಳಿಸದೆ ಬೇರೆ ದಾರಿ ಇಲ್ಲ. ರಾಜ್ಯ ಸರಕಾರ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಮತ್ತು ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದೆ. ಆದಷ್ಟು ಶೀಘ್ರ ಪ್ರಕರಣ ಇತ್ಯರ್ಥವಾಗಿ ಹಿರಿಯ ನಾಗರಿಕರೂ ಸೇರಿದಂತೆ ಎಲ್ಲ ಸಂತ್ರಸ್ತರ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ. – ಕೆ.ರಾಘವೇಂದ್ರ ಕಿಣಿ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ