Advertisement

ಬೆಳಗಾವಿ: 5.42 ಕೋಟಿ ರೂ. ಕಾಮಗಾರಿಗೆ ಹೆಬ್ಬಾಳಕರ ಚಾಲನೆ

05:35 PM Feb 22, 2023 | Team Udayavani |

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸರಣಿ ಮುಂದುವರಿದಿದ್ದು, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸುಮಾರು 5.42 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.

Advertisement

ಅಂಬೇವಾಡಿ: ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ದೃಷ್ಟಿಯಿಂದ 2.26 ಕೋಟಿ ವೆಚ್ಚದ ಜಲಜೀವನ್‌ ಮಿಷನ್‌ ಕಾಮಗಾರಿಗೆ ಲಕ್ಷ್ಮೀ ಹೆಬ್ಟಾಳಕರ ಭೂಮಿ ಪೂಜೆ ನೆರವೇರಿಸಿದರು. ಯುವ ಮುಖಂಡ ಮೃಣಾಲ ಹೆಬ್ಟಾಳಕರ, ಅಮೂಲ್‌ ಭಾತಖಾಂಡೆ, ಪುಂಡಲೀಕ ಬಾಂಧುರ್ಗೆ, ವಿಕ್ರಂ ತೆರಳೆ, ಸಂಗೀತಾ ಅಂಬೇಕರ, ಯಲ್ಲಪ್ಪ ಲೋಹಾರ, ರಾಜು ಕೋಚೇರಿ, ಪ್ರಸಾದ ತೆರಳೆ, ಮನೋಹರ ಸಾವಂತ, ಸುಭಾಷ ನಾಯ್ಕ, ಜ್ಯೋತಿಬಾ ಶಹಾಪುರಕರ, ದತ್ತು ಚೌಗುಲೆ, ರಾಮಣ್ಣ ತೆರಳೆ ಇದ್ದರು.

ಬೆನಕನಹಳ್ಳಿ: ಮುಖ್ಯ ರಸ್ತೆಯ ಸೇತುವೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 2 ಕೋಟಿ ರೂ. ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ
ಹೆಬ್ಟಾಳಕರ ಸೇತುವೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಮುಖಂಡರಾದ ಮಹೇಶ ಕೋಲಕಾರ, ಬಾಳು ದೇಸೂರಕರ, ಕಲ್ಲಪ್ಪ ದೇಸೂರಕರ, ಮಲ್ಲೇಶ ಕುರಂಗಿ, ಮೋಹನ ಸಾಂಬ್ರೇಕರ, ಬಾಗಣ್ಣ, ರಾಜೇಶ ನಾಯ್ಕ, ಯಲ್ಲಾನಿ ನಾಯ್ಕ, ಕಲಾವತಿ ದೇಸೂರಕರ, ಮೀನಾಕ್ಷಿ ಪಾಟೀಲ, ಶಿಲ್ಪಾ ಮುಂಗಳೇಕರ, ಅಂಜನಾ ನಾಯ್ಕ, ರಾಹುಲ ಕನಗುಟ್ಕರ ಇತರರು ಇದ್ದರು.

ಬಿಜಗರಣಿ: ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ 49 ಲಕ್ಷ ರೂ. ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಟಾಳಕರ, ಕಾಂಕ್ರೀಟ್‌ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಮುಖಂಡರಾದ ಮನೋಹರ ಪಾಟೀಲ, ಮನು ಬೆಳಗಾಂವ್ಕರ, ಮೆಹಬೂಬ ನಾವಗೇಕರ, ಚಂದ್ರಭಾಗ ಜಾಧವ, ಶೀತಲ್‌ ತಾರಿಹಾಳಕರ, ರೇಖಾ ನಾಯ್ಕ, ಸಂದೀಪ ಅಷ್ಟೇಕರ, ಮೋಹನ ಸಾವಿ, ಜ್ಯೋತಿಬಾ ಮೋರೆ, ವಿಜಯ ಸವಿ, ಯಲ್ಲಪ್ಪ ಬೆಳಗಾಂವಕರ, ಪರುಶರಾಮ ಬಾಸ್ಕಳ, ಶಂಕರ ಮೋರೆ, ಪುಂಡಲೀಕ ಜಾಧವ, ಸಂತೋಷ ಕಾಂಬಳೆ, ಮಹಾದೇವ ಕಾಂಬಳೆ, ಅಶೋಕ ಕಾಂಬಳೆ, ಶಿವಾಜಿ ಕಾಂಬಳೆ ಇದ್ದರು.

Advertisement

ಕವಳೇವಾಡಿ: ಗ್ರಾಮದ ಒಳಾಂಗಣ ರಸ್ತೆಯ ಅಭಿವೃದ್ಧಿಗಾಗಿ 52 ಲಕ್ಷ ರೂ.ಬಿಡುಗಡೆ ಮಾಡಿಸಲಾಗಿದ್ದು, ಕಾಂಕ್ರೀಟ್‌ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಟಾಳಕರ್‌ ಪೂಜೆ ನೆರವೇರಿಸಿದರು. ಮುಖಂಡರಾದ ನಾಮದೇವ ಮೋರೆ, ಜ್ಯೋತಿಬಾ ಮೋರೆ, ಮೊನಪ್ಪ ಯಳ್ಳೂರಕರ, ರಘುನಾಥ ಮೋರೆ, ಆನಂದ ಬಾಚಿಕರ, ದೇವೆಂದ್ರ ಗಾವಡೆ, ಮೋನಪ್ಪ ಮೋರೆ, ಗೌತಮ ಕಣಬರಕರ, ಮನಿಷಾ ಸುತಾರ ಇದ್ದರು.

ಎಳೇಬೈಲ್‌: ಗ್ರಾಮದ ಒಳಾಂಗಣ ರಸ್ತೆಯ ಅಭಿವೃದ್ಧಿಗಾಗಿ 15 ಲಕ್ಷ ರೂ. ಬಿಡುಗಡೆ ಮಾಡಿಸಲಾಗಿದ್ದು, ಕಾಂಕ್ರೀಟ್‌ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಹೆಬ್ಟಾಳಕರ ಚಾಲನೆ ನೀಡಿದರು. ಮುಖಂಡರಾದ ಮಹೇಶ ಪಾಟೀಲ, ಗುಂಡು ಪಾಟೀಲ, ಶಿವಾಜಿ ಕೇಸರಕರ, ನಾಮದೇವ ಮರಗಾಳೆ, ಪರಶುರಾಮ ಕೇಸರಕರ, ನಿಂಗಪ್ಪ ಪಾಟೀಲ, ಕಲ್ಲಪ್ಪ ಪಾಟೀಲ, ಓಮನಿ ಯಳ್ಳೂರಕರ, ಪರಶುರಾಮ ಪಾಟೀಲ, ಮೋನಪ್ಪ ಮರಗಾಳೆ, ಮಲ್ಲಪ್ಪ ಪಾಟೀಲ, ಜ್ಯೋತಿಬಾ ಪಾಟೀಲ, ರಾಜು ಯಳ್ಳೂರಕರರ, ಧಾನಾಜಿ ಮೋರೆ ಇದ್ದರು.

ತುರಮರಿ: ತುರಮರಿ ಪ್ರಿಮಿಯರ್‌ ಲೀಗ್‌ ಪಂದ್ಯಾವಳಿಗಳಲ್ಲಿ ಗೆದ್ದ ತಂಡಗಳಿಗೆ ಯುವ ಮುಖಂಡ ಮೃಣಾಲ ಹೆಬ್ಬಾಳಕರ ಬಹುಮಾನ ವಿತರಿಸಿದರು.

ಮುಖಂಡರಾದ ಚಾಂಗದೇವ ಬೆಳಗಾಂವಕರ, ರಾಜು ಜಾಧವ, ವೈಶಾಲಿತಾಯಿ ಖಂಡೇಕರ, ನಾಗರಾಜ ಜಾಧವ, ಮಾರುತಿ ಖಂಡೇಕರ, ಬಾಳಾಸಾಹೇಬ ಅಷ್ಟೇಕರ, ಈರಪ್ಪ ಖಂಡೇಕರ, ವೈ.ಟಿ. ತಳವಾರ, ರಘುನಾಥ ಖಂಡೇಕರ, ಜ್ಞಾನೇಶ್ವರ ಕೋರಡೆ, ಸುಹಾಸ ಜಾಧವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next