ಬೆಳಗಾವಿ: ಸುಲಲಿತ ಜೀವನಕ್ಕೆ ಕುಂದಾ ನಗರಿ ಬೆಳಗಾವಿಗೆ 47ನೇ ಸ್ಥಾನ ಸಿಕ್ಕಿದ್ದು, 111 ಸ್ಮಾರ್ಟ್ ಸಿಟಿ ಯೋಜನೆಗಳ ಮಹಾನಗರಗಳ ಪೈಕಿ ಬೆಳಗಾವಿ ಈ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಕೇಂದ್ರ ನಗರಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಎರಡನೇರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಳಗಾವಿಗೆ ವಿವಿಧ ಸ್ಥರದಲ್ಲಿ ಉತ್ತಮ ಅಂಕಗಳು ಸಿಕ್ಕಿವೆ.ಸ್ಮಾರ್ಟ್ ಸಿಟಿ ಯೋಜನೆಯಡಿ ಇರುವ ಪಟ್ಟಿಯಲ್ಲಿ ಬೆಳಗಾವಿ ಸುಲಲಿತ ಜೀವನ ಸೂಚ್ಯಂಕದಲ್ಲಿ 50.28ಅಂಕ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಬೆಣ್ಣೆ ನಗರಿ ದಾವಣಗೆರೆ 9ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಬೆಳಗಾವಿ 47ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಜೀವನದ ಗುಣಮಟ್ಟದಲ್ಲಿ 52.47 ಅಂಕ ಪಡೆದು ಬೆಳಗಾವಿ 26ನೇ ಸ್ಥಾನ ಪಡೆದಿದೆ. ಆರ್ಥಿಕ ಸಾಮರ್ಥ್ಯದಲ್ಲಿ 7.21 ಅಂಕ ಪಡೆದು 31ನೇ ಸ್ಥಾನ, ಸುಸ್ಥಿರತೆಯಲ್ಲಿ 56.35 ಅಂಕ ಗಳಿಸಿ 17ನೇ ಸ್ಥಾನ ಹಾಗೂ ನಾಗರಿಕ ಗ್ರಹಿಕೆ ಸಮೀಕ್ಷೆಯಲ್ಲಿ 65.20 ಅಂಕ ಪಡೆದು 61ನೇ ಸ್ಥಾನ ಗಳಿಸಿಕೊಂಡಿದೆ. 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವಮಹಾನಗರಗಳ ಪೈಕಿ ಬೆಳಗಾವಿಗೆ 33ನೇ ಸ್ಥಾನ ಪ್ರಾಪ್ತವಾಗಿದೆ. ಮಹಾನಗರಗಳ ಸಾಧನೆ ಪಟ್ಟಿಯಲ್ಲಿ ಬೆಳಗಾವಿಗೆ 40.39 ಅಂಕ ಸಿಕ್ಕಿವೆ. ನಾಗರಿಕ ಶ್ರೇಣಿಯಲ್ಲಿ 52.92 ಅಂಕ ಸಿಕ್ಕಿವೆ. ಮಹಾನಗರಗಳ ಸಾಧನೆಯಲ್ಲಿ ಬೆಳಗಾವಿ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದು, ಉತ್ತಮ ಅಂಕಗಳನ್ನು ಗಳಿಸಿ ದೇಶದ ಸ್ಮಾರ್ಟ್ ಸಿಟಿಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸಾಧನೆಯ ಮಟ್ಟದಲ್ಲಿ ಬೆಳಗಾವಿ ಮಹಾನಗರ ಇನ್ನೂ ಬೆಳೆಯಬೇಕಾಗಿದೆ.
ಮಹಾನಗರ ಸೇವಾಕ್ಷೇತ್ರದಲ್ಲಿ 51.67 ಅಂಕ ಪಡೆದು 30ನೇ ಸ್ಥಾನ, ಹಣಕಾಸು ಕ್ಷೇತ್ರದಲ್ಲಿ 60.20 ಅಂಕಗಳೊಂದಿಗೆ 3ನೇ ಸ್ಥಾನ, ತಂತ್ರಜ್ಞಾನ ಕ್ಷೇತ್ರದಲ್ಲಿ 17.38 ಅಂಕಗಳೊಂದಿಗೆ 40ನೇ ಸ್ಥಾನ, ಯೋಜನಾಕ್ಷೇತ್ರದಲ್ಲಿ 21.39 ಅಂಕಗಳೊಂದಿಗೆ 42ನೇ ಸ್ಥಾನ, ಆಡಳಿತದಲ್ಲಿ 35.16 ಅಂಕಗಳೊಂದಿಗೆ 45ನೇ ಸ್ಥಾನಬೆಳಗಾವಿ ಪಡೆದುಕೊಂಡಿದೆ.
ಕೇಂದ್ರ ನಗರಾಭಿವೃದ್ಧಿ ಇಲಾಖೆ ದೇಶದ 111 ಸ್ಮಾರ್ಟ್ ಸಿಟಿ ನಗರಗಳನ್ನು ಈ ಪ್ರಕ್ರಿಯೆಯಲ್ಲಿಇಟ್ಟುಕೊಂಡಿದೆ. ಒಟ್ಟು 15 ಅಂಶಗಳನ್ನುಮುಂದಿಟ್ಟುಕೊಂಡು ನಗರಗಳ ಮೌಲ್ಯಮಾಪನಮಾಡಲಾಗಿದೆ. ಅನೇಕ ಅಂಶಗಳ ಆಧಾರದಮೇಲೆ ಅಂಕ ನೀಡಲಾಗಿದೆ. ಅಂಕಗಳ ಆಧಾರದ ಮೇಲೆ ಆಯಾ ನಗರಗಳು ಸ್ಥಾನ ಪಡೆದುಕೊಂಡಿವೆ. ಬೆಳಗಾವಿ ಸುಲಲಿತ ಜೀವನದಲ್ಲಿ 47ನೇ ಸಾನ ಪಡೆದಿರುವುದು ದೊಡ್ಡ ಸಾಧನೆ ಏನಲ್ಲ. ಆದರೆಇನ್ನೂ ಹೆಚ್ಚಿನ ಅಂಕ ಪಡೆದು ಹೆಚ್ಚಿನ ಸ್ಥಾನ ಪಡೆಯಬೇಕಾಗಿದೆ.
-ಭೈರೋಬಾ ಕಾಂಬಳೆ