Advertisement
ಬಳಿಕ ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಕಂಪೆನಿಯ ಸಿಎಸ್‌ಆರ್ ಯೋಜನೆಯಡಿ ಬೆಳಪು ಗ್ರಾ.ಪಂ.ಗೆ 3 ವರ್ಷದ ಅವಧಿಗೆ 3 ಕೋ.ರೂ. ನೆರವು ಘೋಷಿಸಿದ್ದು, ಪಂಚಾಯತ್ ನೀಡಿರುವ ಕ್ರಿಯಾ ಯೋಜನೆ ಮೇರೆಗೆ ಪ್ರತೀ ವರ್ಷ 1 ಕೋಟಿ ರೂ. ಮೊತ್ತದಷ್ಟು ಅಭಿವೃದ್ಧಿ ಕಾಮಗಾರಿಯನ್ನು ನಿರ್ವಹಿಸಲಿದೆ. 2017-18ನೇ ಸಾಲಿನಲ್ಲಿ ನಿರ್ವಹಿಸ ಬೇಕಾದ ಅಭಿವೃದ್ಧಿ ಕೆಲಸಗಳ ಕ್ರಿಯಾ ಯೋಜನೆಯ ಪಟ್ಟಿಯನ್ನು ಪಂಚಾಯತ್ ನೀಡಿದ್ದು, ಅತೀ ಶೀಘ್ರದಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದರು.
ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಅದಾನಿ ಸಂಸ್ಥೆಯು ಗ್ರಾಮೀಣ ಮೂಲಸೌಕರ್ಯದಡಿ ಬೆಳಪು ಗ್ರಾಮದ ರಸ್ತೆ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಸೌಕರ್ಯ, ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶಿಕ್ಷಣ ಪರಿಕರ, ಬಡವರಿಗೆ ವೈದ್ಯಕೀಯ ನೆರವು, ಗ್ರಾಮಸ್ಥರಿಗೆ ಫಲ ನೀಡುವ ಸಸಿ ವಿತರಣೆ, ರಸ್ತೆಗಳಿಗೆ ವಿದ್ಯುದ್ದೀಪ ಅಳವಡಿಕೆ ಸೇರಿದಂತೆ ಹಲವಾರು ಸಮಾಜಮುಖೀ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬರುತ್ತಿದೆ ಎಂದರು. ಬೆಳಪು ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಭಟ್, ತಾ.ಪಂ. ಸದಸ್ಯ ಯು.ಸಿ. ಶೇಖಬ್ಬ, ಗ್ರಾ.ಪಂ. ಸದಸ್ಯರಾದ ದಿನೇಶ್ ಪೂಜಾರಿ, ಸುರೇಶ್ ದೇವಾಡಿಗ, ಅನಿತಾ ಆನಂದ, ನೂರ್ ಜಹಾನ್, ಪೈಗಂ ಬಾನು, ವಿಜಯಲಕ್ಷ್ಮೀ ದೇವಾಡಿಗ, ಕರುಣಾಕರ ಶೆಟ್ಟಿ, ಉಷಾ ವಾಸು, ಶರತ್ ಕುಮಾರ್, ಅಭಿವೃದ್ಧಿ ಅಧಿಕಾರಿ ಎಚ್.ಆರ್. ರಮೇಶ್, ಸಿಎ ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀವತ್ಸ ರಾವ್, ಗೃಹರಕ್ಷಕ ದಳ ಕಾಪು ಘಟಕದ ಲಕ್ಷ್ಮೀನಾರಾಯಣ, ಅದಾನಿ ಯುಪಿಸಿಎಲ್ ಕಂಪೆನಿಯ ಎಜಿಎಂ ಗಿರೀಶ್ ನಾವಡ, ಅದಾನಿ ಫೌಂಡೇಶನ್ ಸಿಬಂದಿಗಳಾದ ವಿನೀತ್ ಅಂಚನ್, ಅನುದೀಪ್ ಪೂಜಾರಿ, ಸುಕೇಶ್ ಸುವರ್ಣ ಉಪಸ್ಥಿತರಿದ್ದರು.