Advertisement
ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಎಸ್‌ಡಿಪಿಐ ಅಭ್ಯರ್ಥಿಯಾಗಿ ಅನ್ವರ್ ಸಾದತ್, ಪಕ್ಷೇತರ ಅಭ್ಯರ್ಥಿಯಾಗಿ ಮೊಹಮ್ಮದ್ ರಿಯಾಝ್ ಅವರು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಕಿಶೋರ್ ಕುಮಾರ್ ಪುತ್ತೂರು ಹಾಗೂ ರಾಜು ಪುಜಾರಿ ತಲಾ 2 ಸೆಟ್ ನಾಮಪತ್ರ ಸಲ್ಲಿಸಿದರು. ಕಿಶೋರ್ ಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಪ್ರತಾಪ್‌ಸಿಂಹ ನಾಯಕ್, ಯಶಪಾಲ್ ಸುವರ್ಣ, ಪ್ರಮುಖರಾದ ಸತೀಶ್ ಕುಂಪಲ, ಕಿಶೋರ್ ಕುಂದಾಪುರ, ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.
Related Articles
Advertisement
ರಾಜು ಪೂಜಾರಿ ಜತೆಗೆ ರಮಾನಾಥ ರೈ, ಜಯಪ್ರಕಾಶ್ ಹೆಗ್ಡೆ, ಮಂಜುನಾಥ ಭಂಡಾರಿ, ಐವನ್ ಡಿ’ಸೋಜಾ ಅವರಿದ್ದರು.
ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ವಿವರಮಂಗಳೂರು: ಬಿಜೆಪಿ ಅಭ್ಯರ್ಥಿ ಕಿಶೋರ್ ಪುತ್ತೂರು ಅವರು ಒಟ್ಟು 33.61 ಲ.ರೂ. ಹಾಗೂ ಅವರ ಪತ್ನಿ 46.85 ಲಕ್ಷ ರೂ. ಮೌಲ್ಯದ ಚರಾಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಪರಶು ಲ್ಯಾಂಡ್ ಫಿಲ್ಮ್ಸ್ ನಲ್ಲಿ ಮಾಡಿರುವ 17.87 ಲ.ರೂ. ಹೂಡಿಕೆ ಸೇರಿದೆ. ಕಿಶೋರ್ ಅವರು ಪುತ್ತೂರು ತಾಲೂಕಿನ ಸರ್ವೆಯಲ್ಲಿ ಸ್ವಂತ ಜಾಗ ಸಹಿತ ಹೆಂಚಿನ ಮನೆ, ಮಂಗಳೂರು ಪಡುಪೆರಾರದಲ್ಲಿ ಕೃಷಿಯೇತರ ಜಮೀನು ಸಹಿತ 1.12 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರಿಗೆ 6.06 ಲಕ್ಷ ರೂ.ನ ಚಿನ್ನದ ಸಾಲ, 11.88 ಲ.ರೂ. ದೀರ್ಘಾವಧಿ ಕೃಷಿ ಸಾಲ, ಪತ್ನಿಗೆ 32.8 ಲ.ರೂ. ಕಾರಿನ ಸಾಲವಿದೆ. ರಾಜು ಪೂಜಾರಿ ಆಸ್ತಿ ವಿವರ
ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ವಿವಿಧ ಬ್ಯಾಂಕ್‌ಗಳಲ್ಲಿ 2.48 ಲ.ರೂ. ಮೊತ್ತದ ಠೇವಣಿ, 6.24 ಲ.ರೂ. ಎಲ್‌ಐಸಿ, 1.88 ಲ.ರೂ. ಮೌಲ್ಯದ ಷೇರುಗಳು, ಒಂದು ಹ್ಯುಂಡೆ„ ಕ್ರೇಟಾ ಕಾರು, 1.82 ಲ.ರೂ ಮೌಲ್ಯದ ಚಿನ್ನ ಸಹಿತ 40.32 ಲ.ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 17.40 ಲ.ರೂ., ಮಕ್ಕಳಿಬ್ಬರು 1.02 ಲ.ರೂ. ಹಾಗೂ 1.16 ಲ.ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ರಾಜು ಪೂಜಾರಿ ಒಟ್ಟು 65.40 ಲ.ರೂ. ಮೌಲ್ಯದ ಕೃಷಿ ಭೂಮಿ, ವಸತಿ ಕಟ್ಟಡ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 24.04 ಲ.ರೂ. ಸಾಲ ಪಡೆದಿದ್ದಾರೆ.