Advertisement
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಂಡಕಲ್‌ನ ಅರಗೊಂಡ ಅರವಿಂದ ಉರೂಫ್ ಅರುಣ ಕುಮಾರ (47) ಬಂಧಿತ ಆರೋಪಿ. ಬೆಳಗಾವಿ ನಗರದ ಕೃಷ್ಣದೇವರಾಯ ಸರ್ಕಲ್‌ನಲ್ಲಿ ಅರವಿಂದ ನೀಟ್ ಗೈಡ್‌ಲೈನ್ಸ್ ಎಂಬ ಸಂಸ್ಥೆ ಆರಂಭಿಸಿದ್ದ ಆತ ಕೆಲವು ಶಿಕ್ಷಕರನ್ನು ನೇಮಿಸಿ ನೀಟ್ ಮಾರ್ಗದರ್ಶನ ನೀಡುತ್ತಿದ್ದ.
ಬೇರೆ ಬೇರೆ ಹೆಸರಿನಲ್ಲಿ ಗುರುಸಿಕೊಳ್ಳುತ್ತಿದ್ದ ಆತ ಬೆಳಗಾವಿಯಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಗುರುತಿನ ಚೀಟಿ ನೀಡಿ ಕಚೇರಿ ಬಾಡಿಗೆ ಪಡೆದಿದ್ದ. ಆತನ ಮೇಲೆ ತೆಲಂಗಾಣ, ಬೆಂಗಳೂರು, ಹೈದ್ರಾಬಾದ್‌ನಲ್ಲೂ ವಂಚನೆ ಮಾಡಿದ್ದಾನೆನ್ನಲಾಗಿದೆ. ಹೈದ್ರಾಬಾದ್‌ನಲ್ಲಿ 11, ಬೆಂಗಳೂರು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಕೇಸ್‌ಗಳಿವೆ. ವಂಚಿಸಿರುವ ಹಣದಿಂದ ಕೆಜಿಗಟ್ಟಲೆ ಚಿನ್ನ ಖರೀದಿಸಿದ್ದಾನೆ ಎನ್ನಲಾಗಿದೆ.