Advertisement

ಅಮೆರಿಕದ ಪ್ರಜೆ ಆಗಿರುವುದಕ್ಕೆ ನಾಚಿಕೆಯಾಗ್ತಿದೆ: ಜೇಮಿ

03:55 AM Jul 16, 2017 | Team Udayavani |

ನ್ಯೂಯಾರ್ಕ್‌: ಅಮೆರಿಕದ ಜೆಪಿ ಮೋರ್ಗನ್‌ ಚೇಸ್‌ ಕಂಪೆನಿಯ ಸಿಇಒ, ಶ್ವೇತಭವನದ ಉದ್ಯಮ ಸಲಹಾ ಸಮಿತಿ ಮುಖ್ಯಸ್ಥರೂ ಆಗಿರುವ ಜೇಮಿ ಡಿಮಾನ್‌ ಅವರು ಇದೀಗ ತಮ್ಮ ದೇಶದ ಬಗ್ಗೆಯೇ ಅಸಹನೆ ವ್ಯಕ್ತಪಡಿಸಿದ್ದಾರೆ. 

Advertisement

ಶನಿವಾರ ಮಾತನಾಡಿದ ಅವರು, “ನನಗೆ ಅಮೆರಿಕದ ಪ್ರಜೆ ಆಗಿರುವುದಕ್ಕೆ ಮುಜುಗರವಾಗುತ್ತಿದೆ. ಈ ದೇಶದಲ್ಲಿ ನಾವು ಕೆಲ ಮೂರ್ಖತನದ ನೀತಿಗಳಿಗೆ ಕಿವಿಗೊಡಬೇಕಾಗಿರು ವುದು ಕೂಡ ಅಸಹನೀಯ ಸಂಗತಿ. ಮಹತ್ವದ ಶಾಸನ ಗಳನ್ನು ತರಲಾಗುತ್ತಿಲ್ಲ. ಇದು ನಮ್ಮನ್ನು ಹಿಂದಕ್ಕೆ ನೂಕು ತ್ತಿದೆ’ ಎಂದಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಭಾರತ, ಚೀನ ಪ್ರಧಾನಿಗಳನ್ನು ಭೇಟಿಯಾಗಿದ್ದೆ. ಉದ್ಯಮಗಳನ್ನು ಉತ್ತೇಜಿ ಸಲು ಎಂಥ ಪ್ರಾಯೋಗಿಕ ನೀತಿಗಳನ್ನು ಜಾರಿ ಮಾಡಬೇಕು ಎಂಬುದು ಆ ದೇಶಗಳಿಗೆ ಗೊತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next