Advertisement

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

01:56 PM Jan 07, 2025 | Team Udayavani |

ಮುಂಬಯಿ/ ಹೈದರಾಬಾದ್: ಖ್ಯಾತ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರ ಕೌಟುಂಬಿಕ ಕಲಹ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

Advertisement

ಕೌಟುಂಬಿಕ ದೌರ್ಜನ್ಯದ ಆರೋಪದಡಿಯಲ್ಲಿ ಹನ್ಸಿಕಾ, ಅವರ ಸಹೋದರ ಪ್ರಶಾಂತ್‌ ಹಾಗೂ ತಾಯಿ ಮೋನಾ ಮೋಟ್ವಾನಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಏನಿದು ಘಟನೆ?: 2020ರಲ್ಲಿ ಹನ್ಸಿಕಾ ಸಹೋದರ ಕಿರುತೆರೆ ನಟಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್​ಳನ್ನು ವಿವಾಹವಾಗಿದ್ದರು. ಆದರೆ 2022ರಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸಲು ಶುರು ಮಾಡಿದ್ದರು.

ಇದೀಗ ನಟಿ ಮುಸ್ಕಾನ್‌ ತನ್ನ ವಿವಾಹದ ಸಂದರ್ಭದಲ್ಲಿ ತಮಗಾದ ನೋವಿನ ಬಗ್ಗೆ ಮಾತನಾಡಿದ್ದು, ಕೌಟುಂಬಿಕ ದೌರ್ಜನ್ಯವಾಗಿದ್ದರ ಬಗ್ಗೆ ದೂರು ನೀಡಿದ್ದಾರೆ.

Advertisement

ನನ್ನ ಮದುವೆಯ ವಿಚಾರದಲ್ಲಿ ಅತ್ತೆ ಮೋನಾ ಹಾಗೂ ನಾದಿನಿ ಹನ್ಸಿಕಾ ಮಧ್ಯ ಬಂದು ಮೂಗು ತೂರಿಸಿದ್ದರು. ನನ್ನ ಪತಿ ನನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದರು. ಪರಿಣಾಮ ನನ್ನ ಮುಖ ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿತ್ತು. ಮೋಟ್ವಾನಿ ಕುಟುಂಬದ ಈ ಮೂವರು ನನ್ನಿಂದ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಕೇಳುತ್ತಿದ್ದರು. ಇದಲ್ಲದೆ ಆಸ್ತಿಯ ವಿಚಾರದಲ್ಲೂ ಇವರು ನನಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಕಾನೂನು ಹೋರಾಟವನ್ನು ಮಾಡುತ್ತಿದ್ದೇನೆ ಹಾಗಾಗಿ ಹೆಚ್ಚು ಏನನ್ನು ಹೇಳಲು ಸಾಧ್ಯವಿಲ್ಲವೆಂದು ನಟಿ ಮಾಧ್ಯಮದ ಮುಂದೆ ಹೇಳಿದ್ದಾರೆ.

ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಕಾಯ್ದೆ 498-ಎ, 323, 504, 506, ಮತ್ತು 34ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಹಿಂದಿ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಮುಸ್ಕಾನ್‌ ಫೇಮ್‌ ಗಿಟ್ಟಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next