Advertisement

Davanagere: ಮೂವರು ಸುಲಿಗೆಕೋರರ 8 ಕಿ.ಮೀ. ಬೆನ್ನತ್ತಿ ಬಂಧಿಸಿದ ಪೊಲೀಸರು!

11:32 PM Dec 01, 2024 | Team Udayavani |

ದಾವಣಗೆರೆ: ಇಬ್ಬರ ಮೇಲೆ ಹಲ್ಲೆ ನಡೆಸಿ, ಬೆದರಿಸಿ ನಗದು, ಬೆಳ್ಳಿ ಉಂಗುರ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ಸುಲಿಗೆಕೋರರ ಹೊಯ್ಸಳ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಂಟು ಕಿಲೋ ಮೀಟರ್‌  ಬೆನ್ನತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ದಾವಣಗೆರೆಯ ತರಣ್, ಸಿಕಂದರ್ ಮತ್ತು ಐಗೂರು ಗ್ರಾಮದ ವಾಸಿ ಪ್ರಶಾಂತ್ ಬಂಧಿತರು. ದಾವಣಗೆರೆ ತಾಲೂಕಿನ ಕಾಟೇಹಳ್ಳಿ ಗ್ರಾಮದ ದಾದಾಪೀರ್ ಮತ್ತು ಅಹಮ್ಮದ್ ಎಂಬುವರು ದಾವಣಗೆರೆಯಲ್ಲಿ ತರಗಾರ ಕೆಲಸ ಮುಗಿಸಿಕೊಂಡು ಐಗೂರು ಗೊಲ್ಲರಹಟ್ಟಿ ಬಳಿಯ ಡಾಬಾದಲ್ಲಿ ಊಟ ಮಾಡಿ, ವಿಶ್ರಾಂತಿ ಮಾಡುತ್ತಿರುವಾಗ ಮೂವರು ಸುಲಿಗೆಕೋರರು ಹಲ್ಲೆ ನಡೆಸಿ, ಬೆದರಿಸಿ 2  ಸಾವಿರ ರೂ. ನಗದು, ಎರಡು ಬೆಳ್ಳಿ ಉಂಗುರ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಹಲ್ಲೆಗೆ ಒಳಗಾದವರು ಸ್ಥಳೀಯರ ಸಹಕಾರದಿಂದ ತುರ್ತು ಸಹಾಯವಾಣಿ-112ಕ್ಕೆ ಕರೆ ಮಾಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಹೊಯ್ಸಳ-112 ಅಧಿಕಾರಿಗಳು ಬಸಾಪುರ ಮಾರ್ಗದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರ ಬೆನ್ನತ್ತಿದ್ದಾಗ ನಿಲ್ಲಿಸಲಿಲ್ಲ. ಎಂಟು ಕಿಲೋ ಮೀಟರ್‌ನಷ್ಟು ದೂರ ಬೆನ್ನತ್ತಿ ಮೂವರು ಸುಲಿಗೆಕೋರರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಯ್ಸಳ-112 ಅಧಿಕಾರಿಗಳಾದ ಸಣ್ಣ ನಾಗೇಂದ್ರ, ವೀರೇಶ್ ಅವರ ಕಾರ್ಯಾಚರಣೆಗೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next