Advertisement

ಸೈಕಲ್‌ ಸಾಧಕಿ ಜ್ಯೋತಿಗೆ ಇವಾಂಕಾ ಟ್ರಂಪ್‌ ಅಭಿನಂದನೆ

09:59 PM May 23, 2020 | Sriram |

ವಾಷಿಂಗ್ಟನ್‌: ಲಾಕ್‌ಡೌನ್‌ ನಡುವೆ ತನ್ನ ಗಾಯಾಳು ತಂದೆಯನ್ನು ಸೈಕಲ್‌ ಮೇಲೆ ಕೂರಿಸಿಕೊಂಡು ಗುರುಗ್ರಾಮದಿಂದ 1,200 ಕಿ.ಮೀ. ದೂರದ ಬಿಹಾರದ ಸ್ವಗ್ರಾಮಕ್ಕೆ ಕರೆತಂದ 15ರ ಹರೆಯದ ಬಾಲಕಿ ಜ್ಯೋತಿ ಕುಮಾರಿ ಸಾಹಸವೀಗ ಅಮೆರಿಕದ ವೈಟ್‌ಹೌಸ್‌ನಲ್ಲೂ ಪ್ರತಿಧ್ವನಿಸಿದೆ. ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರಿ, ವೈಟ್‌ಹೌಸ್‌ನ ಹಿರಿಯ ಸಲಹೆಗಾರ್ತಿ ಇವಾಂಕಾ ಟ್ರಂಪ್‌ ಅವರ ಪ್ರಶಂಸೆಗೆ ಪಾತ್ರವಾಗಿದೆ.

Advertisement

“ಇದೊಂದು ವಾತ್ಸಲ್ಯ ಹಾಗೂ ಸಹಿಷ್ಣುತೆಯ ಸುಮಧುರ ಹೆಜ್ಜೆ’ ಎಂಬುದಾಗಿ ಇವಾಂಕಾ ಟ್ರಂಪ್‌ ಹೊಗಳಿದ್ದಾರೆ. ತಂದೆಯೊಂದಿಗೆ ಮೇ 10ರಂದು ಸೈಕಲ್‌ ಪಯಣ ಆರಂಭಿಸಿದ್ದ ಜ್ಯೋತಿ, ಮೇ 16ರಂದು ಸ್ವಗ್ರಾಮ ತಲುಪಿದ್ದರು. 8ನೇ ತರಗತಿಯ ಈ ವಿದ್ಯಾರ್ಥಿನಿಯ ಸಾಹಸವನ್ನು ಗಮನಿಸಿದ ಸೈಕ್ಲಿಂಗ್‌ ಫೆಡರೇಶನ್‌ ಆಫ್ ಇಂಡಿಯಾ (ಸಿಎಫ್ಐ), ಆಕೆಯನ್ನು ಟ್ರಯಲ್ಸ್‌ಗೆ ಆಹ್ವಾನಿಸಿತ್ತು. ಈಗ ಜ್ಯೋತಿ ಕುಮಾರಿ ಟ್ರಯಲ್ಸ್‌ನಲ್ಲೂ ಉತ್ತೀರ್ಣರಾಗಿದ್ದು, ಇನ್ನು ಟ್ರೇನಿಯಾಗಿ ಕರ್ತವ್ಯ ನಿಭಾಯಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next