Advertisement

ರಾಜಕಾರಣಿಗಳೊಂದಿಗೆ ಸಂಪರ್ಕವಿರಲಿ-ಸಂಬಂಧವಲ್ಲ

02:09 PM Aug 28, 2022 | Team Udayavani |

ಕಲಬುರಗಿ: “ಸುದ್ದಿಯನ್ನು ಸುದ್ದಿಯನ್ನಾಗಿ ನೋಡಬೇಕಷ್ಟೆ. ನಮ್ಮ ವೈಯಕ್ತಿಕ ವಿಚಾರಗಳನ್ನು ಅದರಲ್ಲಿ ಸೇರಿಸಬಾರದು. ರಾಜಕಾರಣಿಗಳ ಜೊತೆ ಉತ್ತಮ ಸಂಪರ್ಕ ಇಟ್ಟುಕೊಳ್ಳಬೇಕು. ಆದರೆ ಸಂಬಂಧ ಬೆಳೆಸಬಾರದು’ ಎಂದು ಹೊಸ ತಲೆಮಾರಿನ ಪತ್ರಕರ್ತರಿಗೆ ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್‌ ಕಿವಿಮಾತು ಹೇಳಿದರು.

Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಪತ್ರಕರ್ತರಿಗೆ ಅವರ ಮನೆ ಅಂಗಳದಲ್ಲಿ ಗೌರವಿಸುವ ಸರಣಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ತಮ್ಮ ವೃತ್ತಿ ಜೀವನದ ಸಿಹಿ-ಕಹಿ ಘಟನೆಗಳನ್ನು ಬಿಚ್ಚಿಟ್ಟರು. “ನನ್ನ 16-17ನೇ ವಯಸ್ಸಿನಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ಹಾಕುತ್ತಿದ್ದೆ. ಆಗ ಬೆಳಗ್ಗೆ 3ಗಂಟೆಗೆ ಎದ್ದೇಳಬೇಕಿತ್ತು. ನನಗೆ ಆಗ ತಿಂಗಳಿಗೆ 17.50ಪೈಸೆ ನೀಡುತ್ತಿದ್ದರು. ನಂತರ ಯುಎನ್‌ಐ ಸುದ್ದಿ ಸಂಸ್ಥೆಯಲ್ಲಿ ಮೆಸೆಂಜರ್‌ ಹುದ್ದೆಗೆ ಸೇರಿದೆ. ಆಗ ನನಗೆ 90ರೂ. ಸಂಬಳ ನೀಡಲಾಗುತ್ತಿತ್ತು. ಟೆಲಿಪ್ರಿಂಟರ್‌-ರಿಪೋರ್ಟ್‌ರ್‌ ಆಗಿದ್ದ ನನಗೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಇದನ್ನು ಗಮನಿಸಿದ ನಾರಾಯಣ ಮತ್ತು ಥರಕನ್‌ ಎನ್ನುವರು ಸಹಾಯ ಮಾಡಿದರು’ ಎಂದು ನೆನಪಿಸಿಕೊಂಡರು.

“ಬೆಂಗಳೂರಿನಲ್ಲಿದ್ದ ನನಗೆ ಮದ್ರಾಸ್‌ಗೆ ವರ್ಗಾವಣೆ ಆಯಿತು. ಅಲ್ಲಿಂದ ಹುಬ್ಬಳ್ಳಿಗೆ ವರ್ಗವಾಯಿತು. 1993ರಲ್ಲಿ ದಿ ಹಿಂದೂ ಪತ್ರಿಕೆಗೆ ಸೇರಿಕೊಂಡು ಕಲಬುರಗಿಗೆ ಬಂದೆ. ಕಲಬುರಗಿ ಜನ ನನ್ನನ್ನು ಬಿಡಲಿಲ್ಲ. ನಾನು ಅವರನ್ನು ಬಿಡಲಿಲ್ಲವೋ ಎನ್ನುವಂತೆ ನಿವೃತ್ತಿಯಾಗುವವರೆಗೆ ಇಲ್ಲಿಯೇ ಸೇವೆ ಸಲ್ಲಿಸಿ ಇಲ್ಲಿಯೇ ನೆಲೆ ನಿಂತಿದ್ದೇನೆ’ ಎಂದು ತಮ್ಮ ವೃತ್ತಿ ಬದಕಿನಲ್ಲಾದ ಸಾಕಷ್ಟು ಏರಿಳಿತದ ಘಟನೆಗಳನ್ನು ಅವರು ಮೆಲಕು ಹಾಕಿದರು.

ಹಿಂದೂ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಮದನ ಮೋಹನ್‌, ಸೂರ್ಯನಾರಾಯಣ, ಬೆಳಗಾಂವಕರ್‌ ಎನ್ನುವರು ನನಗೆ ಬಹಳ ಸಹಾಯ ಮಾಡಿದರು. ಕಲಬುರಗಿಯಲ್ಲಿದ್ದಾಗ ಮುಖ್ಯಮಂತ್ರಿ, ಮಂತ್ರಿ ಮಹೋದಯರನ್ನು ಬೇಟಿಯಾಗುವ, ವರದಿ ಮಾಡುವ ವೇಳೆ ಸುದ್ದಿಗಾಗಿ ರಾಜಕಾರಣಿಗಳೊಂದಿಗೆ ಸಾಕಷ್ಟು ಗುದ್ದಾಡಿದ್ದೇನೆ. ತಮಿಳು, ಇಂಗ್ಲಿಷ್‌ ಹಿಂದಿ ಭಾಷೆ ಗೊತ್ತಿದ್ದ ನನಗೆ ಕನ್ನಡ ಕಲಿಯುವ ಅವಕಾಶ ಇಲ್ಲಿ ಸಿಕ್ಕಿತು. ಮಾಜಿ ಮುಖ್ಯಮಂತ್ರಿಗಳಾದ ದೇವರಾಜು ಅರಸು, ಆರ್‌. ಗುಂಡೂರಾವ್‌, ಬಂಗಾರಪ್ಪ, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್‌.ಆರ್‌. ಬೊಮ್ಮಾಯಿ, ಯಡಿಯೂರಪ್ಪ, ಧರ್ಮಸಿಂಗ್‌, ಎಂ.ಜಿ. ರಾಮಂಚಂದ್ರನ್‌, ಕರುಣಾನಿ  ಲೋಕಸಭೆ ವಿರೋಧ ಪಕ್ಷದ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಮುಂತದವರನ್ನು ಕಂಡು, ಪ್ರಸ್‌ ಮೀಟ್‌ನಲ್ಲಿ ಹಾಜರಾಗಿ ಸುದ್ದಿ ಮಾಡಿದ್ದು ನನ್ನ ಸ್ಮೃತಿಪಟಲದಲ್ಲಿ ಇನ್ನೂ ಹಚ್ಚ ಹಸಿರಾಗಿದೆ ಎಂದು ನೆನಪಿಸಿಕೊಂಡರು.

ಸಂಘದ ಜಿಲ್ಲಾಧ್ಯಕ್ಷ ಬಾಬರಾವ ಯಡ್ರಾಮಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ|ಶಿವರಂಜನ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಉಪಾಧ್ಯಕ್ಷ ದೇವಿಂದ್ರಪ್ಪ ಆವಂಟಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಾಜು ಕೋಷ್ಠಿ, ಪತ್ರಕರ್ತರಾದ ಪ್ರವೀಣ ಪಾರಾ, ಜಗದೀಶ ಕುಂಬಾರ ಮತ್ತು ಪದಾ ಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next