Advertisement
ಸಂಡೂರು ಉಪಚುನಾವಣೆ ಪ್ರಚಾರ ನಿಮಿತ್ತ ಆಗಮಿಸಿ ಕ್ಷೇತ್ರದ ಚೋರನೂರು ಗ್ರಾಮದಲ್ಲಿ ಯುವ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಹಿರಿಯರಿದ್ದಾರೆ, ಭಾಷೆಯ ಮೇಲೆ ಹಿಡಿತವಿರಬೇಕು.ಮೋದಿಯವರನ್ನು ರಾಜಕೀಯ ಪುಡಾರಿ ಎನ್ನುತ್ತಿರಾ? ನಿಮ್ಮ ಭಾಷೆ ಏನಾಗಿದೆ.ಯಡಿಯೂರಪ್ಪ ಮೂರು ನಾಲ್ಕು ದಶಕಗಳಿಂದ ಹೋರಾಟ ಮಾಡಿ ಮುಖ್ಯಮಂತ್ರಿ ಯಾಗಿದ್ದಾರೆ. ಸಿದ್ದರಾಮಯ್ಯನವರೇ ನೀವು ಯಾವ ಹೋರಾಟದಿಂದ ಮುಖ್ಯಮಂತ್ರಿಯಾಗಿದ್ದೀರಿ? ಅದೃಷ್ಟದ ಮುಖ್ಯಮಂತ್ರಿಯಾದ ನಿಮಗೆ ಮೋದಿ ಬಗ್ಗೆ ಮಾತನಾಡೋ ಯೋಗ್ಯತೆ ಇದೆಯಾ? ಎಂದು ಆಕ್ರೋಶ ಹೊರ ಹಾಕಿದರು.
ಬಳ್ಳಾರಿ ಪಾದಯಾತ್ರೆ ಮಾಡಿದ್ದು ನಿಮ್ಮ ಅಧಿಕಾರಕ್ಕಾಗಿ, ಅಹಿಂದ ನಿಮ್ಮ ವೈಯಕ್ತಿಕ ಬೆಳವಣಿಗೆ ಗಾಗಿ ಎಂದರು. ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿ ‘ಬಿಟ್ಟಿ ಪ್ರಚಾರದ ಬಗ್ಗೆ ಹೆಮ್ಮೆ ಇದ್ರೇ ಬಳಸಿಕೊಳ್ಳಿ.
ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ.ಮಠಮಂದಿರ ಮತ್ತು ರೈತರ ಭೂಮಿ ಕಬಳಿಸುತ್ತಾರೆ.
ಜವಾಬ್ದಾರಿಯುತ ಸಚಿವ ಮಾಡುವ ಕೆಲಸವೇ ಇದು.ನೋಟಿಸ್ ಹಿಂಪಡೆದರಷ್ಟೇ ಸಾಲುವುದಿಲ್ಲ ಗೆಜೆಟ್ ನೋಟಿಫೀಕೇಷನ್ ಕೂಡ ವಾಪಸ್ ಪಡೆಯಲಿ ಎಂದು ಒತ್ತಾಯಿಸಿದರು.