Advertisement

ಸಂಜಯ್ ಮಾಂಜ್ರೇಕರ್‌ ಮನವಿ ತಿರಸ್ಕರಿಸಿದ ಬಿಸಿಸಿಐ

01:53 AM Aug 06, 2020 | Hari Prasad |

ಮುಂಬಯಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ವೀಕ್ಷಕ ವಿವರಣೆಕಾರರ ಯಾದಿಯಲ್ಲಿ ಮತ್ತೆ ತನಗೆ ಸ್ಥಾನ ಕೊಡಿ ಎಂಬ ಸಂಜಯ್‌ ಮಾಂಜ್ರೇಕರ್‌ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ.

Advertisement

ಮಾರ್ಚ್‌ನಲ್ಲಿ ಸಂಜಯ್‌ ಮಾಂಜ್ರೇಕರ್‌ ಹೆಸರನ್ನು ಬಿಸಿಸಿಐ ವೀಕ್ಷಕ ವಿವರಣೆಕಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಕೆಲವು ದಿನಗಳ ಹಿಂದೆ ಮಾಂಜ್ರೇಕರ್‌ ಮರು ಮನವಿ ಸಲ್ಲಿಸಿದ್ದರು.

ಇದೀಗ ಐಪಿಎಲ್‌ ವಿವರಣೆಕಾರರ ಅಂತಿಮ ಯಾದಿಯಲ್ಲೂ ಮಾಂಜ್ರೇಕರ್‌ ಹೆಸರು ಕಾಣಿಸಿಕೊಂಡಿಲ್ಲ. ಇದರಿಂದ ಮತ್ತೆ ಕಮೆಂಟ್ರಿ ಟೀಮ್‌ನಲ್ಲಿ ಸ್ಥಾನ ಪಡೆಯುವ ಅವರ ಆಸೆಗೆ ಕಲ್ಲುಬಿದ್ದಿದೆ.

ಮೂಲಗಳ ಪ್ರಕಾರ, ಸಂಜಯ್‌ ಮಾಂಜ್ರೇಕರ್‌ ಭಾರತೀಯ ಕ್ರಿಕೆಟಿನ ಕೆಲವು ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ಆ ಆಟಗಾರರು ಬಿಸಿಸಿಐಗೆ ದೂರು ಸಲ್ಲಿಸಿದ್ದು ಇಲ್ಲಿ ಪರಿಗಣನೆಗೆ ಬಂದಿದೆ ಎನ್ನಲಾಗಿದೆ.

ಅವರು ಒಮ್ಮೆ ವಿರಾಟ್‌ ಕೊಹ್ಲಿಯ ಟೆಸ್ಟ್‌ ಬ್ಯಾಟಿಂಗ್‌ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು. ಹಾಗೆಯೇ ರವೀಂದ್ರ ಜಡೇಜ ಅವರಿಗೆ ಅವಹೇಳನ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next