Advertisement

Women’s T20 World Cup: ಭಾರತ ಬಳಗವನ್ನು ಪ್ರಕಟಿಸಿದ ಬಿಸಿಸಿಐ; ಸ್ಥಾನ ಪಡೆದ ಶ್ರೇಯಾಂಕ

05:55 PM Aug 27, 2024 | Team Udayavani |

ಮುಂಬೈ: ಕೆಲವೇ ವಾರಗಳಲ್ಲಿ ಆರಂಭವಾಗಲಿರುವ ವನಿತಾ ಟಿ20 ವಿಶ್ವಕಪ್‌ ಗೆ (Women’s T20 World Cup) ಭಾರತ ತಂಡವನ್ನು (BCCI)  ಪ್ರಕಟ ಮಾಡಲಾಗಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ ಬೆನ್ನಲ್ಲೇ ಟ್ರೋಫಿ ಗೆಲ್ಲುವ ಫೇವರೇಟ್‌ ತಂಡಗಳಲ್ಲಿ ಒಂದಾದ ಭಾರತ ತಂಡವನ್ನೂ ಪ್ರಕಟಿಸಲಾಗಿದೆ.

Advertisement

ಮಂಗಳವಾರ (ಆ.27) ಬಿಸಿಸಿಐ 15 ಜನರ ತಂಡವನ್ನು ಪ್ರಕಟಿಸಲಾಗಿದೆ. ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಅವರು ನಾಯಕಿಯಾಗಿ ಮುಂದುವರಿದಿದ್ದು, ಸ್ಮೃತಿ ಮಂಧನಾ (Smriti Mandhana)ಉಪ ನಾಯಕಿಯಾಗಿದ್ದಾರೆ.

ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯಾಸ್ತಿಕಾ ಭಾಟಿಯಾ ಭಾಗವಹಿಸುವಿಕೆಯು ಫಿಟ್ನೆಸ್ ಮೇಲೆ ಅವಲಂಬಿತವಾಗಿದೆ.

ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಮತ್ತು ರೇಣುಕಾ ಸಿಂಗ್ ಠಾಕೂರ್ ಭಾರತದ ವೇಗದ ಬೌಲಿಂಗ್ ಆಯ್ಕೆಗಳಾಗಿದ್ದರೆ, ಆಶಾ ಶೋಭಾನ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್ ಮತ್ತು ಸಜನಾ ಸಜೀವನ್ ಸ್ಪಿನ್‌ ವಿಭಾಗದಲ್ಲಿದ್ದಾರೆ. ಮತ್ತೊಂದೆಡೆ, ದಯಾಳನ್ ಹೇಮಲತಾ ಅವರು ಮುಖ್ಯ ತಂಡದಲ್ಲಿ ಬ್ಯಾಕ್ ಅಪ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದಾರೆ.

Advertisement

ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅವರಿಗೂ ಫಿಟ್ನೆಸ್‌ ಮೇಲೆ ಅವಲಂಭಿತವಾಗಿದೆ. ಕಳೆದ ಏಷ್ಯಾ ಕಪ್‌ ಕೂಟದ ಮೊದಲ ಪಂದ್ಯದ ವೇಳೆ ಶ್ರೇಯಾಂಕಾ ಗಾಯಗೊಂಡಿದ್ದರು.

ಈ ಬಾರಿಯ ವನಿತಾ ಟಿ20 ವಿಶ್ವಕಪ್‌ ಯುಎಇ ನಲ್ಲಿ ನಡೆಯಲಿದೆ. ಈ ಮೊದಲು ಕೂಟವು ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ ರಾಜಕೀಯ ಅಶಾಂತಿಯಿಂದಾಗಿ ಪಂದ್ಯಾವಳಿಯನ್ನು ಬಾಂಗ್ಲಾದೇಶದಿಂದ ಸ್ಥಳಾಂತರಿಸಲಾಯಿತು.

ಉಮಾ ಚೆಟ್ರಿ, ತನುಜಾ ಕನ್ವರ್ ಮತ್ತು ಸೈಮಾ ಠಾಕೂರ್ ಪ್ರಯಾಣಿಕ- ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ. ರಾಘ್ವಿ ಬಿಸ್ಟ್ ಮತ್ತು ಪ್ರಿಯಾ ಮಿಶ್ರಾ ಅವರು ಪ್ರಯಾಣಿಸದ ಮೀಸಲು ಆಟಗಾರರಾಗಿದ್ದಾರೆ.

ಇದು ಪಂದ್ಯಾವಳಿಯ ಒಂಬತ್ತನೇ ಆವೃತ್ತಿಯಾಗಿದ್ದು, ಅಕ್ಟೋಬರ್ 3ರಿಂದ 20 ರವರೆಗೆ ನಡೆಯಲಿದೆ. ಭಾರತವು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next