Advertisement
ಈ ವಾರ ದೊಡ್ಮನೆಯಲ್ಲಿ ಮುಖ್ಯವಾಗಿ ಧನರಾಜ್ – ರಜತ್ ನಡುವೆ ಕೈಕೈ ಮಿಲಾಯಿಸುವ ಹಂತದವರೆಗೂ ಪರಿಸ್ಥಿತಿ ಹೋಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಕಿಚ್ಚ ಖಡಕ್ ಆಗಿಯೇ ಮಾತನಾಡಿದ್ದಾರೆ.
Related Articles
Advertisement
ಈ ವಿಚಾರದ ಬಗ್ಗೆ ಮಾತನಾಡಿದ ಕಿಚ್ಚ “ಧನರಾಜ್ , ರಜತ್ ಹುಲಿ – ಸಿಂಹ ಆಗೋಕೆ ಹೋಗಿದ್ರಾ ಅಥವಾ ಮನುಷ್ಯ ಆಗಿರೋಕೆ ಹೋಗಿದ್ದೀರಾ. ಧನರಾಜ್ ನಿಮಗೆ ರಜತ್ ಅವರ ಕೆನ್ನೆ ಮುಟ್ಟಿ ಪ್ರೂವಕ್ ಮಾಡೋಕೆ ಏನು ಅವಶ್ಯಕತೆ ಇತ್ತಾ? ರಜತ್ ಅವರೇ ನಾಲಗೆ ಮೇಲೆ ನಿಗಾ ಇರಲಿ ಎಂದಿದ್ದಾರೆ. ಇದಕ್ಕೆ ರಜತ್ ಅವರು ಸರ್ ನಾನೇನು ಕೆಟ್ಟ ಮಾತನಾಡಿಲ್ಲ ಎಂದಿದ್ದಾರೆ. ಇದಕ್ಕೆ ಕಿಚ್ಚ ನಿಮ್ಮ ಪ್ರಕಾರ ಕೆಟ್ಟ ಮಾತು ಅಂದ್ರೇನು? ಅದನ್ನು ಹೇಳಿ ನಾವು ಪಟ್ಟಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ನಿಮಗೆ 5 ನಿಮಿಷ ಟೈಮ್ ಕೊಡುತ್ತೇನೆ ಫೈಟ್ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಶಿಕ್ಷೆ ಇದ್ದೇ ಇರುತ್ತದೆ ಎಂದಿದ್ದಾರೆ.
ಪಂಜರದೊಳಗೆ ರಜತ್ ಅವರನ್ನು ಹಾಕಲಾಗಿದೆ, ಅವರು ಎಲ್ಲೇ ಹೋದರು ಧನರಾಜ್ ಅವರೇ ಎಳೆದುಕೊಂಡು ಹೋಗಬೇಕು ಎಂದಿದ್ದಾರೆ.