ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11)ದ ಮೊದಲ ವಾರದ ಪಂಚಾಯ್ತಿ ನಡೆದಿದೆ. ಒಂದು ವಾರ ನಡೆದ ಆಟದಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದರ ಬಗ್ಗೆ ಕಿಚ್ಚ ಮಾತನಾಡಿದ್ದಾರೆ.
ವಾರವಿಡೀ ಸ್ವರ್ಗ – ನರಕದ ಸ್ಪರ್ಧಿಗಳ ನಡುವೆ ಸ್ನೇಹ, ಕಿತ್ತಾಟ, ರಾದ್ಧಾಂತ ಎಲ್ಲವೂ ನಡೆದಿದೆ. ಮಾತಿಗೆ ಮಾತು, ಏಟಿಗೆ ಎದುರೇಟು ಎಂಬಂತೆ ದೊಡ್ಮನೆಯ ಒಂದು ವಾರದ ಆಟದ ಸದ್ದು ಮಾಡಿದೆ.
ಜಗದೀಶ್ ಅವರ ಡಾಮಿನೇಟ್ ಆಟ ಮನೆಯೊಳಗಿನ ಬಹುತೇಕರಿಗೆ ಸಿಟ್ಟು ತರಿಸಿದ್ದು, ಅವರ ವರ್ತನೆಯಿಂದ ಕೆಲ ಸ್ಪರ್ಧಿಗಳು ಬೇಸತ್ತು ಹೋಗಿದ್ದಾರೆ.
ನಾನು ಆಚೆ ಹೋಗಲಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡುತ್ತೇನೆ ಎಂದು ಜಗದೀಶ್ ಕ್ಯಾಮೆರಾ ಮುಂದೆ ಹೇಳಿದ್ದರು.
ನನ್ನ ಮನೆಯ ನಾಯಿಗೆ ಒಂದು ಲಕ್ಷ ಖರ್ಚು ಮಾಡ್ತೇನೆ. ನನ್ನ ಯೋಗ್ಯತೆಯನ್ನು ನಾನು ಎಲ್ಲೋ ಹೇಳಿಕೊಳಲ್ಲ. ಇವತ್ತಲ್ಲ ನಾಳೆ ನಾನು ಸಿಎಂ ಅಭ್ಯರ್ಥಿ ಆಗುವವನು. ನಾನು ಇಲ್ಲಿಗೆ ಬರ್ತಾ ಇರಲಿಲ್ಲ. ನಿಮ್ಮ ತಂಡ ನನಗೆ ರಿಕ್ವೆಸ್ಟ್ ಮಾಡಿದ್ದು. ನಾನು ಆಗಿ ಬರಲಿಲ್ಲ ಎಂದು ಗುಡುಗಿದ್ದರು.
ಶಿಶಿರ್ , ಧನರಾಜ್, ರಂಜಿತ್, ಮಾನಸ, ಉಗ್ರಂ ಮಂಜು, ಧರ್ಮ ಕೀರ್ತಿರಾಜ್ ಅವರೊಂದಿಗೆ ವಾಗ್ವಾದ ನಡೆಸಿ ಮನೆಯಿಂದ ಅಚೆ ಹೋಗಲು ಸಿದ್ಧರಾಗಿದ್ದರು.
ಕಿಚ್ಚನಿಂದ ಜಗದೀಶ್‌ಗೆ ಖಡಕ್ ಕ್ಲಾಸ್..
ವಾರದ ಘಟನೆ ಬಗ್ಗೆ ಮಾತನಾಡಿದ ಕಿಚ್ಚ ಜಗದೀಶ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಗದೀಶ್ ಅವರೇ ನೀವು ಹೇಳಿ ನಮಗೆ ಶೋ ಹೇಗೆ ನಡೆಸಿಕೊಡಬೇಕು ಹಾಗೆ ನಡೆಸೋಣ ಎಂದಿದ್ದಾರೆ. ಇದಕ್ಕೆ ನನ್ನದು ಕರೆಕ್ಟ್ ಆಗಿದೆ ನನ್ನದೇನು ತಪ್ಪಿಲ್ಲ ಎಂದು ಜಗದೀಶ್ ರಿಪ್ಲೈ ಕೊಟ್ಟಿದ್ದಾರೆ. ಇದಕ್ಕೆ ಉತ್ತರಿಸಿದ ಕಿಚ್ಚ, ಖಡ ಖಂಡಿತವಾಗಿ ಕರೆಕ್ಟ್ ಆಗಿದೆ, ಇಲ್ಲದಿದ್ರೆ ನನ್ಮಗದು 11ನೇ ಸೀಸನ್ ದಾಟುತನ್ನೇ ಇರಲಿಲ್ಲ. ಕ್ಯಾಮೆರಾ ಮುಂದೆ ಬಿಗ್ ಬಾಸ್ ಚಾಲೇಂಜ್ ಮಾಡಿದ್ರಲ್ಲ. ದಟ್ ವಾಸ್ ದಿ ಜೋಕ್. ನಿಮ್ಮ ಜೋಕ್‌ಗೆ ನಾನು ಜೋರಾಗಿ ನಕ್ಕಿದ್ದೇನೆ. ಬಿಗ್ ಬಾಸ್ ಒಂದು ಅದ್ಭುತ ಶೋ. ಇಂಪ್ರೂವ್ ಮಾಡುವ ಸಾಧ್ಯತೆ ಈಗ ಇರುವ ನಿಮ್ಮ ಕೈಲಿದೆ ಸರ್. ಹಾಳು ಮಾಡೋಕೆ ನಿಮ್ಮ ಅಪ್ಪನ ಆಣೆಗೂ ಸಾಧ್ಯವಿಲ್ಲ ಎಂದಿದ್ದಾರೆ.
ಇದು ಬಿಗ್ ಬಾಸ್ ಮನೆ ಸರ್ ಪರಪ್ಪನ ಅಗ್ರಹಾರ ಜೈಲಲ್ಲ. ಇಲ್ಲಿ ರೂಲ್ಸ್ ಫಾಲೋ ಮಾಡಬೇಕು. ಇಲ್ಲಿ ಹೆಸರು ಮಾಡಿರುವವರು ಬಂದಿದ್ದಾರೆ ಎಂದು ಕಿಚ್ಚ ಖಡಕ್ ಆಗಿ ಹೇಳಿದ್ದಾರೆ.
ನಾನು ಕಾನೂನನ್ನು ಫಾಲೋ ಮಾಡುವವನು ಅಂಥ ಯಾವಾಗಲೂ ನೀವು ಹೇಳುತ್ತೀರಿ. ಆದರೆ ನೀವು ಇಲ್ಲಿ ಬ್ರೇಕ್ ಮಾಡಿದ್ದು ಕೂಡ ಕಾನೂನನ್ನೇ. ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದನ್ನು ನೀವು ಎಂಜಾಯ್ ಮಾಡಿದ್ದೀರಿ. ನೀವು ಒಂದು ಬಿಗ್ ಬಾಸ್ ಸಣ್ಣ ರೂಲ್ ಫಾಲೋ ಮಾಡಲ್ಲ ಅಂದ್ರೆ, ನೀವು ಸಿಎಂ ಆಗಿ ಹೇಗೆ ಕಾನೂನು ಪಾಲಿಸುತ್ತೀರಿ ಎಂದು ಕಿಚ್ಚ ಜಗದೀಶ್ ಅವರಿಗೆ ಹೇಳಿದ್ದಾರೆ.
ನಿಮಗೆ ಮೊದಲ ಎರಡು ದಿನ ಎಲ್ಲರೂ ಗೌರವ ಕೊಟ್ಟರು. ನೀವು ಹೇಳಿದೆಲ್ಲ ಕೇಳಿದ್ರು. ಜಗಳ ನಿಲ್ಸೋಕ್ಕೆ ಪ್ರಯತ್ನ ಪಟ್ಟರು. ಆದರೆ ಗೌರವ ಕೊಡುವಾಗ ಯದ್ದತದ್ವಾ ಏನೇನೂ ಮಾಡ್ಕೋ ಹೋಗುವಾಗ ಕೆಲ ಚೇಂಜಸ್ ಗಳಾಗುತ್ತವೆ. ಮಹಿಳೆಯರ ಬಗ್ಗೆ ಮಾತನಾಡುವಾಗ ಜಾಗ್ರತೆವಹಿಸಿ ಎಂದು ಕಿಚ್ಚ ಜಗದೀಶ್ ಅವರಿಗೆ ಕಿವಿ ಮಾತು ಹೇಳಿದರು.
ನಾನ್ನೊಬ್ಬ ಸ್ಟ್ರಾಂಗ್ ಸ್ಪರ್ಧಿ ಎಂದು ನನಗೆ ಗೊತ್ತಿದೆ. ಹಾಗಾಗಿ ಇಲ್ಲಿರುವವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಏನೇನೋ ಕಥ ಹೇಳಿ ನನ್ನನ್ನು ಇಲ್ಲಿರುವವರು ಬಕ್ರಾ ಮಾಡೋಕೆ ಪ್ರಯತ್ನಪಟ್ಟರು. ಇವರುಗಳ ಮುಖವಾಡವನ್ನು ಬಯಲು ಮಾಡೋದಕ್ಕೆ ನಾನಿದನ್ನು ಮಾಡಿದೆ. ನನ್ನಿಂದ ಹಲವು ತಪ್ಪಾಗಿದೆ ಅದಕ್ಕಾಗಿ ನಾನು ಕ್ಷಮೆನೂ ಕೇಳಿದ್ದೇನೆ ಎಂದು ಜಗದೀಶ್ ಕಿಚ್ಚನ ಮುಂದೆ ಹೇಳಿದ್ದಾರೆ.
ಬೇರೆ ಏನು ನಡೆಯಿತು ಇಂದಿನ ವಾರದ ಕಥೆಯಲ್ಲಿ..
ಇದಲ್ಲದೆ ಕಿಚ್ಚ ಅವರು ತಿವಿಕ್ರಮ್, ಮೋಕ್ಷಿತಾ, ಅನುಷಾ, ಧರ್ಮ ಕೀರ್ತಿರಾಜ್, ಹಂಸಾ ಅವರ ಹೆಸರು ಹೇಳಿ ಕ್ಯಾಮೆರಾ ಕ್ಲೋಸ್ ಅಪ್ ಮಾಡಲು ಹೇಳಿದ್ದಾರೆ. ನೀವೆಲ್ಲ ಮನೆಯಲ್ಲಿ ಕಾಣುತ್ತಿಲ್ಲ ಎಂದು ಪರೋಕ್ಷವಾಗಿ ಈ ಸ್ಪರ್ಧಿಗಳ ಆಟದ ವೈಖರಿ ಬಗ್ಗೆ ಮಾತನಾಡಿದ್ದಾರೆ.
ಇನ್ನು ಮನೆಯ ಮೊದಲ ಕ್ಯಾಪ್ಟನ್ ಆಗಿರುವ ಹಂಸಾ ಅವರಿಗೆ ಅಧಿಕಾರ ಬಳಕೆಯ ಪಾಠ ಮಾಡಿ, ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಕಿಚ್ಚ ಅವರು ತರಾಟೆಗೆ ತೆಗೆದುಕೊಂಡರು. ಕ್ಯಾಪ್ಟನ್ ಆಗಿ ನೀವು ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಪ್ಪುಗಳಾಗಿವೆ ಎಂದು ಕಿಚ್ಚ ಹೇಳಿದ್ದಾರೆ.
ಎಲಿಮಿನೇಷನ್‌ನಿಂದ ಪಾರಾದವರು ಯಾರು..:
ಬಿಗ್ ಬಾಸ್ ಮನೆಯಲ್ಲಿ ಈ ವಾರ 9 ಮಂದಿ ನಾಮಿನೇಟ್ ಆಗಿದ್ದರು. ಜಗದೀಶ್ ಅವರು ಮನೆಯಿಂದ ಆಚೆ ಹೋಗಬೇಕೆಂದು ಬಹುತೇಕ ಸ್ಪರ್ಧಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದರಲ್ಲಿ ಭವ್ಯಾ ಅವರು ಮೊದಲ ಸ್ಪರ್ಧಿಯಾಗಿ ಎಲಿಮಿನೇಷನ್ ತೂಗುಗತ್ತಿನಿಂದ ಪಾರಾಗಾದ್ದಾರೆ. ಗೌತಮಿ, ,ಮಾನಸ ಅವರು ಇಂದಿನ ಸಂಚಿಕೆಯಲ್ಲಿ ಸೇಫ್ ಆಗಿದ್ದಾರೆ