ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರಪೂರ್ತಿ ಮನೆಮಂದಿಯದೇ ಸಂಭ್ರಮ – ಸಡಗರ. ಸ್ಪರ್ಧಿಗಳು ತಮ್ಮವರನ್ನು ನೋಡಿ ಖುಷ್ ಆಗಿದ್ದಾರೆ. ಅವರೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ಧನರಾಜ್ ಅವರ ಮನೆಯಿಂದ ಅವರ ಪತ್ನಿ ಹಾಗೂ ದೊಡ್ಡ ಕುಟುಂಬವೇ ಬಿಗ್ ಬಾಸ್ ಮನೆಗೆ ಬಂದಿದ್ದು, ಹುಲಿ ವೇಷ ಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಪತ್ನಿ ಧನರಾಜ್ ಅವರೊಂದಿಗೆ ತಮಾಷೆಯಾಗಿ ಮಾತನಾಡಿದ್ದು, ಆ ಬಳಿಕ ಧನರಾಜ್ ಅವರ ಪುಟ್ಟ ಮಗುವನ್ನು ತೋರಿಸಲಾಗಿದೆ. ಧನರಾಜ್ ಅವರು ತನ್ನ ಪುಟಾಣಿ ಹೆಣ್ಣು ಮಗುವನ್ನು ನೋಡಿ ಮುದ್ದಾಡಿದ್ದಾರೆ.
ಇನ್ನೊಂದು ಕಡೆ ಹಳ್ಳಿಹೈದ ಹನುಮಂತು ಅವರ ಪೋಷಕರು ದೊಡ್ಮನೆಯೊಳಗೆ ಬಂದಿದ್ದಾರೆ. ಅಪ್ಪ – ಅಮ್ಮನನ್ನು ನೋಡಿ ಖುಷ್ ಆಗಿ ಭಾವುಕರಾಗಿದ್ದಾರೆ.
ಚೈತ್ರ ಕುಂದಾಪುರ ಅವರ ಕಿರಿಯ ಸಹೋದರಿ ಹಾಗೂ ಅವರ ತಾಯಿ ದೊಡ್ಮನೆಗೆ ಬಂದಿದ್ದಾರೆ. ನಿಮಗೆ ನನ್ನ ಅಕ್ಕ ಬಾಸ್, ನನಗೆ ನೀವು ಬಾಸ್ ಎಂದು ಚೈತ್ರಾ ಅವರ ಸಹೋದರಿ ರಜತ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ನನ್ನ ಮಗಳಿಗೆ ನೀವೆಲ್ಲ ಇಷ್ಟರವರೆಗೆ ಕಳಪೆ ಕೊಟ್ಟಿದ್ದೀರಿ. ಅವಳ ನಮಗೆ ಉತ್ತಮನೇ, ಯಾವತ್ತೂ ಉತ್ತಮನೇ ಎಂದು ಚೈತ್ರಾ ಅವರ ತಾಯಿ ಮಗಳ ಕೊರಳಿಗೆ ಉತ್ತಮದ ಪದಕವನ್ನು ಹಾಕಿದ್ದಾರೆ. ತಾಯಿಯ ಮಾತನ್ನು ಕೇಳುತ್ತಲೇ ಚೈತ್ರಾ ಕಣ್ಣೀರಿಟ್ಟಿದ್ದಾರೆ.
ನನ್ನ ತಂಗಿ ಹುಟ್ಟಿದಾಗ ನಮಗೆ ನಿಜವಾದ ಚಾಲೆಂಜ್ ಶುರುವಾಗುತ್ತದೆ. ಮೂರನೇಯದು ಹೆಣ್ಣಾಯಿತು ಅಂಥ. ಅಪ್ಪ – ಅಮ್ಮನಿಗೆ ಹೆಣಕ್ಕೆ ಬೆಂಕಿ ಇಡೋಕ್ಕೂ ಗಂಡು ದಿಕ್ಕಿಲ್ಲ ಎಂದು ಜನರು ಹೇಳಿದ ಮಾತನ್ನು ನೆನಪು ಮಾಡಿಕೊಂಡು ಚೈತ್ರಾ ಭಾವುಕರಾಗಿದ್ದಾರೆ.