Advertisement

30 ಕಲಾವಿದರಿಗೆ ಬಯಲಾಟ ಪ್ರಶಸ್ತಿ ಪ್ರದಾನ

12:51 AM Feb 28, 2019 | |

ಬಾಗಲಕೋಟೆ: ರಾಜ್ಯದ ವಿವಿಧ ಜಿಲ್ಲೆಗಳ 30 ಹಿರಿಯ ಕಲಾವಿದರಿಗೆ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ನವನಗರದದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎಚ್‌.ಆರ್‌. ನಿರಾಣಿ, ಅಕಾಡೆಮಿ ಅಧ್ಯಕ್ಷ ಡಾ. ಶ್ರೀರಾಮ ಇಟ್ಟನ್ನವರ, ರಿಜಿಸ್ಟ್ರಾರ್‌ ಶಶಿಕಲಾ ಹುಡೇದ ಹಾಗೂ ವಿವಿಧ ಗಣ್ಯರು, ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 2017-18 ಹಾಗೂ 2018-19ನೇ ಸಾಲಿನ ಒಟ್ಟು 30 ಜನ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಗೌರವ ಪ್ರಶಸ್ತಿಯನ್ನು ತಲಾ ಐವರಿಗೆ, ತಲಾ 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಯಿತು. ವಾರ್ಷಿಕ ಪ್ರಶಸ್ತಿಗೆ ತಲಾ 10 ಜನ ಹಿರಿಯ ಕಲಾವಿರದನ್ನು ಆಯ್ಕೆ ಮಾಡಿದ್ದು, ತಲಾ 25 ಸಾವಿರ ನಗದು ಹಾಗೂ ಪ್ರಶಸ್ತಿ ನೀಡಿ
ಗೌರವಿಸಲಾಯಿತು.

2017-18ನೇ ಸಾಲಿನಲ್ಲಿ ಬೆಳಗಾವಿಯ ರಾಯಬಾಗ ತಾಲೂಕಿನ ಖೇಮಲಾಪುರದ ಸಂತ್ರಾಮ ಬಡಿಗೇರ (ಕಲಾ ಪ್ರಕಾರ: ಶ್ರೀಕೃಷ್ಣ ಪಾರಿಜಾತ), ಬಾಗಲಕೋಟೆಯ ಬೀಳಗಿ ತಾಲೂಕಿನ ಚಿಕ್ಕ ಹಂಚಿನಾಳ ಗ್ರಾಮದ ಶಿವಪ್ಪ ಕಾಟಪ್ಪನವರ(ಸಣ್ಣಾಟ), ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಬೊಮ್ಮಾಲಾಟಪುರದ ಶಂಕ್ರಪ್ಪ (ಸೂತ್ರಗೊಂಬೆಯಾಟ), ಮಂಡ್ಯದ ಕೋಣನೂರು ನಾಗರಾಜ (ತೊಗಲು ಗೊಂಬೆಯಾಟ), ಬಳ್ಳಾರಿಯ ಕಾರೇಕಲ್ಲು ವೀರಾಪುರದ ರಂಗಾರೆಡ್ಡಿ ವೈ. (ದೊಡ್ಡಾಟ) ಅವರಿಗೆ ಪ್ರದಾನ ಮಾಡಿದರು.

ಇದೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಬೆಳಗಾವಿ ರಾಮದುರ್ಗ ತಾಲೂಕಿನ ಹೊಸಕೋಟಿಯ ಪಾರವ್ವ ತಳಗೇರಿ (ಶ್ರೀಕೃಷ್ಣ ಪಾರಿಜಾತ), ಬಾಗಲಕೋಟೆ ರಬಕವಿ-ಬನಹಟ್ಟಿ ನಾವಲಗಿ ಗ್ರಾಮದ ಚಂದ್ರವ್ವ ಗುಡ್ಲಮನಿ (ಶ್ರೀಕೃಷ್ಣ ಪಾರಿಜಾತ) ಹಾಗೂ ಹೊಸೂರ ಗ್ರಾಮದ ಕಲ್ಲಪ್ಪ ತೇಲಿ (ಸಣ್ಣಾಟ) ಬೆಳಗಾವಿಯ ಬಸಪ್ಪ ಕಲ್ಲಪ್ಪ ಕುಂಬಾರ (ಶ್ರೀಕೃಷ್ಣ ಪಾರಿಜಾತ) ಮತ್ತು ಬಸವರಾಜ ಖೇಮಲಾಪುರ (ಸಣ್ಣಾಟ), ಹಾಸನದ ಎಸ್‌ .ನಾಗರಾಜ(ತೊಗಲುಗೊಂಬೆಯಾಟ), ಚಿಕ್ಕಮಗಳೂರಿನ ತರರೀಕೆರೆ ತಾಲೂಕಿನಹಾದಿಕೇರಿಯ ಎಚ್‌.ಬಿ.ರಮೇಶ (ದೊಡ್ಡಾಟ),ದಾವಣಗೆರೆಯ ಜಗಳೂರು ತಾಲೂಕಿನಹಿರೇಮಲ್ಲನಹೊಳೆ ಗ್ರಾಮದ ಎಚ್‌.ಆರ್‌.ರೇವಣ್ಣ (ದೊಡ್ಡಾಟ), ಧಾರವಾಡದ ತಿಮ್ಮರೆಡ್ಡಿ ಭೀಮರೆಡ್ಡಿ ಮೇಟಿ (ದೊಡ್ಡಾಟ), ಕಲಬುರಗಿ ಚಿತ್ತಾಪುರ ತಾಲೂಕಿನ ಕೊಲ್ಲೂರ ಗ್ರಾಮದ ರಾಮಲಿಂಗ ಪೇಟಿ (ದೊಡ್ಡಾಟ) ಅವರಿಗೆ ಪ್ರಶಸ್ತಿ ನೀಡಲಾಯಿತು.

2018ನೇ ಸಾಲಿನಲ್ಲಿ ವಿಜಯಪುರದ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಗುರಪಾದಯ್ಯ ಧಾರವಾಡಮಠ (ಶ್ರೀಕೃಷ್ಣ ಪಾರಿಜಾತ), ಶಿವಮೊಗ್ಗದ ಪರಿಸರ ಶಿವರಾಮ್‌ (ಸಣ್ಣಾಟ), ಬೆಳಗಾವಿಯ ಗೋಕಾಕ ತಾಲೂಕಿನ ಅರಭಾವಿ ಗ್ರಾಮದ ಕೆಂಪ್ಪ ಹರಿಜನ (ಸಣ್ಣಾಟ), ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಎರೇನಹಳ್ಳಿ ಗ್ರಾಮದ ಬಿ.ಮಾರಣ್ಣ (ದೊಡ್ಡಾಟ), ಗದಗದ ಚನ್ನಬಸವಯ್ಯ ಕಾಡಸಿದ್ದೇಶ್ವರ ಮಠ (ದೊಡ್ಡಾಟ) ಹಾಗೂ ವಾರ್ಷಿಕ ಪ್ರಶಸ್ತಿಯನ್ನು ವಿಜಯಪುರದ ಬಸವನಬಾಗೇವಾಡಿ ತಾಲೂಕಿನ ತಳೇವಾಡ ಗ್ರಾಮದ ಶ್ರೀಶೈಲ ಹನಮಂತ ಬಳೂತಿ (ಶ್ರೀಕೃಷ್ಣ ಪಾರಿಜಾತ), ಬಾಗಲಕೋಟೆ ಮುಧೋಳ ತಾಲೂಕಿನ ದಾದನಟ್ಟಿ ಗ್ರಾಮದ ಸಿದ್ದಪ್ಪ ಕುರಿ (ಶ್ರೀಕೃಷ್ಣ ಪಾರಿಜಾತ), ಬೆಳಗಾವಿಯ ದಸ್ತಗೀರಸಾಬ್‌ ಮೌಲಾಶೇಖ್‌ (ಶ್ರೀಕೃಷ್ಣ ಪಾರಿಜಾತ), ವಿಜಯಪುರದ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಶಾಂತಾಪ್ಪ ಎಂ.ಕೋಟಿ(ಸಣ್ಣಾಟ), ಬೀದರದ ಮಹಾದೇವಮ್ಮ (ಸಣ್ಣಾಟ), ರಾಮನಗರದ ಲಕ್ಷ್ಮಮ್ಮ (ತೊಗಲುಗೊಂಬೆಯಾಟ) ಹಾವೇರಿಯ ಶಂಕರರ ಅರ್ಕಸಾಲಿ(ದೊಡ್ಡಾಟ), ಕೊಪ್ಪಳದ ಮುರನಾಳ ಗ್ರಾಮದ ಶಂಕ್ರಪ್ಪ ಕೊಪ್ಪಳ (ದೊಡ್ಡಾಟ), ರಾಯಚೂರಿನ ಸಣ್ಣಬಾಬು (ದೊಡ್ಡಾಟ), ಯಾದಗಿರಿಯ ಬಸನಗೌಡ ಮಾಸ್ತರ ತಳವಾರಗೇರಿ (ದೊಡ್ಡಾಟ) ಅವರಿಗೆ ಪ್ರದಾನ ಮಾಡಲಾಯಿತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next