Advertisement

ಬಸವತತ್ವ ಪಾಲಕರಿಗೆ ತೋಂಟದಶ್ರೀ ಶಕ್ತಿ

11:35 AM Oct 22, 2018 | Team Udayavani |

ಶಹಾಬಾದ: ವೈಚಾರಿಕ ಸ್ವಾಮೀಜಿ ಎಂದೇ ಹೆಸರುವಾಸಿಯಾದ ಗದಗಿನ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳು 12ನೇ ಶತಮಾನದ ಶರಣರ ಬಸವ ತತ್ವಗಳನ್ನು ರಾಜ್ಯದಲ್ಲೆಡೆ ಪ್ರಚಾರ ಮಾಡುತ್ತ ಬಸವತತ್ವದ ಪಾಲಕರಿಗೆ ಮಹಾನ್‌ ಚೇತನ ಶಕ್ತಿಯಾಗಿದ್ದರು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯ ವಿಶ್ವನಾಥ ಹಡಪದ ಹೇಳಿದರು.

Advertisement

ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನಗರದ ಹಳೆಶಹಾಬಾದನ ವೀರಭದ್ರೇಶ್ವರ ಮಂದಿರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವಶರಣರ ವಚನಗಳಿಂದ ಪ್ರಭಾವಿತರಾಗಿದ್ದ ಶ್ರೀಗಳು ಹರಿಜನ ಕೇರಿ, ತಾಂಡಾಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿದ್ದರು. ಬಸವಧರ್ಮ ದೀಕ್ಷೆ ನೀಡುವ ಮೂಲಕ ಕರ್ನಾಟಕದಾಚೆಗೂ ಬಸವ ತತ್ವವನ್ನು ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದೀನ ದಲಿತರ, ಶೋಷಿತರ, ನೊಂದವರ ಸೇವೆಯೇ ಲಿಂಗಪೂಜೆ ಎಂದು ಸಿದ್ದಲಿಂಗ ಶ್ರೀಗಳು ಭಾವಿಸಿದ್ದರು. ಕನ್ನಡ ನಾಡು ನುಡಿಗೆ ದಕ್ಕೆ ಬಂದಾಗ ಅದರ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು. ಗೋಕಾಕ ಚಳವಳಿಗೆ ಮುನ್ನುಡಿ ಬರೆದ ಅವರು ಕನ್ನಡದ ಸ್ವಾಮಿಗಳು ಎಂದೇ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಯಾದಗಿರಿ, ಬಳ್ಳಾರಿ, ಚಿಂಚೋಳಿ, ಆಳಂದ ಸೇರಿದಂತೆ ಅನೇಕ ಕಡೆಗಳಲ್ಲಿ ವಸತಿ ನಿಲಯ ಸ್ಥಾಪನೆಗಾಗಿ ಮತ್ತು ರೈತರಿಗಾಗಿ 3 ಸಾವಿರ ಎಕರೆ ಭೂಮಿ ದಾನ ಮಾಡಿದ ಮಾಡಿದ್ದರು. ಅಲ್ಲದೇ ಕಪ್ಪತಗುಡ್ಡದ ರಕ್ಷಣೆಗಾಗಿ ಶ್ರೀಗಳು ತೀವ್ರ ಹೋರಾಟ ಮಾಡಿದ್ದರು. ಸಮಾಜದ ಹಿತ ಹಾಗೂ ಬೆಳವಣಿಗೆ ದೃಷ್ಟಿಯಿಂದ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ ಅವರು ಇನ್ನಿಲ್ಲ. ಆದರೆ ಅವರ ಕೊಟ್ಟ ಮಾರ್ಗದರ್ಶನದಲ್ಲಿ ಸ್ವತಂತ್ರ ಧರ್ಮವಾಗುವುತನಕ ಹೋರಾಟ ಮಾಡಿ, ಅವರ ಕನಸನ್ನು ನನಸು ಮಾಡಲು ಅವಿರತ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ವೈಜನಾಥ ಹುಗ್ಗಿ, ಉಪಾಧ್ಯಕ್ಷ ರೇವಣಸಿದ್ದಪ್ಪ ಮುಸ್ತಾರಿ, ಬಸವರಾಜ ಕೆ. ಪಾಟೀಲ, ಮಹಾಂತೇಶ ಅವಂಟಿ, ಬಸಯ್ಯ ಪೂಜಾರಿ, ಕುಪೇಂದ್ರ ತುಪ್ಪದ, ಸಂತೋಷ ಪಾಟೀಲ, ಬಸವರಾಜ ತರನಳ್ಳಿ, ಬಸವರಾಜ ಶಹಾಪುರ, ಬಸವರಾಜ ಪಾಟೀಲ ನರಿಬೋಳಿ, ಮಹಾನಂದಿ ಪಾರಾ, ಶ್ರೀಶೈಲ ಬೆಳಮಗಿ, ಶಿವರಾಜ ಪಾರಾ, ಪಿಂಟು ಕುಂಬಾರ ಇದ್ದರು.

Advertisement

ಸಚಿವ ಡಿ.ಕೆ. ಶಿವಕುಮಾರ ಅವರ ಹೇಳಿಕೆಯನ್ನು ಅಷ್ಟೊಂದು ಗಂಭೀರವಾಗಿ ತೆಗೆಕೊಳ್ಳುವ ಅಗತ್ಯವಿಲ್ಲ. ಅವರ ವ್ಯಕ್ತಿತ್ವ ಹೇಗಿದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ. ಅಂದು ಪ್ರತ್ಯೇಕ ಧರ್ಮದ ನಿರ್ಧಾರ ಸಮಯದಲ್ಲಿ ಡಿ.ಕೆ. ಶಿವಕುಮಾರ ಅವರು ಇದ್ದರು. ಆಗ ತಕರಾರು ತೆಗೆಯದೇ ಒಪ್ಪಿಗೆ ಸೂಚಿಸಿದ್ದರು. ಈಗ ಚುನಾವಣೆ ಹತ್ತಿರ ಬಂದಾಗ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಧರ್ಮದಲ್ಲಿ ರಾಜಕಾರಣ ತರಬಾರದು ಎಂದು ಹೇಳಿ ಮತ್ತೆ ಅದೇ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಲ್ಲದೇ ಅದಕ್ಕೆ ಸಮರ್ಥನೆ ಮಾಡುತ್ತಿರುವ ಶಾಮನೂರು ಶಿವಶಂಕರಪ್ಪ ನಡೆ ಮುರ್ಖತನದ ಪರಮಾವಧಿ. ಇಂತಹ ಕಿಡಿಗೇಡಿಗಳು ಏನೇ ಹಳಿಕೆ ನೀಡಿದರೂ ಪ್ರತ್ಯೇಕ ಲಿಂಗಾಯತ ಧರ್ಮವಾಗುವ ತನಕ ಹೋರಾಟ ನಿಲ್ಲುವುದಿಲ್ಲ. 
ಜಾಗತಿಕ ಲಿಂಗಾಯತ ಮಹಾಸಭಾ, ಹಳೆ ಶಹಾಬಾದ¨

Advertisement

Udayavani is now on Telegram. Click here to join our channel and stay updated with the latest news.

Next