Advertisement

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

09:40 AM Nov 28, 2024 | Team Udayavani |

ನವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ, ಚೆನ್ನೈ ಕಿಂಗ್ಸ್‌ ಮಾಲಿಕ ಎನ್‌.ಶ್ರೀನಿವಾಸನ್‌ (N.Srinivasan )ವಿರುದ್ಧ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ (Lalit Modi) ಗಂಭೀರ ಆರೋಪ ಮಾಡಿದ್ದಾರೆ. 2ನೇ ಐಪಿಎಲ್‌ ಹರಾಜಿನ ವೇಳೆ ಬಿಡ್ಡಿಂಗ್‌ನಲ್ಲಿ ಶ್ರೀನಿವಾಸನ್‌ ಮೋಸ ಮಾಡಿದ್ದಾರೆ. ಅವರು ಖ್ಯಾತ ಮಾಜಿ ಆಲ್‌ರೌಂಡರ್‌ ಆ್ಯಂಡ್ರ್ಯೂ ಫ್ಲಿಂಟಾಫ್ (Andrew Flintoff) ಬೇಕೆಂದು ಹಠ ಹಿಡಿದಿದ್ದರು. ಅದರಿಂದಾಗಿ ನಾನೇ ಬೇರೆ ಫ್ರಾಂಚೈಸಿಗಳಿಗೆ ಫ್ಲಿಂಟಾಫ್ರನ್ನು ಖರೀದಿ ಮಾಡದಂತೆ ತಿಳಿಸಿದ್ದೆ ಎಂದು ಮೋದಿ ಆರೋಪಿಸಿದ್ದಾರೆ.

Advertisement

ಬಿಸಿಸಿಐ ಸದಸ್ಯರಾಗಿದ್ದ ಅವರು ಮಂಡಳಿಗೆ ಮುಳ್ಳಾಗಿದ್ದರು. ಅವರ ಮಾತು ಕೇಳದಿದ್ದರೆ ಐಪಿಎಲ್‌ ನಡೆಯಲು ಬಿಡುತ್ತಿರಲಿಲ್ಲ. ಅವರು ಹಲವು ಕೃತ್ಯವೆಸಗಿದ್ದಾರೆ. ನಾನು ಅಂಪೈರ್‌ಗಳನ್ನು ಫಿಕ್ಸ್‌ ಮಾಡಿದ್ದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಅವರೇ ಅದನ್ನು ಮಾಡಿದ್ದಾರೆ. ಅವರು ಅಂಪೈರ್‌ಗಳನ್ನು ಬದಲಿಸಬಹುದಿತ್ತು. ಆರಂಭದಲ್ಲಿ ನಾನದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಒಮ್ಮೆ ಚೆನ್ನೈ ಪಂದ್ಯಕ್ಕೆ ಅವರು ಚೆನ್ನೈ ಅಂಪೈರನ್ನೇ ನಿಗದಿ ಮಾಡಿದಾಗ ನನಗೆ ತಡೆದುಕೊಳ್ಳಲು ಆಗಲಿಲ್ಲ. ಇದು ಪರೋಕ್ಷವಾಗಿ ಫಿಕ್ಸಿಂಗ್‌ ಎಂದು ಪಾಡ್‌ಕಾಸ್ಟ್‌ ಸಂದರ್ಶನವೊಂದರಲ್ಲಿ ಮೋದಿ ಕಿಡಿಕಾರಿದ್ದಾರೆ.

ಚೆನ್ನೈ ಐಪಿಎಲ್‌ನಲ್ಲಿ 5 ಬಾರಿ ಚಾಂಪಿಯನ್‌ ಆಗಿದೆ, ಫಿಕ್ಸಿಂಗ್‌ ಆರೋಪದ ಹಿನ್ನೆಲೆಯಲ್ಲಿ 2 ಕೂಟಕ್ಕೆ ನಿಷೇಧಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next