Advertisement

ಬಸವಣ್ಣನವರ ಭಾವಚಿತ್ರ, ರಾಮಾನುಜರ ಸಾಮಾಜಿಕ ಕ್ರಾಂತಿ

11:47 AM May 03, 2017 | |

ಎಲ್ಲ ಅರ್ಥಗಳಲ್ಲೂ ರಾಮಾನುಜಾಚಾರ್ಯರು ಒಬ್ಬ ಕ್ರಾಂತಿಕಾರಿ ಧಾರ್ಮಿಕ ಮುಖಂಡರಾಗಿದ್ದರು. ಆದರೆ ಕೊನೆಗೂ ಅವರ ಸಮಾಜ ಸುಧಾರಣಾ ಕ್ರಮಗಳು ಹಾಗೂ ದಲಿತ ಸಮುದಾಯದ ಬಗೆಗಿನ ಅವರ ಕಾಳಜಿಯನ್ನು ಯಾರೂ ಗುರುತಿಸದೆ ಹೋದರು.

Advertisement

ರಾಜ್ಯದ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇರಿಸಲು ಸಿದ್ದರಾಮಯ್ಯ ಸರಕಾರ ನಿರ್ಧರಿಸಿರುವ ಸಂದರ್ಭದಲ್ಲೇ ಕಾಕತಾಳೀಯವೆಂಬಂತೆ ವಿಶಿಷ್ಟಾದ್ವೆ„ತ ಸಿದ್ಧಾಂತ ಪ್ರತಿಪಾದಕ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಮಾನುಜರು ಜೀವಿಸಿದ್ದು 1037ರಿಂದ 1137ರ ನಡುವಿನ ಅವಧಿಯಲ್ಲಿ. ತಮ್ಮ ಜೀವಿತದ ಮಹಣ್ತೀದ 12 ವರ್ಷಗಳನ್ನು ಅವರು ಕರ್ನಾಟಕದ ಧಾರ್ಮಿಕ – ಸಾಮಾಜಿಕ ಕ್ರಾಂತಿಗೆ ಧಾರೆಯೆರೆದಿದ್ದರು. ಅವರ ಜೀವಿತಕಾಲ ಬಸವಣ್ಣನವರಿಗಿಂತ ಮುಂಚಿನದು.
 
ಧರ್ಮಗುರು ಮಾತ್ರವಲ್ಲ, ಕ್ರಾಂತಿಕಾರಿ ಕೂಡ: ಈ ಸಂದರ್ಭದಲ್ಲಿ ಹೇಳಲೇಬೇಕಾದ ಮಾತೊಂದಿದೆ. ರಾಮಾನುಜಾಚಾರ್ಯರನ್ನು ದಕ್ಷಿಣ ಭಾರತದ ಬ್ರಾಹ್ಮಣ ಪಂಗಡವೊಂದರ ಧರ್ಮಗುರುವೆಂದಷ್ಟೇ ಪರಿಗಣಿಸಲಾ ಗುತ್ತಿರುವುದು ವಿಷಾದನೀಯ. ವಾಸ್ತವವಾಗಿ ರಾಮಾನುಜರು ಹಿಂದೂ ಧರ್ಮದ ಸಮಾಜ ಸುಧಾರಕರಲ್ಲೇ ಪ್ರಪ್ರಥಮರು. ಆ ಕಾಲದಲ್ಲೇ ಅವರು ಸಮಾಜದ ಅತ್ಯಂತ ಕೆಳವರ್ಗದ ಜನರ ಉತ್ಕರ್ಷಕ್ಕಾಗಿ ಶ್ರಮಿಸಿದವರು; ಅವರಿಗೆ ದೇವಾಲಯಗಳ ಪ್ರವೇಶಾವಕಾಶ ಕಲ್ಪಿಸಿದವರು. ಬಸವೇಶ್ವರರಂತೆಯೇ ರಾಮಾನುಜರು ಕೂಡ ಕರ್ನಾಟಕದಲ್ಲೇ ತಾಯಿಬೇರನ್ನು ಹೊಂದಿದ್ದ ಒಬ್ಬ ಧಾರ್ಮಿಕ ಮುಖಂಡರೂ ಸಮಾಜ ಸುಧಾರಕರೂ ಆಗಿದ್ದವರು. ಅವರ ಅನುಯಾಯಿಗಳು ಹಾಗೂ ಅವರ ಮಠಗಳು ಇಂದು ರಾಷ್ಟ್ರದ ಎಲ್ಲೆಡೆಗಳಲ್ಲಿ ಅಂತೆಯೇ ನೇಪಾಲದಲ್ಲಿ ಕೂಡ ಇರುವುದನ್ನು ಕಾಣಬಹುದು. 

ರಾಮಾನುಜರು ಹಿಂದೂ ಧರ್ಮ ಕಕ್ಷೆಯೊಳಗೇ ಇದ್ದುಕೊಂಡು ಅದರ ಸುಧಾರಣೆಗಾಗಿ ತಮ್ಮ ಕ್ರತುಶಕ್ತಿಯನ್ನು ಧಾರೆಯೆರೆ ದರು, ಅವರು ಹಿಂದೂ ಧರ್ಮದ ಪರಿಪ್ರೇಕ್ಷ್ಯದಿಂದಾಚೆ ಅಡಿಯಿಡಲಿಲ್ಲ; ಇನ್ನೊಂದು ಹೊಸ ಧರ್ಮವನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿರಲಿಲ್ಲ.

ದಲಿತ – ದಮನಿತೋದ್ಧಾರಕ: ರಾಮಾನುಜರು, ಬಸವೇಶ್ವರ ರಿಗಿಂತ ಒಂದು ಶತಮಾನದಷ್ಟು ಪೂರ್ವದಲ್ಲಿ, ಗಾಂಧೀಜಿಗಿಂತ ಒಂಬತ್ತು ಶತಮಾನಗಳಷ್ಟು ಮುಂಚಿತವಾಗಿ ದಲಿತರ ಹಾಗೂ ಸಮಾಜದ ಇತರ ದಮನಿತ‌ರ ಉದ್ಧಾರಕ್ಕಾಗಿ ದುಡಿದವರು. ಗಾಂಧೀಜಿಯವರು ದಲಿತರನ್ನು ಹರಿಜನರೆಂದು ಕರೆದರೆ, ರಾಮಾನುಜರು ಅವರನ್ನು “ತಿರುಕ್ಕುವಳತ್ತಾರ್‌’ ಅಥವಾ ಅತ್ಯಂತ ಶ್ರೇಷ್ಠ ವರ್ಗದ ಜನ ಎಂದರು. ಹೀಗಿದ್ದರೂ ಹೆಚ್ಚಿನ ದಲಿತ ನಾಯಕರು ಹಾಗೂ ಬುದ್ಧಿಜೀವಿಗಳು ರಾಮಾನುಜರ ದಲಿತೋದ್ಧಾರ ಪ್ರಯತ್ನಗಳನ್ನು ಮರೆತುಬಿಟ್ಟಿದ್ದಾರೆ. ಇವರಲ್ಲಿ ಕೆಲವರು ದಲಿತರನ್ನು ಗಾಂಧೀಜಿ ಹರಿಜನರೆಂದು ಕರೆದಿರುವುದು ತಪ್ಪು ಎಂದು ವಾದಿಸುತ್ತಿದ್ದಾರೆ. ನಮ್ಮ ತಲೆಮಾರಿನ ಅಥವಾ ನಮ್ಮ “ತಾತನ ಕಾಲ’ದ ಹರಿಜನೋದ್ಧಾರ ವ್ರತಸ್ಥರಾಗಿದ್ದ ಆರ್‌. ಗೋಪಾಲಸ್ವಾಮಿ ಅಯ್ಯರ್‌ ಅಥವಾ ಮೈಸೂರಿನ ಗಾಂಧಿಯೆಂದು ಖ್ಯಾತರಾಗಿದ್ದ ಮೈಸೂರಿನ ತಗಡೂರು ರಾಮಚಂದ್ರ ರಾವ್‌ ಅಥವಾ ದಕ್ಷಿಣ ಕನ್ನಡದ ಕುದ್ಮಲ್‌ ರಂಗರಾವ್‌ರಂಥವರ ತ್ಯಾಗ ಹಾಗೂ ಕೊಡುಗೆಗಳನ್ನು ಕೂಡ ಇಂದು ನೆನಪಿಸಿಕೊಳ್ಳುವವರಿಲ್ಲ. 

ಗೋಪಾಲಸ್ವಾಮಿ ಅಯ್ಯರ್‌ ಅವರನ್ನು ಕಂಡು ಕೇಳಿಲ್ಲದ ಇಂದಿನ ಅನೇಕರು, ಬೆಂಗಳೂರಿನಲ್ಲಿರುವ ಪರಿಶಿಷ್ಟ ಜಾತಿಯ ಹುಡುಗರ ಹಾಸ್ಟೆಲ್‌ ಅಯ್ಯರ್‌ ಬ್ರಾಹ್ಮಣನೊಬ್ಬನ ಹೆಸರಿನಲ್ಲಿರುವುದನ್ನು ಕಂಡು ಅಚ್ಚರಿಪಡುತ್ತಾರೆ. ಎಲ್ಲ ಸಮಾಜ ಸುಧಾರಕರಿಗೆ ಆಗಿರುವ ಗತಿಯೇ ರಾಮಾನುಜರಿಗೂ ಆಗಿದೆ; ಅವರೊಬ್ಬ ತಣ್ತೀ ಪ್ರತಿಪಾದಕ ಹಾಗೂ ಧರ್ಮ ಸಿದ್ಧಾಂತ ಪ್ರವರ್ತಕ ಎಂಬಷ್ಟಕ್ಕೇ ಅವರ ಹೆಸರು ಸೀಮಿತಗೊಂಡಿದೆ. 

Advertisement

ಸ್ವಾಮಿ ವಿವೇಕಾನಂದರು ಶಂಕರಾಚಾರ್ಯರು ಹಾಗೂ ರಾಮಾನುಜಾಚಾರ್ಯರ ವ್ಯಕ್ತಿತ್ವವನ್ನು° ಪರಸ್ಪರ ಹೋಲಿಸಿದ್ದನ್ನು   ಗಮನಿಸಿ: “ಶಂಕರರು ಅದ್ಭುತ ಧೀಮಂತಿಕೆಯಿದ್ದವರು… ಬಹುಶಃ ಅದ್ಭುತವೆಂದು ಬಣ್ಣಿಸಬಹುದಾದಷ್ಟು ಹೃದಯವಂತರಲ್ಲ. ರಾಮಾನುಜರ ಹೃದಯ ಹೆಚ್ಚು ವಿಶಾಲವಾಗಿತ್ತು. ಅವರು ದೀನದಲಿತರಿಗಾಗಿ ಮರುಗಿದವರು. ಅವರ ಬಗ್ಗೆ ಸಹಾನುಭೂತಿಯಿದ್ದವರು. ಇದೇ ವೇಳೆ ಅವರು ಆಧ್ಯಾತ್ಮಿಕ ಆರಾಧನೆಯ ಮಹಾದ್ವಾರವನ್ನು ಬ್ರಾಹ್ಮಣರಿಂದ ತೊಡಗಿ ದಲಿತರ ತನಕ ಎಲ್ಲರಿಗಾಗಿ ತೆರೆದಿಟ್ಟರು. 

ಭಾರತದ ನಿಮ್ನ ವರ್ಗಗಳ ಉತ್ಥಾನವೆಂಬ ಉದಾರ ಕಾಯಕಕ್ಕಾಗಿ ತಮ್ಮ ಜೀವಿತವನ್ನು ವಿನಿಯೋಗಿಸಿದ ರಾಮಾನುಜ, ಚೈತನ್ಯ ಹಾಗೂ ಕಬೀರರು ಈ ಅಭಿಯಾನದಲ್ಲಿ ಅತ್ಯುದ್ಭುತ ಫ‌ಲಶ್ರುತಿಗಳನ್ನು ಸಾಧಿಸಿದರು.’ ಇದೇ ವೇಳೆ ವಿವೇಕಾನಂದರು ಇವರುಗಳ ಬಗ್ಗೆ ತಮ್ಮಗಿದ್ದ ಆಕ್ಷೇಪವನ್ನೂ ವ್ಯಕ್ತಪಡಿಸುತ್ತಾರೆ. “ಸಾಮಾನ್ಯ ಜನತೆಯಲ್ಲಿ ಸಂಸ್ಕೃತ ಭಾಷೆಯನ್ನು ಪ್ರಚುರಪಡಿಸಲು ಇವರಿಗಾಗಲಿಲ್ಲ. ಇದರಿಂದ ಇವರುಗಳ ಸಾಧನೆಯ ಪ್ರಕ್ರಿಯೆ ಮಂದಗೊಂಡಿತು’. ವಿಚಿತ್ರ, ಆದರೂ ನಿಜ; ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಸಂಸ್ಕೃತಿ ಚಿಂತಕ ಎಂ. ಕರುಣಾನಿಧಿ ಅವರು ರಾಮಾನುಜಾಚಾರ್ಯರನ್ನು ಭಾರತದಲ್ಲಿ ಇದುವರೆಗೆ ಆಗಿಹೋಗಿರುವ ಜಾತ್ಯತೀತ ಹಾಗೂ ಸಾಮಾಜಿಕ ಕ್ರಾಂತಿಕಾರರಲ್ಲೇ ಶ್ರೇಷ್ಠ ವ್ಯಕ್ತಿ ಎಂದು ಕೊಂಡಾಡುತ್ತಾರೆ.

ರಾಮಾನುಜರು ದಲಿತರನ್ನು ದೇವಾಲಯ ಪ್ರವೇಶಿಸುವಂತೆ ಮಾಡಿದ ಘಟನೆ ನಡೆದುದು ಮೇಲುಕೋಟೆಯಲ್ಲಿ. ಚೆಲುವ ನಾರಾಯಣ ಸ್ವಾಮಿ ದೇವಾಲಯಕ್ಕೆ ಪ್ರವೇಶಿಸಲು ದಲಿತರಿಗೆ ಅನುವು ಮಾಡಿಕೊಟ್ಟ ರಾಮಾನುಜರು ಅವರ ಹಣೆಗಳ ಮೇಲೆ ತಿರುನಾಮವನ್ನೂ ಇರಿಸಿದರು. ಬಿಳಿಗಿರಿ ರಂಗನ ಬೆಟ್ಟದ ನಿವಾಸಿಗಳಾಗಿದ್ದ ಸೋಲಿಗರು ರಂಗನಾಥ ಸ್ವಾಮಿಯ ಒಕ್ಕಲೆನಿಸಿಕೊಂಡರು. ದಾಸಯ್ಯಗಳ ವರ್ಗವನ್ನು ಅಸ್ತಿತ್ವಕ್ಕೆ ತಂದವರು ಕೂಡ ರಾಮಾನುಜರೇ. ಹಾಗೆ ನೋಡಿದರೆ ರಾಮಾನುಜರು ವಿಶಿಷ್ಟಾದ್ವೆ„ತ ಸಿದ್ಧಾಂತದ ಮೂಲ ಸ್ಥಾಪಕರೇನಲ್ಲ. ಇದರ ಸ್ಥಾಪಕರು ಬೋಧಾಯನರು ಎನ್ನುವವರಿದ್ದಾರೆ. ತಮಿಳುನಾಡಿನ ಶ್ರೀ ಪೆರಂಬುದೂರಿನ ಸ್ಮಾರ್ತ ಬ್ರಾಹ್ಮಣರೊಬ್ಬರ ಪುತ್ರನಾಗಿ ಜನಿಸಿದ ರಾಮಾನುಜರು ವಿಶಿಷ್ಟಾದ್ವೆ„ತ ಸಿದ್ಧಾಂತವನ್ನು ಪ್ರಚಾರ ಪಡಿಸಿದರು. ಅದ್ವೆ„ತಿಗಳು ತಮ್ಮನ್ನು ತಮಿಳುನಾಡಿನಿಂದ ಹೊರಗಟ್ಟಿದ ಸಂದರ್ಭದಲ್ಲಿ ತಮ್ಮ ರಕ್ಷಣೆ ಮಾಡಿದ ಕೆಳವರ್ಗದ ಜನತೆಯ ಕಲ್ಯಾಣವನ್ನವರು ತಮ್ಮ ಜೀವಿತದ ಪರಮೋದ್ದೇಶವನ್ನಾಗಿಸಿಕೊಂಡರು. ರಾಮಾನುಜರಿಗೆ ಸ್ಫೂರ್ತಿ -ಪ್ರೇರಣೆ ನೀಡಿದ್ದ ಗುರು ಕಾಂಚೀಪೂರ್ಣರು ಓರ್ವ ಬ್ರಾಹ್ಮಣೇತರರಾಗಿದ್ದರು; ಅವರಿಗೆ ಸಂಸ್ಕೃತ ಗೊತ್ತಿರಲಿಲ್ಲ. ಮುಂದೆ ತಮ್ಮ ಪತ್ನಿ ಕಾಂಚೀಪೂರ್ಣರನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲವೆಂಬ ಕಾರಣಕ್ಕಾಗಿ ಆಕೆಯಿಂದ ದೂರ ಸರಿಯಲೂ ರಾಮಾನುಜರು ಹಿಂಜರಿಯಲಿಲ್ಲ. 

ರಾಮಾನುಜರಿಗಿಂತ ಮುಂಚೆ ತಮಿಳುನಾಡಿನಲ್ಲಿ ವಿಶಿಷ್ಟಾದ್ವೆ„ತ ಪರಂಪರೆಯ ಗುರುಗಳು (ಆಳ್ವಾರ್‌ಗಳು) ಆಗಿ ಹೋಗಿದ್ದರು. ಈ 12 ಮಂದಿ ಆಳ್ವಾರ್‌ಗಳ ಪೈಕಿ ಒಬ್ಬರನ್ನು ಬಿಟ್ಟರೆ ಉಳಿದವರು ಬ್ರಾಹ್ಮಣೇತರರಾಗಿದ್ದರು, ಇನ್ನೊಬ್ಬರು ಚೋರ ವೃತ್ತಿಯ ಕುಟುಂಬದಿಂದ ಬಂದಿದ್ದವರು. ಹೀಗೆ ಹಿಂದೂ ಧಾರ್ಮಿಕ ಚಿಂತನೆಯ ಅಂಶಗಳನ್ನು ಸಾಮಾಜಿಕ ಉತ್ಕರ್ಷಕ್ಕಾಗಿ ಅರ್ಥಪೂರ್ಣವಾಗಿ ಬಳಸಿಕೊಂಡ   ಕ್ರಾಂತಿದರ್ಶಿ  ರಾಮಾನುಜರು. ತಾವು ಕರ್ನಾಟಕದಲ್ಲಿ ನೆಲೆಸಿದ್ದ ಕಾಲದಲ್ಲಿ ಇಲ್ಲಿದ್ದ ಮುಸ್ಲಿಮ್‌ ಸಮುದಾಯದ ಉತ್ಥಾನಕ್ಕಾಗಿಯೂ ಶ್ರಮಿಸಿದರು. ಮುಸ್ಲಿಂ ಮಹಿಳೆಯೊಬ್ಬಳನ್ನು ದೇವತೆಯ ಸ್ಥಾನಕ್ಕೆ ಎತ್ತರಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಈಕೆಯ ಭಾವಚಿತ್ರ ಮೇಲುಕೋಟೆ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾನ ಪಡೆದಿದೆ ಎನ್ನಲಾಗಿದೆ. ಎಲ್ಲ ಅರ್ಥಗಳಲ್ಲೂ ಅವರು ಒಬ್ಬ ಕ್ರಾಂತಿಕಾರಿ ಧಾರ್ಮಿಕ ಮುಖಂಡರಾಗಿದ್ದರು. ಆದರೆ ಅವರ ಸುಧಾರಣಾ ಕ್ರಮಗಳು ಹಾಗೂ ದಲಿತ ಸಮುದಾಯದ ಬಗೆಗಿನ ಅವರ ಕಾಳಜಿಯನ್ನು ಯಾರೂ ಗುರುತಿಸದೆ ಹೋದರು.

ಸರಕಾರಿ ಕಚೇರಿಗಳ ಗೋಡೆಯಲ್ಲಿ ಬಸವಣ್ಣ: ರಾಜ್ಯ ಸರಕಾರದ ಆದೇಶದನ್ವಯ ಈಗ ಬಸವಣ್ಣನವರ ಭಾವಚಿತ್ರ ಸರಕಾರಿ ಕಚೇರಿಗಳ ಗೋಡೆಗಳನ್ನು ಅಲಂಕರಿಸಲಿದೆ. ಅನನ್ಯ ರೀತಿಯಲ್ಲಿ ಸಾಮಾಜಿಕ ಕ್ರಾಂತಿಯ ಬೀಜಗಳನ್ನು ಬಿತ್ತಿದ ಬಸವಣ್ಣನವರ ಭಾವಚಿತ್ರ ಸರಕಾರಿ ನೌಕರರಿಗೆ ಇನ್ನಷ್ಟು ಸಮರ್ಥ ಸೇವೆಗೈಯಲು, ಇನ್ನಷ್ಟು ಕರ್ತವ್ಯಪ್ರಜ್ಞೆ ಬೆಳೆಸಿಕೊಳ್ಳಲು ಹಾಗೂ ಇನ್ನಷ್ಟು ಪ್ರಾಮಾಣಿಕರಾಗಲು ಸ್ಫೂರ್ತಿ – ಪ್ರೇರಣೆ ನೀಡಲಿ ಎಂದು ಹಾರೈಸೋಣ. ಸರಕಾರಿ ಕಚೇರಿಗಳ ಗೋಡೆಗಳ ಮೇಲೆ ಇದುವರೆಗೆ ರಾರಾಜಿಸುತ್ತ ಬಂದಿರುವ ಮಹಾತ್ಮಾ ಗಾಂಧಿಯವರಂಥ ರಾಷ್ಟ್ರೀಯ ನಾಯಕರ ಭಾವಚಿತ್ರಗಳು ನಮ್ಮ ಸರಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ಪರಾಯಣರ ಮೇಲಾಗಲಿ, ಕಳಪೆ ಸಾಮರ್ಥ್ಯದ ಪ್ರಭೃತಿಗಳ ಮೇಲಾಗಲಿ ಪ್ರಭಾವ ಬೀರುವಲ್ಲಿ ವಿಫ‌ಲವಾಗಿವೆ. 

ಖಾಸಗಿ ಅಧ್ಯಯನ ಸಂಸ್ಥೆಯೊಂದು ನಡೆಸಿರುವ ಸರ್ವೇ ಪ್ರಕಾರ, ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯವೆಂಬ ಹಣೆಪಟ್ಟಿಯನ್ನು ಸಂಪಾದಿಸಿದೆ. ಇದಕ್ಕೆ ಪ್ರಸಕ್ತ ಸರಕಾರವೊಂದೇ ಕಾರಣ ಎನ್ನಬೇಕಾಗಿಲ್ಲ. ಹಿಂದಿನ ಸರಕಾರಗಳು ಕೂಡ ಮಾಡಿದ್ದು ಇದನ್ನೇ. ಬಸವೇಶ್ವರರ ಭಾವಚಿತ್ರವನ್ನು ಕಚೇರಿಗಳಲ್ಲಿ ಇರಿಸುವಂತೆ ಮುಖ್ಯಮಂತ್ರಿಗಳ ಆದೇಶ ಹೊರಡಿಸಿರುವ ಸಂದರ್ಭ ಯಾವುದೆಂದು ಗಮನಿಸಿದರೆ ಈ ಘೋಷಣೆಯ ಹಿಂದಿನ ಉದ್ದೇಶ ಅರ್ಥವಾದೀತು. ಸಿಎಂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ್ದಕ್ಕಾಗಿ ಆ ಕ್ಷೇತ್ರದ ಮತಾದರರಿಗೆ ಧನ್ಯವಾದ ಅರ್ಪಿಸುತ್ತ ಮಾಡಿರುವ ಘೋಷಣೆ ಇದು. ಅಲ್ಲಿ ವಿಜೇತರಾಗಿರುವ ಅಭ್ಯರ್ಥಿ, ಓರ್ವ ಲಿಂಗಾಯತ ಮಹಿಳೆ.

ಸಿದ್ದರಾಮಯ್ಯನವರೀಗ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್‌ನತ್ತ ಒಲಿಸಿಕೊಳ್ಳಲು ಹೊರಟಿದ್ದಾರೆಂದು ಕೆಲ ರಾಜಕೀಯ ವಿಶ್ಲೇಷಕರಿಗೆ ಅನ್ನಿಸಿದರೆ, ಅದು ಸಹಜವೇ.

– ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next