Advertisement

ಮಹಿಳೆಯರಿಗೆ ಅಗ್ರಸ್ಥಾನ ನೀಡಿದ್ದ ಬಸವಣ್ಣ

12:32 PM Apr 30, 2017 | Team Udayavani |

ಹುಣಸೂರು: ಬಸವಣ್ಣ  ಅಂದಿನ ಕಾಲದಲ್ಲೇ ಮಹಿಳೆಯರಿಗೆ ಅಗ್ರಸ್ಥಾನ ನೀಡಿದ್ದರು, ಅವರ ಜಾತ್ಯತೀತ ಪರಿಕಲ್ಪನೆ, ಜನಪರ, ಸಾಮಾಜಿಕ ಕಳಕಳಿ ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯವಾಗಿದ್ದು, ಎಲ್ಲರೂ ಅವರ ಚಿಂತನೆ ಕಿಂಚಿತ್ತಾದರೂ ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಕಾಣಬಹು ದಾಗಿದೆ ಎಂದು ಜಿಪಂ ಸದಸ್ಯೆ ಡಾ.ಪುಷ್ಪ ಅಮರನಾಥ್‌ ಹೇಳಿದರು.

Advertisement

ತಾಲೂಕಿನ ಬನ್ನಿಕುಪ್ಪೆ ಗ್ರಾಪಂ ವತಿಯಿಂದ ಆಯೋಜಿಸಿದ್ದ ಬಸವಜಯಂತಿ ಸಮಾರಂಭದಲ್ಲಿ ಮಾತನಾಡಿ, ಎಲ್ಲಾ ಮಹನೀಯರ ಜಯಂತಿಯನ್ನು ಅವರವರ ಜಾತಿಗೆ ಅನುಗುಣವಾಗಿ ಆಚರಿಸದೆ ಎಲ್ಲಾ ವರ್ಗದವರು ಅಚರಿಸಬೇಕು. ಅವರ ಚಿಂತನೆಗಳು, ವಚನಗಳು ಹಾಗೂ ತತ್ವಗಳನ್ನು ಈ ಸಮಾಜದ  ಎಲ್ಲಾ ನಾಗರಿಕರೂ ಅರಿಯಬೇಕು. ಬಸವಣ್ಣನವರು ಅಂದಿನ ಕಾಲದಲ್ಲೇ ಮಹಿಳೆಯರಿಗೆ ಅಗ್ರಸ್ಥಾನ ನೀಡಿದ್ದರು ಎಂದರು.

ಮಾದಹಳ್ಳಿ ಉಕ್ಕಿನಕಂತೆ ಮಠದ ಸಾಂಬಾ ಸದಾಶಿವ ಸ್ವಾಮೀಜಿ ಮಾತನಾಡಿ, ಇಂದಿನ ಯುವ ಪೀಳಿಗೆ ಬಸವಣ್ಣ, ಬುದ್ಧ, ಅಂಬೇಡ್ಕರ್‌ರಂತಹ ದಾರ್ಶನಿಕರ  ಆದರ್ಶಗಳನ್ನು ಅನುಸರಿಸಿದಲ್ಲಿ ಮಾತ್ರ ಉತ್ತಮ ಸಮಾಜ ಕಾಣಲು ಸಾಧ್ಯ, ಇಂತಹ ಮಹನೀಯರ ಜಯಂತಿ ಆಚರಿಸುವ ಮೂಲಕ ಇಂದಿನ ಪೀಳಿಗೆಗೆ ಅವರ ಧ್ಯೇಯೋದ್ದೇಶಗಳನ್ನು ತಿಳಿಸಬೇಕಿದೆ ಎಂದು ತಿಳಿಸಿದರು.

ತಾಪಂ ಇಒ ಕೃಷ್ಣಕುಮಾರ್‌ ಮಾತನಾಡಿ, ಜಾತಿ ವ್ಯವಸ್ಥೆಯನ್ನು ನಾಶ ಮಾಡಲು ಬಸವಣ್ಣನವರು ವಚನಗಳ ಮೂಲಕ ತಿಳಿಸಿಕೊಟ್ಟರೂ ಇಂದಿಗೂ ಜೀವಂತವಾಗಿರುವುದು ವಿಷಾದನೀಯ. ಇನ್ನಾದರೂ ಇಂತಹ ಮಹನೀಯರ ಆಶಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಗ್ರಾಪಂ ಪಿಡಿಒ ಕೆ.ಸೋಮಯ್ಯ ಬಸವಣ್ಣನವರ ವಚನಗಳನ್ನು ವಾಚಿಸಿದರು. ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ಮತ್ತು ಪೆನ್ಸಿಲ್‌ ಗಳನ್ನು ವಿತರಿಸಲಾಯಿತು. ಎಪಿಎಂಸಿ ಸದಸ್ಯ ಪ್ರಸನ್ನ, ಗ್ರಾಪಂ ಸದಸ್ಯರಾದ ರಮೇಶ್‌, ಉಮೇಶ್‌, ಮಹದೇವಸ್ವಾಮಿ, ಲಕ್ಷ್ಮಿ, ಕಾರ್ಯದರ್ಶಿ ಸಂತೋಷಕುಮಾರ್‌ ಹಾಗೂ ಸಿಬ್ಬಂದಿ, ಬಸವಬಳಗದ ಪದಾಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next