Advertisement
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿಯವರು ಮುಖ್ಯಮಂತ್ರಿ ಹುದ್ದೆ ಹೊರತಾಗಿ ಉಳಿದ ಎಲ್ಲ ಖಾತೆಗಳನ್ನು ಸಂಪುಟದ ಸಹೋದ್ಯೋಗಿಗಳಿಗೆ ಹಂಚಲಿ ಎಂದರು.
ಸಚಿವ ಸ್ಥಾನ ನೀಡಲಿ
ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಏನಾದರೊಂದು ಆಗಲಿ. ಸುಳ್ಳು ಆರೋಪ ಹೊರಿಸಿ ಕೆ.ಎಸ್. ಈಶ್ವರಪ್ಪ ಅವರಿಂದ ರಾಜೀ ನಾಮೆ ಪಡೆದಿದ್ದನ್ನು ಮರಳಿ ಕೊಡಲಿ. ಆರೋಪ ಮುಕ್ತರಾದ ಮೇಲೂ ಅವರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳಲಿ. ದೊಡ್ಡ ಖಾತೆಗಳು ಖಾಲಿ ಇದ್ದು, ಸಂಪುಟ ಪುನಾರಚನೆ ಸಂದರ್ಭ ಸಚಿವ ಸ್ಥಾನ ದಕ್ಕಿದರೆ ಜಿಲ್ಲಾ ಉಸ್ತುವಾರಿ ಆಗುತ್ತೇನೆ ಎಂದರು. ಹೊರಟ್ಟಿ ಸಭಾಪತಿ ಆಗಲಿ
ಜೆಡಿಎಸ್ ಪಕ್ಷದಲ್ಲಿದ್ದ ಬಸವರಾಜ ಹೊರಟ್ಟಿ ಅವರನ್ನು ಮೇಲ್ಮನೆ ಸಭಾಪತಿ ಮಾಡುವ ಭರವಸೆಯೊಂದಿಗೆ ಬಿಜೆಪಿಗೆ ಕರೆ ತರಲಾಗಿದೆ. ಅವರಿಗೆ ನೀಡಿರುವ ಭರವಸೆಯನ್ನು ಈಡೇರಿಸಲಿ. ಇಲ್ಲದಿದ್ದರೆ ತಪ್ಪು ಸಂದೇಶ ರವಾನಿಸಿದಂತಾಗಲಿದ್ದು, ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.
Related Articles
ಬದಲಾವಣೆಗೆ ಸ್ವಾಗತ
ಟಿಪ್ಪು ಎಕ್ಸ್‌ಪ್ರೆಸ್ ಹೆಸರಿನ ಮೈಸೂರು ರೈಲಿಗೆ ಒಡೆಯರ್ ಹೆಸರು ಇರಿಸಿದ್ದನ್ನು ಸ್ವಾಗತಿಸಿದ ಯತ್ನಾಳ್, ಒಡೆಯರ ವಂಶಸ್ಥರಿಗೆ ಮೋಸ ಮಾಡಿದ್ದ ಟಿಪ್ಪು ಹೆಸರನ್ನು ಪ್ರಮುಖ ರೈಲಿಗೆ ನಾಮಕರಣ ಮಾಡಿ ಸಿದ್ದರಾಮಯ್ಯ ಸರಕಾರ ಪ್ರಮಾದ ಮಾಡಿತ್ತು. ಒಡೆಯರ ಆಸ್ಥಾನದಲ್ಲಿ ನೌಕರನಾಗಿದ್ದ ಟಿಪ್ಪು ತಂದೆ ಹೈದರಲಿ ಒಡೆಯರಿಗೆ ಮೋಸ ಮಾಡಿದ್ದ ವಿಶ್ವಾಸ ಘಾತಕ. ಅಂಥ ವಂಚಕನ ಮಗನಾದ ಟಿಪ್ಪು ಹೆಸರನ್ನು ರೈಲಿಗೆ ಇರಿಸಿದ್ದು ಸಿದ್ದು ಹಾಗೂ ಯುಪಿಎ ಸರಕಾರ ಮಾಡಿದ ದೊಡ್ಡ ತಪ್ಪಾಗಿತ್ತು. ಅದನ್ನು ಪ್ರಧಾನಿ ನರೇಂದ್ರ ಮೋದಿ ಸರಿಪಡಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
Advertisement
ಬೀದರ್ ಗಲಾಟೆ ಸರಿಯಲ್ಲಬೀದರ್ನ ಪ್ರಾರ್ಥನಾ ಮಂದಿರದಲ್ಲಿ ನಡೆದ ಗಲಾಟೆ ಸರಿಯಲ್ಲ. ಈ ಹಿಂದೆ ಅಲ್ಲಿ ಅಂಬಾಭವಾನಿ ಮಂದಿರವಿತ್ತು. ಮಥುರಾ, ಅಯೋಧ್ಯೆ ಮಾದರಿಯಲ್ಲಿ ಅಲ್ಲೂ ನಿತ್ಯ ಪೂಜೆ ನಡೆಯಲೇಬೇಕು ಎಂದು ಯತ್ನಾಳ್ ಹೇಳಿದರು. ಕಾಂಗ್ರೆಸ್ ಭ್ರಷ್ಟರನ್ನು ಪ್ರಧಾನಿ ಬೀದಿಗೆ ತಂದಿದ್ದಾರೆ
ಭ್ರಷ್ಟರನ್ನೆಲ್ಲ ರಸ್ತೆಗೆ ತಂದು ಬಿಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ಭಾರತ ಜೋಡೋ ಹೆಸರಿನಲ್ಲಿ ಕಾಂಗ್ರೆಸ್ ಹಾಗೂ ಗಾಂ ಧಿ ಪರಿವಾರ ಬೀದಿಗೆ ಬಂದಿರುವುದು ಬಿಜೆಪಿ ದೊಡ್ಡ ಸಾಧನೆ ಅಲ್ಲವೇ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಎಂದೂ ನೆಲದ ಮುಖವನ್ನೇ ನೋಡದ, ಮಣ್ಣಿನ ಮೇಲೆ ಕಾಲಿಡದ ಹಾಗೂ ಹವಾ ನಿಯಂತ್ರಿತ ಕೋಣೆ ಬಿಟ್ಟು ಹೊರಬಾರದ ಗಾಂ ಧಿ ಪರಿವಾರದ ಸೋನಿಯಾ, ರಾಹುಲ್ ಅವರನ್ನು ಬಿಜೆಪಿ ಬೀದಿಗೆ ತಂದಿದೆ. ಭಾರತ ಜೋಡೋ ಹೆಸರಿನಲ್ಲಿ ಬೀದಿಗೆ ಬಂದಿರುವ ನೆಹರೂ ಪರಿವಾರ ಹುಚ್ಚು ಹಿಡಿದವರಂತೆ ರಸ್ತೆಯಲ್ಲಿ ಕುಣಿಯುತ್ತಿದೆ ಎಂದು ವ್ಯಂಗ್ಯವಾಡಿದರು.