Advertisement

ಗುಜರಾತ್ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟ ಶೀಘ್ರ ಪುನಾರಚನೆ: ಬಸನಗೌಡ ಪಾಟೀಲ್ ಯತ್ನಾಳ

11:59 AM Nov 17, 2021 | Team Udayavani |

ಕಲಬುರಗಿ: ಬಿಟ್ ಕಾಯಿನ್ ದಲ್ಲಿ ಮುಖ್ಯಮಂತ್ರಿ ಬದಲಾಗುವುದಿಲ್ಲ ಅನಿಸುತ್ತಿದೆ.‌ ಆದರೆ ಗುಜರಾತ್ ಮಾದರಿಯಲ್ಲಿ ರಾಜ್ಯ ಸಂಪುಟ ಪುನಾರಚನೆಯಾಗಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸುಳಿವು ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಹಿಂದೆ ಅಂಜನಾ ತೋರಿಸಿ ಗಂಟ ಅದ ಅಂತ ಹೇಳುತ್ತಿದ್ದರು.‌ ಅದೇ ರೀತಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ನಡೆದಿದೆ.‌ ಬಹುಮುಖ್ಯವಾಗಿ ಪ್ರಧಾನಿ ಮೋದಿ ಯಾವುದೇ ಹಗರಣಗಳನ್ನು ಸಮರ್ಥಿಸೋದಿಲ್ಲ.‌ ತಮ್ಮ  ಪ್ರಕಾರ ಬಿಜೆಪಿಯವರು ಯಾರು ಈ ಹಗರಣದಲ್ಲಿ ಇಲ್ಲ ಎಂದರು.

ಕಾಂಗ್ರೆಸ್ ನವರು ಆರೋಪ ಮಾಡ್ತಿದ್ದಾರೆ ಆದರೆ ಯಾವುದೇ ದಾಖಲೆ ನೀಡುತ್ತಿಲ್ಲ. ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಸ್ಪೀಡ್ ಓಡ್ತಾ ಇದ್ದಾರೆ ಎಂದರು.

ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುದಾಗಿ ಬಿಜೆಪಿ ವರಿಷ್ಠ ಅಮೀತ ಶಹಾ ಹೇಳಿದ್ದಾರೆ.  ಸಿಎಂ‌ ಬದಲಾಗಲ್ಲ.ಆದರೆ ಹಿರಿಯ ಸಚಿವರು ಪಕ್ಷದ ಸಂಘಟನೆಗೆ ತೊಡಗಿ ಎರಡನೇ ಸಾಲಿನವರು ಮಂತ್ರಿಯಾಗಲಿದ್ದಾರೆ ಎಂದು ಶಾಸಕ ಯತ್ನಾಳ ಹೇಳಿದರು.

ತಾವಂತು ಮಂತ್ರಿಯೇ ಆಗ್ತಾ ಇಲ್ಲ ಎಂದಾದ ಮೇಲೆ ಸಿಎಂ ಆಗೋದು ಎಲ್ಲಿಂದ ಬರುತ್ತದೆ. ತಾವಂತು ಯಾವ ಭಾಗ್ಯದ ಸಲುವಾಗಿ ಯಾರ ಮನಿಗೂ ಹೋಗೋದಿಲ್ಲಾ ಎಂದು ಪುನರುಚ್ಚರಿಸಿದರು.‌

Advertisement

ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಲಿ. ‌ಆದರೆ ಪೀಠಗಳಿಂದ ಈಗ ಹೆಚ್ಚಿನ ಉಪಯೋಗ ಸಮಾಜಕ್ಕಿಲ್ಲ.‌ ಎಷ್ಟು ಪೀಠಗಳನ್ನಾದ್ರು ಮಾಡಲಿ, ತಮ್ಮ ಹೋರಾಟ ನಿಲ್ಲೋದಿಲ್ಲ. ಪೀಠಗಳು ಹೆಚ್ಚಾಗೋದರಿಂದ ಯಾವ ಪ್ರಯೋಜನ ಇಲ್ಲ ಎಂದು ಯತ್ನಾಳ ತಿಳಿಸಿದರು. ‌

ಬರುವ ಚುನಾವಣೆಯಲ್ಲಿ ತಮಗೆ ನೇತೃತ್ವ ಕೊಟ್ಟರೆ ಮುಂದಿನ ಬಾರಿ ರಾಜ್ಯದಲ್ಲಿ 130 ಸ್ಥಾನ ಗೆಲ್ಲುತ್ತೇವೆ. ತಾವು ಹಾಗೂ ಸೋಮಣ್ಣ ಹಾನಗಲ್ ಗೆ ಹೋಗಿದ್ದರೆ ಹಾನಗಲ್ ನಲ್ಲಿ ಕೂಡಾ ಗೆಲ್ತಿದ್ದೆವು.

ಹಾನಗಲ್ ಸೋಲಿಗೆ ಯಾರು ಕಾರಣ ಅಂತ ಗೊತ್ತಿದೆ ಅವರು ಆತ್ಮಾವಲೋಕನ ಮಾಡಕೊಳ್ಳಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next