Advertisement
ದಿಲ್ಲಿಯಲ್ಲಿ ಪತ್ರಕರ್ತರ ಜತೆ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಡಿಸೆಂಬರ್ ಇತ್ಯರ್ಥ’ದ ಬಗ್ಗೆ ಹೇಳಿಕೆ ನೀಡಿದ್ದರೆ, ಎರಡು ದಿನಗಳ ಹಿಂದೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಯಾಗಿದ್ದ ಬಸನ ಗೌಡ ಯತ್ನಾಳ್ ಕೂಡ ಇದೇ ಧ್ವನಿಯಲ್ಲಿ ಮಾತ ನಾಡಿ ದ್ದಾರೆ. ಕುತೂಹಲಕಾರಿ ಸಂಗತಿ ಯೆಂದರೆ ಇವರಿಬ್ಬರೂ ನೀಡಿದ ಅನೌಪಚಾರಿಕ ಹೇಳಿಕೆಗೆ ಮುನ್ನವೇ ಬಿಜೆಪಿಯಲ್ಲಿ “ಡಿಸೆಂಬರ್ ಚಳಿ’ ಪ್ರಾರಂಭವಾಗಿ ವಾರಗಳು ಕಳೆದಿವೆ.
Related Articles
ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿ ಪ್ರಾಯ ಇರುವ ಬಗ್ಗೆ ಹಾಗೂ ತಮ್ಮ ನಾಯಕತ್ವದ ವಿರುದ್ಧ ಅಲೆ ಇರುವುದನ್ನು ಒಪ್ಪಿಕೊಂಡಿದ್ದಾರೆ. “ಕೆಲವು ಹಿರಿಯ ನಾಯಕರಿಗೆ ನನ್ನ ನಾಯಕತ್ವ ಒಪ್ಪಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಇಂದಲ್ಲ ನಾಳೆ ಪಕ್ಷದ ಹಿತಾಸಕ್ತಿಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳು ವಲ್ಲಿ ನಾನು ಯಶಸ್ವಿಯಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಸದ್ಯ ಹೈದರಾ ಬಾದ್ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗ ದಲ್ಲಿ ಪಕ್ಷವನ್ನು ಬಲಪಡಿಸುವುದು ನಮ್ಮ ಆದ್ಯತೆ ಎಂದಿದ್ದಾರೆ.
Advertisement
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಈ ಸರಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಕೇಂದ್ರ ಸರಕಾರದ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಇದು ಸಾಲದೆಂಬಂತೆ ರೈತರ ಜಮೀನಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಸರಕಾರದಲ್ಲಿ ಅನುದಾನವೇ ಇಲ್ಲ. ಇದರ ಬಗ್ಗೆ ಸ್ವತಃ ಆ ಪಕ್ಷದ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ, ಇನ್ನೊಂದೆಡೆ ಅಭಿವೃದ್ಧಿ ಚಟುವಟಿಕೆಗೆ ಹಣವೂ ಇಲ್ಲದಂತಾಗಿದೆ. ಹೀಗಾಗಿ 224 ಕ್ಷೇತ್ರಗಳ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಸ್ಥಳೀಯ ಕಾಮಗಾರಿಗಳಿಗೆ ಅನುದಾನ ಪಡೆಯಲು ಸಾಧ್ಯವಾಗುತ್ತಿಲ್ಲ.
ಹಾಲು ಮತ್ತು ಇಂಧನ ದರ ಏರಿಕೆ, ಮುದ್ರಾಂಕ ತೆರಿಗೆ ಏರಿಕೆ ಸಹಿತ ಈ ಸರಕಾರದ ಇತ್ತೀಚೆಗಿನ ಕೆಲವು ನೀತಿಗಳು ನೇರವಾಗಿ ಬಡವರ ಹಾಗೂ ರೈತರ ಮೇಲೆ ದುಷ್ಪರಿಣಾಮ ಬೀರಿವೆ ಎಂದು ಕಿಡಿಕಾರಿದರು. ಇದೇ ವೇಳೆ ಅಕ್ರಮ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದರ ಬಗ್ಗೆ ನಮಗೆ ವಿರೋಧ ಇಲ್ಲ. ಆದರೆ ಪಾನ್ ಕಾರ್ಡ್ ಹೊಂದಿದ್ದಾರೆಂಬ ಕಾರಣಕ್ಕೆ 12 ಲಕ್ಷ ಕಾರ್ಡ್‌ಗಳನ್ನು ರದ್ದು ಮಾಡಿರುವುದು ಅವೈಜ್ಞಾನಿಕ ಎಂದು ಕಿಡಿಕಾರಿದರು.
ಯಾಕೆ ಈ ಡಿಸೆಂಬರ್ ಚರ್ಚೆ?1. ಡಿಸೆಂಬರ್ ತಿಂಗಳಿನಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನ ಹಾಗೂ ಸಂಘಟನ ಪರ್ವ ಅಂತ್ಯ 2. ಈ ವೇಳೆ ಖಾಲಿ ಇರುವ ಬೂತ್, ಮಂಡಲ, ವಿವಿಧ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಪೂರ್ಣ 3. ಕ್ರಿಯಾಶೀಲರಲ್ಲದವರ ಬದಲಾವಣೆ, ಇದಕ್ಕೆ ಚುನಾವಣ ಪ್ರಕ್ರಿಯೆ ನಡೆಯಲಿದೆ 4. ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯೂ ಇದೇ ಸಂದರ್ಭ ನಡೆಯುವ ಬಗ್ಗೆ ಚರ್ಚೆ ಸಾಧ್ಯತೆ 5 . ಈ ಸಂದರ್ಭದಲ್ಲಿ ಪಕ್ಷದ ಬಣ ರಾಜಕಾರಣಕ್ಕೆ ಅಂತ್ಯ ಸಿಗುವ ನಿರೀಕ್ಷೆ “ನಮ್ಮಲ್ಲಿ ಎಷ್ಟು ಬಾಗಿಲುಗಳಿವೆ ಎಂಬುದು ಮುಖ್ಯವಲ್ಲ. ಮಾಧ್ಯಮದವರು ಹೇಳುವಂತೆ ಐದಾರು ಬಾಗಿಲುಗಳಿದ್ದರೂ ಡಿಸೆಂಬರ್‌ನಲ್ಲಿ ಒಂದೇ ಬಾಗಿಲು ಕಾರ್ಯನಿರ್ವಹಣೆ ಮಾಡಲಿದೆ. ಉಳಿದ ಬಾಗಿಲುಗಳು ಬಂದ್ ಆಗಲಿವೆ.” – ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ