Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯಪುರದಲ್ಲಿ ನಮ್ಮ ದೊಡ್ಡ ಹೋರಾಟ ನೋಡಿ ಅವರು 3 ತಂಡ ರಚಿಸಿದ್ದಾರೆ. ಅದಕ್ಕೇ ಡೇಟ್, ಏನೂ ಇಲ್ಲ. ಅವ್ವ-ಅಪ್ಪ ಇಲ್ಲ. ಯತ್ನಾಳ್ ಮಾಡಿದ್ದಾರೆ ಅಂಥ ಅವರದ್ದು ಒಂದು ಟೀಮ್ ಮಾಡಿದ್ದಾರೆ. ಅವರಿಗೆ ವಕ್ಫ್ ಬೋರ್ಡ್, ಮುಡಾ, ವಾಲ್ಮೀಕಿ ಕಾಳಜಿ ಇಲ್ಲ. ಅವರ ಕಾಳಜಿ ಏನಿದ್ದರೂ ಸಿಎಂ ಹೇಗೆ ಆಗಬೇಕು. ಅಪ್ಪನ ಹಾಗೇ ಹೇಗೆ ಲೂಟಿ ಮಾಡಬೇಕೆಂಬುದಷ್ಟೇ ಎಂದು ಹರಿಹಾಯ್ದರು.
ಜಮೀರ್ ಅಹ್ಮದ್ ಅಯೋಗ್ಯ:
ಸಚಿವ ಜಮೀರ ಅಹ್ಮದ್ ವಿರುದ್ಧ ಸಿ.ಪಿ.ಯೋಗೇಶ್ವರ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹ್ಮದ್ ತನ್ನನ್ನು ತಾನು ಏನೆಂದು ತಿಳಿದುಕೊಂಡಿದ್ದಾರೋ ಏನೋ? ಬಣ್ಣದ ಬಗ್ಗೆ ಮಾತನಾಡಿದ್ದಾರೆ. ಹಿಂದೂ ಧಾರ್ಮಿಕ ದತ್ತಿಯಿಂದ ಬಂದಂತಹ ಹಣದಲ್ಲಿ ಖಬರಸ್ತಾನ್ ಕಾಂಪೌಂಡ್ ಕಟ್ಟಿದ್ದಾರೆ. ಜಮೀರ್ ಅಹ್ಮದ್ ನಮ್ಮೆಲ್ಲರಿಗೂ ಸೈತಾನ್ ಅಂತಾರೆ. ಇಂತಹ ಅಯೋಗ್ಯನನ್ನು ಮುಖ್ಯಮಂತ್ರಿ ಮುಂದುವರಿಸಿದ್ದಾರೆ. ಹಿಂದೂಗಳು ಕೊಟ್ಟಂತಹ ಜಾಗ ವಕ್ಫ್ ಮಾಡಿಕೊಂಡಿದ್ದಾರೆ. ದೇವಸ್ಥಾನಕ್ಕಾಗಿ ಅವರ ದೇಣಿಗೆ ತಗೊಂಡರೆ ಆ ದೇವಸ್ಥಾನ ಕೂಡ ಅವರದೇ ಆಗುತ್ತದೆ ಎಂದರು.
Related Articles
Advertisement
ಎಂಎಲ್ಎ, ಮಂತ್ರಿ ಯಾರು ಬೇಡ: ಆಪರೇಷನ್ ಕಮಲ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಹತ್ತಿರ ಇದಕ್ಕೆ ಆಧಾರವೇನಿದೆ. ರೆಕಾರ್ಡಿಂಗ್ ಇದೆಯಾ? ಹಾಗೇನಾದರೂ ಇದ್ದರೆ ಅರೆಸ್ಟ್ ಮಾಡಲಿ. ನಮಗೆ ಕಾಂಗ್ರೆಸ್ ಸರ್ಕಾರದಲ್ಲಿರುವ ಎಂಎಲ್ಎ, ಮಂತ್ರಿ ಯಾರು ಬೇಡ. ಇವರನ್ನು ತಗೊಂಡು ನಾವು ಸರ್ಕಾರ ಮಾಡಿದರೆ ಮುಗಿಯಿತು. ಕಾಂಗ್ರೆಸ್ ಸರ್ಕಾರ ಈಗಲೇ ಪತನವಾದರೆ, ಬಿಜೆಪಿ 150 ಸೀಟ್ ಬರುತ್ತದೆ. ನಾವ್ಯಾಕೆ ಅಂತಹ ಹಲ್ಕಾ ಕೆಲಸ ಮಾಡುವುದು. ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡುವುದು ಬೇಡವೆಂದು ಪಕ್ಷದ ಹೈಕಮಾಂಡ್ ನಾಯಕರಿಗೆ ಹೇಳಿದ್ದೇನೆ. ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅವರಿಗೆ ಗಡಿಬಿಡಿ ಇದೆ ನಮಗಿಲ್ಲ. ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.