Advertisement
ಶುಕ್ರವಾರ ನಗರದಲ್ಲಿ ವಾರ್ಡ್ ನಂ22 ರಲ್ಲಿ ಏಕತಾ ನಗರದಲ್ಲಿ ಸಮುದಾಯ ಭವನದ ಕಾಮಗಾರಿ ಭೂಮಿ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೇ 2 ರ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಇನ್ನೂ ದೊಡ್ಡ ಮಟ್ಟದ ಸ್ಫೋಟ ಆಗಲಿದೆ. ರಾಜ್ಯದಲ್ಲಿ ಮೋದಿ ಅವರು ಬಯಸಿದ ಬಿಜೆಪಿ ಸರ್ಕಾರ ಇಲ್ಲ, ಅಪ್ಪ-ಮಕ್ಕಳ ಆಡಳಿತದ ಸರ್ಕಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
Related Articles
Advertisement
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ದವೂ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ, ಅರುಣ್ ಸಿಂಗ್ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯೇ ಹೊರತು ಸಿಎಂ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಉಸ್ತುವಾರಿ ಅಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಲಿ ಎಂದು ಕುಟುಕಿ, ಸಚಿವ ಸಂಪುಟದ ಎಲ್ಲಾ ಸಚಿವರ ಬದಲಾಗಿ ವಿಜಯೇಂದ್ರನಿಗೆ ಎಲ್ಲ ಖಾತೆ ನೀಡಿಬಿಡಿ ಹರಿಹಾಯ್ದರು.
ಇದನ್ನೂ ಓದಿ: ನನ್ನ ಗಮನಕ್ಕೆ ತರದೆ ಸಿಎಂ ಹಣ ಬಿಡುಗಡೆ ಮಾಡಿದ್ದಾರೆ: ‘ಪತ್ರ’ವನ್ನು ಸಮರ್ಥಿಸಿಕೊಂಡ ಈಶ್ವರಪ್ಪ
ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿದರ ವಿರುದ್ಧ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿರುವ ನಡೆ ಸರಿಯಾಗಿದೆ. ತಾಳ್ಮೆಗೂ ಮಿತಿ ಇದೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇನ್ನಾದರೂ ಅರಿಯಲಿ ಎಂದು ಆಗ್ರಹಿಸಿದರು.