Advertisement

ಕಳಪೆ ಪಡಿತರ ವಿತರಣೆಗೆ ತಡೆ

05:25 AM May 30, 2020 | Lakshmi GovindaRaj |

ಮಂಡ್ಯ/ಮದ್ದೂರು: ಕಳಪೆ ಪಡಿತರ ಆಹಾರ ಪದಾರ್ಥಗಳು ಪೂರೈಕೆಯಾಗಿದ್ದಲ್ಲಿ ಅದನ್ನು ವಿತರಣೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಗೋಪಾಲಯ್ಯ  ತಿಳಿಸಿದರು. ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಚಿತ್ರ ನಟ ಅಂಬರೀಶ್‌ 68ನೇ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲೆಯ 1600 ಆಶಾ ಕಾರ್ಯಕರ್ತೆಯರಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು.

Advertisement

ಸ್ವತಃ ನಾನೇ ಕೆಲವು ಕಡೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಳಪೆ ಅಕ್ಕಿ, ಗೋಧಿ ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳು ಪೂರೈಕೆ ಯಾಗಿರುವುದನ್ನು ಕಂಡಿದ್ದೇನೆ. ಆಹಾರ ಪದಾರ್ಥಗಳ ನ್ನು ನ್ಯಾಯಬೆಲೆ  ಅಂಗಡಿಗಳಿಗೆ ತಲುಪುವ ಮುನ್ನವೇ ಉಗ್ರಾಣದಲ್ಲೇ ಪರಿಶೀಲನೆ ನಡೆಸಬೇಕು. ಒಂದು ವೇಳೆ ಲೋಪ ಕಂಡುಬಂದಲ್ಲಿ ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಅಕ್ಕಿ ವಶ: ಕ್ರಮ: ಕೇರಳ ಗಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4 ಸಾವಿರ ಕ್ವಿಂಟಾಲ್‌ಗ‌ೂ ಹೆಚ್ಚು ಅಕ್ಕಿ ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದಟಛಿ ಕ್ರಮಕ್ಕೆ ಈಗಾಗಲೇ ಸೂಚಿಸಿದ್ದೇನೆ. ಲಾರಿ ಮಾಲೀಕರು  ಮತ್ತು ಸಂಬಂಧಿಸಿದವರ ವಿರುದಟಛಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದು, ಪೊಲೀಸರು ಈಗಾಗಲೇ ಮೊಕದ್ದಮೆ ದಾಖಲಿಸಿದ್ದಾರೆ ಎಂದರು.

ಕಾರ್ಡ್‌ ಇಲ್ಲದವರಿಗೂ ಪಡಿತರ: ಪಡಿತರ ಚೀಟಿ ಇಲ್ಲದವರಿಗೂ ಆಹಾರ ಪದಾರ್ಥಗಳನ್ನು ನೀಡುವಂತೆ ಸೂಚಿಸಿದ್ದೇನೆ. ಕೇವಲ ಆಧಾರ್‌ ಕಾರ್ಡ್‌ ಇದ್ದರೆ ಸಾಕು, ಒಬ್ಬರಿಗೆ 5 ಕೆ.ಜಿ, ಅಕ್ಕಿಯಂತೆ ನೀಡಲಾ ಗುವುದು ಎಂದರು.

ನಕಲಿ ಕಾರ್ಡ್‌ ಪತ್ತೆ ಮುಂದೂಡಿಕೆ: ಬಿಪಿಎಲ್‌ ನಕಲಿ ಕಾರ್ಡ್‌ಗಳ ಪತ್ತೆ ಹಚ್ಚುವ ಕಾರ್ಯವನ್ನು ಕೊರೋನಾ ಕಾರ ಣದಿಂದ ಮುಂದೂಡಲಾಗಿದೆ. ಸದ್ಯದ ಸಂಕಷ್ಟದಲ್ಲಿ ಜನರಿಗೆ ಆಹಾರ ಸಾಮಗ್ರಿ ಒದಗಿಸಬೇಕಾದ ಅನಿವಾರ್ಯತೆ ಇರುವುದರಿಂದ ಆಹಾರ ಪೂರೈಕೆಗೆ ಹೆಚ್ಚಿನ ಒತ್ತು  ನೀಡಲಾಗಿದೆ. ಹೊಸ ಕಾರ್ಡ್‌ ವಿತರಣೆಯನ್ನೂ ಮುಂದೂಡಲಾಗಿದೆ ಎಂದು ಹೇಳಿದರು.

Advertisement

ಸಮೀಕ್ಷಾ ಕಾರ್ಯದಿಂದ ತಡ: ಕೋವಿಡ್‌-19 ಹಿನ್ನಲೆ ಯಲ್ಲಿ ಘೋಷಣೆಯಾಗಿರುವ 1610  ಕೋಟಿ ರೂ. ಪ್ಯಾಕೇಜ್‌ ಹಣದ ಬಳಕೆಗೆ ಈಗಾಗಲೇ ಸಂಪುಟ ಸಭೆ ಯಲ್ಲಿ ಚರ್ಚೆಯಾಗಿದೆ. ಉತ್ತರ ಕರ್ನಾಟಕದ ಮೆಕ್ಕೆಜೋಳ ಬೆಳೆಗಾರರು, ಸವಿತಾ, ಮಡಿವಾಳ ಮತ್ತು ಆಟೋ ಚಾಲಕರಿಗೆ 5 ಸಾವಿರ ರೂ. ನೆರವು ನೀಡುವ ಸಂಬಂಧ  ಅರ್ಹರನ್ನು ಗುರುತಿಸುವುದರಿಂದ ತಡವಾಗಿದೆ ಎಂದರು.

ಈ ವೇಳೆ ಸಂಸದೆ ಸುಮಲತಾ, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟರಾದ ದೊಡ್ಡಣ್ಣ, ಅಭಿಷೇಕ್‌ ಅಂಬರೀಶ್‌, ಎಎಸ್ಪಿ ಡಾ.ಶೋಭಾರಾಣಿ,  ಉಪ ವಿಭಾಗಾಧಿಕಾರಿ ಸೂರಜ್‌, ಡಿವೈಎಸ್ಪಿ ಎಂ.ಜೆ.ಪೃಥ್ವಿ, ಜಿಪಂ ಸದಸ್ಯ ರಾಜೀವ್‌, ಜಿಪಂ ಮಾಜಿ ಅಧ್ಯಕ್ಷ ವಿವೇಕಾ ನಂದ, ಎಪಿಎಂಸಿ ಅಧ್ಯಕ್ಷ ಮಹೇಂದ್ರ, ಉಪಾಧ್ಯಕ್ಷ ಸ್ವಾಮಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪಣ್ಣೇ ದೊಡ್ಡಿ ರಘು,  ಅಂಬರೀಶ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್‌, ಹನ ಕೆರೆ ಶಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next