Advertisement

Barakuru: ಶ್ರೀ ಏಕನಾಥೇಶ್ವರೀ ದೇವಸ್ಥಾನ- ಫೆ. 17-19: ವಾರ್ಷಿಕ ಉತ್ಸವ

11:14 PM Feb 16, 2024 | Team Udayavani |

ಬ್ರಹ್ಮಾವರ: ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಫೆ. 17ರಿಂದ 19ರ ವರೆಗೆ ಆರನೇ ವರ್ಷದ ವರ್ಧಂತಿ ನಡೆಯಲಿದೆ.

Advertisement

17ರ ಅಪರಾಹ್ನ 3.30ಕ್ಕೆ ಬಾರ ಕೂರು ಸೇತುವೆ ಬಳಿಯಿಂದ ವಿವಿಧ ದೇವಾಡಿಗ ಸಂಘ ಹಾಗೂ ಇತರ ಸಂಘ-ಸಂಸ್ಥೆಗಳಿಂದ ಹಸುರು ಹೊರೆಕಾಣಿಕೆ ಮೆರವಣಿಗೆ, 18ರ ಸೂರ್ಯೋದ ಯದಿಂದ ಸೂರ್ಯಾಸ್ತದ ವರೆಗೆ ವಿವಿಧ ದೇವಾಡಿಗ ಸಂಘ ಹಾಗೂ ಇತರ ಭಜನ ತಂಡದವರಿಂದ ಭಜನೆ, 19ರ ಬೆಳಗ್ಗೆ ಸಾಮೂಹಿಕ ಚಂಡಿಕಾ ಯಾಗ, ತುಲಾಭಾರ ಸೇವೆ, ವಧೂವರರ ನೋಂದಣಿ ಮತ್ತು ಅನ್ವೇಷಣೆ, ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ವಿಶ್ವ ದೇವಾಡಿಗ ಮಹಾಮಂಡಲದ ಸಮಾಲೋಚನೆ ಸಭೆ ಜರಗಲಿದೆ.

ಮಾ. 12ರ ಬೆಳಗ್ಗೆ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ನವೋತ್ತರ ಶತ (109) ಬ್ರಹ್ಮಕುಂಭಾಭಿಷೇಕ, ಪ್ರಧಾನ ಹೋಮ, ಪೂರ್ಣಾಹುತಿ, ಮಹಾಪೂಜೆ ನಡೆಯಲಿದೆ ಎಂದು ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸ್ತ ನರಸಿಂಹ ಬಿ. ದೇವಾಡಿಗ ಉಡುಪಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಮುಖರಾದ ಗಣೇಶ್‌ ದೇವಾಡಿಗ ಅಂಬಲಪಾಡಿ, ವೇಣುಗೋಪಾಲ್‌ ಬ್ರಹ್ಮಾವರ, ವಿ. ರಾಜು ದೇವಾಡಿಗ ಕುಂದಾಪುರ. ವಿ. ದಿನೇಶ್‌ ದೇವಾಡಿಗ ಕುಂದಾಪುರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next