Advertisement

‘ಗಾಂಧೀಜಿ ಆದರ್ಶ ಪಾಲಿಸಿ’

12:39 PM Oct 03, 2018 | |

ಬಂಟ್ವಾಳ : ಗಾಂಧೀಜಿ ಆದರ್ಶ ಪಾಲನೆ ಅಗತ್ಯ. ಸತ್ಯ, ಅಹಿಂಸೆ ಮೂಲಕ ಅವರು ಗಳಿಸಿಕೊಟ್ಟ ಸ್ವಾತಂತ್ರ್ಯದ ಅರಿವು ಬೇಕಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರು ಹೇಳಿದರು.

Advertisement

ಅವರು ಅ. 2ರಂದು ಮಿನಿ ವಿಧಾನ ಸೌಧದಲ್ಲಿ ನಡೆದ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಉಪ ತಹಶೀಲ್ದಾರ್‌ ಗ್ರೆಟ್ಟಾ ಮಸ್ಕರೇನ್ಹಸ್‌, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ದಿವಾಕರ ಮುಗುಳ್ಯ, ನವೀನ್‌ ಬೆಂಜನಪದವು, ವಿಷಯ ನಿರ್ವಾಹಕ ವಿಶುಕುಮಾರ್‌, ಪತ್ರಕರ್ತ ಹರೀಶ್‌ ಮಾಂಬಾಡಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿರಾಸಕ್ತಿ ವಿಷಾದನೀಯ
ಗಾಂಧೀಜಿಯ ಅಧ್ಯಯನ ಕುರಿತು ಇಂದಿನ ಪೀಳಿಗೆ ಆಸಕ್ತಿ ವಹಿಸದಿರುವುದು ವಿಷಾದನೀಯ. ಮಾಜಿ ಪ್ರಧಾನಿ ದಿ| ಲಾಲ್‌ ಬಹದ್ದೂರ್‌ಶಾಸ್ತ್ರಿ  ಕೂಡ ಈ ದೇಶ ಕಂಡ ಅಪ್ರತಿಮ ಬುದ್ಧಿವಂತ ಪ್ರಧಾನಿ.
– ಪುರಂದರ ಹೆಗ್ಡೆ
ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next