Advertisement
ಬಂಟ್ವಾಳ ಮೂಲದ ಉದ್ಯಮಿ ಟಿ. ವರದರಾಜು ವಂಚನೆಗೊಳಗಾದವರು. ಅವರು ನೀಡಿದ ದೂರಿನ ಮೇರೆಗೆ ಸಿನೆಮಾ ನಿರ್ಮಾಪಕ ಅರುಣ್ ರೈ, ಅರ್ಜುನ್ ರೈ, ಕೆ.ಪಿ. ಶ್ರೀನಿವಾಸ್, ರಘು ಹಾಗೂ ಗೋವಿಂದಪ್ಪ ಅವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಮೋಸ ವಿವಿಧ ಆರೋಪಗಳಡಿ ನಗರದ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ವರದರಾಜು, ನಾನು ದಕ್ಷಿಣ ಕನ್ನಡ ಜಿÇÉೆಯ ವಿವಿಧೆಡೆ ಗೇರುಬೀಜ ಸಂಸ್ಕರಣ ಘಟಕ ನಡೆಸು ತ್ತಿದ್ದು, 2020ರಕೋವಿಡ್ನಿಂದಾಗಿ ವ್ಯವಹಾರದಲ್ಲಿ 25 ಕೋಟಿ ರೂ. ನಷ್ಟವಾಗಿತ್ತು. ಈ ಹಿನ್ನೆಲೆ ಯಲ್ಲಿ 2023ರ ಎಪ್ರಿಲ್ನಲ್ಲಿ ಎಲ್ಲ ಗೇರುಬೀಜ ಸಂಸ್ಕರಣ ಘಟಕಗಳನ್ನು ಮುಚ್ಚ ಲಾಗಿತ್ತು. ಇತ್ತೀಚೆಗೆ ಯಶವಂತಪುರದ ತಾಜ್ ಹೊಟೇಲ್ನಲ್ಲಿ ಮಂಗಳೂರು ಮೂಲದ ಅರುಣ್ ರೈ ಪರಿಚಯವಾಗಿ ದ್ದರು. ಈ ವೇಳೆ ನನ್ನ ವ್ಯವಹಾರದ ಬಗ್ಗೆ ತಿಳಿದುಕೊಂಡು ಮೊಬೈಲ್ ಸಂಖ್ಯೆ ಪಡೆದಿದ್ದರು. ಬಳಿಕ ಆಗಾಗ್ಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ನಾನು, ಕ್ರೀತೆ ಸಾಫ್ಟ್ವೇರ್, ಎ.ಆರ್. ಪ್ರಾಪರ್ಟಿಸ್, ಎ.ಆರ್. ಪಿಲ್ಮನ್ಸ್, ಎಪ್ರೋ ಆಕ್ಟ್ ಮ್ಯಾನೇಜ್ಮೆಂಟ್ ಸರ್ವಿಸಸ್, ವಿಯಾರ ವೆಂಚರ್ಸ್ ಎಂಬ ಕಂಪೆನಿಗಳ ಮಾಲಕನಾಗಿದ್ದೇನೆ. “ವೀರ ಕಂಬಳ’ ಮತ್ತು “ಜೀಟಿಗೆ’ ಎಂಬ ಸಿನೆಮಾಗಳನ್ನು ನಿರ್ಮಿಸಿದ್ದು, ಬಿಡುಗಡೆ ಹಂತದಲ್ಲಿವೆ. ವೀರ ಕಂಬಳ ಸಿನೆಮಾ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನನಗೆ 60 ಲಕ್ಷ ರೂ. ಲಾಭಾಂಶ ನೀಡಬೇಕಿದೆ. ನನ್ನ ಕಂಪೆನಿಗಳಲ್ಲಿ ನೀವು ಹೂಡಿಕೆ ಮಾಡಿದರೆ ಮಂಗಳೂರಿನ ಗೋದಾಮಿನಲ್ಲಿರುವ 40 ಕೋಟಿ ರೂ. ಮೌಲ್ಯದ ಗೊಡಂಬಿ ಮಾರಾಟ ಮಾಡಿ ನಿಮ್ಮ 25 ಕೋಟಿ ರೂ. ಸಾಲ ತೀರಿಸಲು ಸಹಾಯ ಮಾಡುತ್ತೇನೆ. ನಿಮ್ಮ ಇಂಡಸ್ಟ್ರೀಸ್ ಮುಂದುವರಿ ಸಲು ಸಹಾಯ ಮಾಡುವೆ ಎಂದು ಭರವಸೆ ನೀಡಿದ್ದರು.
Related Articles
Advertisement