Advertisement

ಆಕರ್ಷಕ ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ

09:08 AM Jan 05, 2019 | |

ಬಂಟ್ವಾಳ : ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ಕರೆಂಕಿ ಇದರ ದತ್ತ್ತು ಯೋಜನೆಯಡಿ ನಿರ್ಮಾಣಗೊಂಡಿರುವ ದಡ್ಡಲಕಾಡು ಸರಕಾರಿ ಹಿ.ಪ್ರಾ. ಶಾಲೆಯ ಮೇಲಂತಸ್ತಿನ ಕಟ್ಟಡದ ಉದ್ಘಾಟನ ಸಮಾರಂಭ ಜ. 5 ರಂದು ನಡೆಯಲಿದ್ದು, ಇದರ ಪೂರ್ವ ಭಾವಿಯಾಗಿ ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ ಶುಕ್ರವಾರ ನಡೆಯಿತು. ಮಣಿಹಳ್ಳ ಜಂಕ್ಷನ್‌ ಬಳಿ ಕೇಲ್ದೋಡಿ ಗುತ್ತು ಕೋಟಿ ಪೂಜಾರಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಶಾಲಾ ಮಕ್ಕಳು, ವಿದ್ಯಾರ್ಥಿಗಳ ಹೆತ್ತವರು ಹಾಗೂ ಶಿಕ್ಷಣಾಭಿಮಾನಿಗಳು ಮೆರವಣಿಯಲ್ಲಿ ಹೆಜ್ಜೆ ಹಾಕಿದರು. ಕೇರಳಚೆಂಡೆ ನಿನಾದ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ವಿದ್ಯಾರ್ಥಿಗಳ ಹೆತ್ತವರು, ಶಾಲಾಭಿಮಾನಿಗಳು ತರಕಾರಿ ಮತ್ತಿತರ ಸಾಮಗ್ರಿಗಳನ್ನು ಹೊರೆಕಾಣಿಕೆಗೆ ಸಮರ್ಪಿಸಿದರು.

ಈ ಸಂದರ್ಭ ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷ ಪ್ರಕಾಶ್‌ ಅಂಚನ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯ ಮೌರೀಸ್‌ ಡಿ’ಸೋಜಾ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್‌, ಕರೆಂಕಿ ಕ್ಷೇತ್ರದ ಪ್ರಧಾನ ಅರ್ಚನ ಗುರುರಾಜ್‌ ಭಟ್, ಪ್ರಮುಖರಾದ ಜಿ. ಆನಂದ, ಪೂವಪ್ಪ ಮೆಂಡನ್‌, ಪುರುಷೋತ್ತಮ ಅಂಚನ್‌, ನವೀನ್‌ ಸೇಸಗುರಿ, ವಿನೋದ್‌ ಕರೆಂಕಿ, ವಿಠಲ ಡಿ., ವಸಂತ ಗೌಡ ಹಳೆಗೇಟು ಮೊದಲಾದವರು ಉಪಸ್ಥಿತರಿದ್ದರು.

ಆಕರ್ಷಕ ದ್ವಾರ
ಕಾರ್ಯಕ್ರಮದ ಪ್ರಯುಕ್ತ ಹಾಕಲಾಗಿ ರುವ ಪೆನ್ಸಿಲ್‌ ಮತ್ತು ಕೈವಾರದ ಸ್ವಾಗತ ದ್ವಾರ ಜನರ ಗಮನ ಸೆಳೆಯುತ್ತಿದೆ. ಈ ಭಾಗದಿಂದ ಹೋಗುವ ಜನರು ತಮ್ಮ ಮೊಬೈಲ್‌ಗ‌ಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ದಡ್ಡಲಕಾಡು ಸರಕಾರಿ ಶಾಲೆಯ ಮೇಲಂತಸ್ತಿನ ಕಟ್ಟಡ ಜ. 5ರಂದು ಅಪರಾಹ್ನ 2.30ಕ್ಕೆ ಕರ್ನಾಟಕ ರಾಜ್ಯಪಾಲ ವಜೂ ಭಾೖ ರುಡಾ ಭಾೖ ವಾಲಾ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌, ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಸಂಸದ ನಳಿನ್‌ ಕುಮಾರ್‌ ಕಟೀಲು, ಹೈಕೋರ್ಟ್‌ ನ್ಯಾಯವಾದಿ ಎಸ್‌. ರಾಜಶೇಖರ್‌ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next